ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಮಾಸಿಕ ಸಭೆ: ವೆಬ್‌ಸೈಟ್‌ನಲ್ಲಿ ಲೈವ್‌ ನೀಡಲು ಚಿಂತನೆ

By Nayana
|
Google Oneindia Kannada News

ಬೆಂಗಳೂರು, ಜೂನ್ 4: ಬಿಬಿಎಂಪಿಯ ಮಾಸಿಕ ಸಭೆಯನ್ನು ವೆಬ್‌ಮೂಲಕ ನೇರವಾಗಿ ವೀಕ್ಷಿಸಬಹುದಾಗಿದೆ. ಸಂಸತ್ತಿನ ಅಧಿವೇಶನ ಮಾದರಿಯಲ್ಲಿ ನೇರವಾಗಿ ವೆಬ್‌ನಲ್ಲಿ ನೋಡುವ ಅವಕಾಶ ಲಭ್ಯವಾಗುವ ಸಾಧ್ಯತೆ ಇದೆ.

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ತಿಂಗಳಿಗೊಮ್ಮೆ ಮಾಸಿಕ ಸಭೆ ನಡೆಯಲಿದೆ. ಸಾರ್ವಜನಿಕರ ಸಮಸ್ಯೆಗಳು, ಪಾಲಿಕೆಯಿಂದ ಕೈಗೊಳ್ಳುವ ಯೋಜನೆ, ಕಾರ್ಯಕ್ರಮಗಳ ಬಗ್ಗೆ ಪಾಲಿಕೆ ಸದಸ್ಯರು ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುತ್ತಾರೆ.

ಮಳೆಗಾಲ ನಿಭಾಯಿಸಲು ಬಿಬಿಎಂಪಿ ಸಜ್ಜು: ಸೂಕ್ತ ಕ್ರಮಕ್ಕೆ ಆಯುಕ್ತರ ಸೂಚನೆಮಳೆಗಾಲ ನಿಭಾಯಿಸಲು ಬಿಬಿಎಂಪಿ ಸಜ್ಜು: ಸೂಕ್ತ ಕ್ರಮಕ್ಕೆ ಆಯುಕ್ತರ ಸೂಚನೆ

ಆದರೆ, ಸಭಾಂಗಣದಲ್ಲಿರುವ ಸಾರ್ವಜನಿಕರ ಗ್ಯಾಲರಿಯಲ್ಲಿ ಕೇವಲ 80 ರಿಂದ 100 ಮಂದಿ ಮಾತ್ರ ಕುಳಿತುಕೊಳ್ಳಬಹುದಾಗಿದೆ. ಹಾಗಾಗಿ ಸಭೆಯ ಸಂಪೂರ್ಣ ಕಲಾಪವನ್ನು ವೆಬ್‌ಸೈಟ್‌ ಮೂಲಕ ಸಾರ್ವಜನಿಕರಿಗೆ ತಲುಪಿಸುವ ಚಿಂತನೆ ನಡೆಸಿದೆ.

BBMP council monthly meeting is on live soon

ದೇಶದಲ್ಲಿರುವ ವಿವಿಧ ಮಹಾನಗರ ಪಾಲಿಕೆಗಳಲ್ಲಿ ಕೈಗೊಂಡಿರುವ ಉತ್ತರ ಕಾರ್ಯಗಳನ್ನು ಬಿಬಿಎಂಪಿಯಲ್ಲಿ ಅಳವಡಿಕೆ ಮಾಡಿಕೊಳ್ಳುವ ಕುರಿತಂತೆ ಸೋಮವಾರ (ಜೂ.4)ರಂದು ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿಗಳ ನೇತೃತ್ವದಲ್ಲಿ ಸಭೆ ಕರೆದಿದೆ.

ಪಾಲಿಕೆ ಮಾಸಿಕ ಸಭೆಯನ್ನು ನೇರ ಪ್ರಸಾರ್ ಮಾಡುವುದಕ್ಕೆ ಬೇಕಾದ ಕ್ಯಾಮರಾ ಸೇರಿದಂತೆ ಇನ್ನಿತರೆ ಉಪಕರಣ ಮತ್ತು ವೆಬ್‌ಸೈಟ್‌ನಲ್ಲಿ ಹೇಗೆ ಪ್ರಸಾರ ಮಾಡುವುದು ಅದಕ್ಕೆ ತಗಲುವ ಖರ್ಚು ವೆಚ್ಚಗಳ ವರದಿಯನ್ನು ಪಾಲಿಕೆಯ ಮಾಹಿತಿ ತಂತ್ರಜ್ಞಾನ ವಿಭಾಗ ಸಿದ್ಧಪಡಿಸಿ, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಮತ್ತು ಕೌನ್ಸಿಲ್ ಸಭೆ ಒಪ್ಪಿಗೆ ಬಳಿಕ ಯೋಜನೆ ಜಾರಿಯಾಗಲಿದೆ ಎಂದು ತಿಳಿದುಬಂದಿದೆ.

English summary
Bbmp planning to webcast the monthly meeting as in loksabha. In bbmp meeting hall gallery there is space for 80 to 100 people only. So bbmp thinking on this project to reach more public.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X