ಇಂದಿರಾ ಕ್ಯಾಂಟೀನ್ ಊಟ ಬೇಡ್ವೇ ಬೇಡ ಎಂದ ಬಿಬಿಎಂಪಿ ಸದಸ್ಯರು

ಬೆಂಗಳೂರು, ಅಕ್ಟೋಬರ್ 29: ಮಿತವ್ಯಯ ಸಾಧಿಸುವ ನಿಟ್ಟಿನಲ್ಲಿ ತಾರಾ ಹೋಟೆಲ್‌ಗಳಿಂದ ತರಿಸುತ್ತಿದ್ದ ಮೃಷ್ಟಾನ್ನ ಭೋಜನಕ್ಕೆ ಕತ್ತರಿ ಹಾಕಿ ಇಂದಿರಾ ಕ್ಯಾಂಟೀನ್‌ನಿಂದಲೇ ಊಟ ನೀಡುವ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಪ್ರಯತ್ನಕ್ಕೆ ಭಾರಿ ಹಿನ್ನಡೆ ಉಂಟಾಗಿದೆ.

ಬಿಬಿಎಂಪಿಯ ಎಲ್ಲಾ ಕಾರ್ಪೊರೇಟರ್‌ಗಳು ಇಂದಿರಾ ಕ್ಯಾಂಟೀನ್ ಊಟ ಮಾಡಲು ಹಿಂಜರಿಯುತ್ತಿದ್ದಾರೆ. ಸೋಮವಾರ ಬಿಬಿಎಂಪಿ ಕೌನ್ಸಿಲ್ ಸಭೆ ನಡೆದ ಬಳಿಕ ಮಧ್ಯಾಹ್ನದ ಊಟಕ್ಕೆ ಇಂದಿರಾ ಕ್ಯಾಂಟೀನ್ ನಿಂದ ಸುಮಾರು 500 ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತಾದರೂ ಎಲ್ಲಾ ಕಾರ್ಪೊರೇಟರ್‌ಗಳು ಊಟವನ್ನು ಬಹಿಷ್ಕರಿಸಿ ತಮ್ಮ ಬೇಸರ ವ್ಯಕ್ತಪಡಿಸಿದರು.

ಆದರೆ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಹಾಗೂ ಆಯುಕ್ತ ಮಂಜುನಾಥ್ ಪ್ರಸಾದ್ ಇಬ್ಬರೂ ಇಂದಿರಾ ಕ್ಯಾಂಟೀನ್ ಊಟವನ್ನೇ ಮಾಡುವ ಮೂಲಕ ಇತರೆ ಸದಸ್ಯರೂ ಅದನ್ನೇ ಊಟ ಮಾಡುವಂತೆ ಪ್ರೇರೇಪಿಸುವ ಪ್ರಯತ್ನವನ್ನೂ ಮಾಡಿದರು. ಇದಕ್ಕೂ ಮೊದಲು ನಡೆದ ಕೌನ್ಸಿಲ್ ಸಭೆಯಲ್ಲಿ ಬಿಬಿಎಂಪಿ ಬಹುತೇಕ ಕಾರ್ಪೊರೇಟರ್ ಗಳು ಇಂದಿರಾ ಕ್ಯಾಂಟೀನ್ ಊಟವನ್ನು ವಿರೋಧಿಸಿದರು.

BBMP corporators denies to have Indira canteen lunch at Council meeting

ಇಷ್ಟುದಿನ ಕಾರ್ಪೊರೇಟರ್ ಗಳಿಗೆ ಫ್ರೀ ಊಟವನ್ನು ಲಕ್ಷುರಿ ಹೋಟೆಲ್‌ಗಳಿಂದ ತರಿಸಿಕೊಳ್ಳಲಾಗುತ್ತಿತ್ತು, ಪ್ರತಿ ಊಟಕ್ಕೆ 280ರೂ ವೆಚ್ಚವಾಗುತ್ತಿತ್ತು, ಇದರಿಂದ ಪಾಲಿಕೆಗೆ ತಿಂಗಳಿಗೆ 2 ಲಕ್ಷಕ್ಕೂ ಹೆಚ್ಚು ಖರ್ಚಾಗುತ್ತಿತ್ತು ಹಾಗಾಗಿ ಈ ದುಂದುವೆಚ್ಚವನ್ನು ತಡೆಯಲು ಮೇಯರ್ ನಿರ್ಧರಿಸಿದ್ದು ಇನ್ನುಮುಂದೆ ಇಂದಿರಾ ಕ್ಯಾಂಟೀನ್ ಊಟವನ್ನು ಮಾಡಲು ನಿರ್ದೇಶನ ನೀಡಿದ್ದರು.

ಇಂದಿರಾ ಕ್ಯಾಂಟೀನ್ ಊಟದ ಜತೆಗೆ ಚಪಾತಿ, ಮುದ್ದೆ, ಸ್ವೀಟ್ ನೀಡಲು ನಿರ್ಧರಿಸಿದ್ದರು,, ಇಂದಿರಾ ಕ್ಯಾಂಟೀನ್ ಊಟಕ್ಕೆ ಮಾಸಿಕ ಕೇವಲ 5 ಸಾವಿರ ರೂ ಖರ್ಚಾಗುತ್ತದೆ. ಇದರ ಜತೆಗೆ ಮುದ್ದೆ, ಸೊಪ್ಪಿನ ಸಾರು, ಚಪಾತಿ, ಗ್ರೇವಿ, ಅನ್ನ ರಸಂ, ಸಾಂಬಾರ್, ಮುದ್ದೆ, ಸೊಪ್ಪಿನ ಸಾರು, ಒಂದು ಬಗೆಯ ಸ್ವೀಟ್ ನೀಡಲಾಗುತ್ತದೆ. ಇಷ್ಟಿದ್ದರೂ ಈ ಊಟ ಮಾಡಲು ಬಿಬಿಎಂಪಿ ಸದಸ್ಯರು ಒಪ್ಪಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+