ವಿದ್ಯುತ್ ತಂತಿ ತಗುಲಿ ಬಿಬಿಎಂಪಿ ಗುತ್ತಿಗೆರ ನೌಕರ ಸಾವು
ಬೆಂಗಳೂರು, ಆಗಸ್ಟ್ 08 : ವಿದ್ಯುತ್ ತಂತಿ ತಗುಲಿ ಬಿಬಿಎಂಪಿಯ ಗುತ್ತಿಗೆ ನೌಕರನೊಬ್ಬ ಮೃತಪಟ್ಟ ಘಟನೆ ನಡೆದಿದೆ. ಕೆ. ಜಿ. ಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಗುತ್ತಿಗೆ ನೌಕರನಾಗಿದ್ದ ರಾಜು (28) ವಿದ್ಯುತ್ ತಂಗಿ ತಗುಲಿ ಗುರುವಾರ ಸಂಜೆ ಮೃತಪಟ್ಟಿದ್ದಾರೆ. ಹೆಣ್ಣೂರು ಕ್ರಾಸ್ ಬಳಿ ಈ ಘಟನೆ ನಡೆದಿದೆ.
ಕಸದ ಲಾರಿಗೆ ಹೈಟೆಕ್ಷನ್ ವಿದ್ಯುತ್ ತಗುಲಿದ್ದು ರಾಜು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ವಿದ್ಯುತ್ ತಂತಿ ಹೇಗೆ ತಗುಲಿತು? ಎಂದು ತಿಳಿದುಬಂದಿಲ್ಲ.

ಕೆ. ಜಿ. ಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.












Click it and Unblock the Notifications