ಮಾಸ್ಕ್ ಇಲ್ಲದೇ ಓಡಾಟ; 98 ಸಾವಿರ ದಂಡ ಕಟ್ಟಿದ ಬೆಂಗಳೂರಿಗರು!
ಬೆಂಗಳೂರು, ಮೇ 04 : ಬೆಂಗಳೂರು ನಗರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಓಡಾಡುವಾಗ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಮಾಸ್ಕ್ ಹಾಕದಿದ್ದರೆ ಬಿಬಿಎಂಪಿಯ ಮಾರ್ಷಲ್‌ಗಳು ಸ್ಥಳದಲ್ಲಿಯೇ ದಂಡ ಹಾಕಲಿದ್ದಾರೆ.
ಬಿಬಿಎಂಪಿ ಕಡ್ಡಾಯವಾಗಿ ಜನರು ಮಾಸ್ಕ್ ಧರಿಸುವ ಕುರಿತು ಶುಕ್ರವಾರ ಆದೇಶ ಹೊರಡಿಸಿದೆ. ಮಾಸ್ಕ್ ಧರಿಸುವುದು ಮಾತ್ರವಲ್ಲ, ಉಗುಳುವುದು, ಎಲ್ಲೆಂದರಲ್ಲಿ ಮಲ, ಮೂತ್ರ ವಿಸರ್ಜನೆ ಮಾಡಿದರೆ ದಂಡ ಹಾಕಲಾಗುತ್ತಿದೆ.
ಬೆಂಗಳೂರಲ್ಲಿ ಮಾಸ್ಕ್ ಹಾಕಿಕೊಳ್ಳೋದು ಕಡ್ಡಾಯ; ತಪ್ಪಿದರೆ ದಂಡ
ಮೇ 2ರಂದು ಮಾಸ್ಕ್ ಧರಿಸದ ಕಾರಣ ಎಲ್ಲಾ ವಲಯಗಳ ವ್ಯಾಪ್ತಿಯಲ್ಲಿ ಒಟ್ಟು 51, 700 ರೂ. ದಂಡವನ್ನು ಸಂಗ್ರಹ ಮಾಡಲಾಗಿದೆ. ಮೇ 3 ಭಾನುವಾರ ಒಟ್ಟು 98, 350 ರೂ. ದಂಡವನ್ನು ಸಂಗ್ರಹಿಸಲಾಗಿದೆ.
ಮನೆಯಲ್ಲೇ ತಯಾರಿಸಿದ ಮಾಸ್ಕ್ ಗಳನ್ನು ಸ್ವಚ್ಛಗೊಳಿಸಿ, ಮರುಬಳಕೆ ಮಾಡುವುದು ಹೇಗೆ?
ಮಾಸ್ಕ್ ಹಾಕದೇ ಸಂಚಾರ ನಡೆಸಿದರೆ ಮೊದಲ ಬಾರಿಗೆ 1000 ರೂ., 2ನೇ ಬಾರಿಗೆ 2 ಸಾವಿರ ರೂ. ದಂಡ ವಿಧಿಸಲಾಗುತ್ತದೆ ಎಂದು ಬಿಬಿಎಂಪಿ ಹೇಳಿದೆ. ಮಾಸ್ಕ್ ಅಥವ ಬಾಯಿ, ಮೂಗು ಮುಚ್ಚುವಂತಹ ವಸ್ತ್ರವನ್ನು ಧರಿಸುವುದು ಕಡ್ಡಾಯವಾಗಿದೆ.
ಕೊರೊನಾ ವಿರುದ್ಧ ಹೋರಾಟ; 21 ಸಾವಿರ ಮಾಸ್ಕ್ ತಯಾರಿಸಿದ ನೈಋತ್ಯ ರೈಲ್ವೆ
ದಂಡ ಮೊತ್ತದ ಬಗ್ಗೆ ಬಿಬಿಎಂಪಿ ಮೇಯರ್ ಟ್ವೀಟ್ ಮಾಡಿದ್ದಾರೆ
Day 2 #BBMP collects ₹98,350 as fine from people for not wearing masks.
— M Goutham Kumar (@BBMP_MAYOR) May 3, 2020
Date: May 03 | Total no of cases (all zones): 190
Total fine collected: ₹98,350#BBMPFightsCovid19 #StayHome
ಸಾರ್ವಜನಿಕ ಸ್ಥಳದಲ್ಲಿ ಮತ್ತು 5ಕ್ಕಿಂತ ಹೆಚ್ಚು ಜನರು ಕೆಲಸ ಮಾಡುವ ಕಚೇರಿಗಳಲ್ಲಿ ಬಾಯಿ ಮತ್ತು ಮೂಗು ಮುಚ್ಚುವಂತೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಕಚೇರಿಗಳು ಇದನ್ನು ಪಾಲಿಸದಿದ್ದಲ್ಲಿ ದಂಡ ಹಾಕಲಾಗುತ್ತದೆ ಮತ್ತು ಪ್ರಕರಣ ದಾಖಲು ಮಾಡಲಾಗುತ್ತದೆ.
ಜನರು ಬಳಕೆ ಮಾಡಿದ ಮಾಸ್ಕ್‌ಗಳನ್ನು ಸರಿಯಾಗಿ ಸೀಲ್ ಮಾಡಿ ಕಸ ಸಂಗ್ರಹ ಮಾಡುವವರಿಗೆ ನೀಡಬೇಕು. ಸರಿಯಾಗಿ ಮಾಸ್ಕ್ ವಿಲೇವಾರಿ ಮಾಡದೇ ಎಲ್ಲೆಂದರಲ್ಲಿ ಬಿಸಾಕಿದರೆ ಸಹ ದಂಡ ಹಾಕಲಾಗುತ್ತದೆ ಎಂದು ಬಿಬಿಎಂಪಿ ಎಚ್ಚರಿಕೆ ನೀಡಿದೆ.