ಒಂದು ತಿಂಗಳಲ್ಲಿ ಸಾವಿರ ಕೋಟಿ ತೆರಿಗೆ ಸಂಗ್ರಹಿಸಿದ ಬಿಬಿಎಂಪಿ

ಬೆಂಗಳೂರು, ಮೇ1: ಬಿಬಿಎಂಪಿ ಆಸ್ತಿ ತೆರಿಗೆ ಸಂಗ್ರಹಣೆಯಲ್ಲಿ ದ್ವಿಗುಣಗೊಂಡಿದೆ. ಏಪ್ರಿಲ್ ತಿಂಗಳೊಂದರಲ್ಲಿಯೇ ಬರೋಬ್ಬರಿ 1,026 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಮೂಲಕ ದಾಖಲೆ ಸೃಷ್ಟಿಸಿದೆ.

ಏ.1 ರಿಂದ 30ರ ವರೆಗೆ ಆಸ್ತಿ ತೆರಿಗೆ ಪಾವತಿ ಮಾಡುವವರೆಗೆ ಶೇಕಡಾ 5 ರಷ್ಟು ರಿಯಾಯಿತಿ ನೀಡಲಾಗಿತ್ತು. ಹೀಗಾಗಿ ರಿಯಾಯಿತಿ ಲಾಭ ಪಡೆಯಲು 6.09 ಲಕ್ಷ ಆಸ್ತಿ ಮಾಲೀಕರು ಕೇವಲ 30 ದಿನಗಳಲ್ಲಿ 1,026 ಕೋಟಿ ರೂ. ಆಸ್ತಿ ತೆರಿಗೆ ಪಾವತಿ ಮಾಡಿದ್ದಾರೆ.ಅದರಲ್ಲಿ ಬ್ಯಾಂಕ್ ಮೂಲಕ 560 ಕೋಟಿ ರೂ. ಆನ್‌ಲೈನ್ ಮೂಲಕ 292 ಕೋಟಿ ರೂ. ಪಾವತಿಸಿದ್ದಾರೆ.

ಆಸ್ತಿ ಮಾಲೀಕರು ಬ್ಯಾಂಕ್ ಗಳಿಗೆ ನೀಡುವ ಚೆಕ್ ಮತ್ತಿತರ ರೂಪಗಳಿಂದ ಬಿಬಿಎಂಪಿ ಖಾತೆಗೆ 172 ಕೋಟಿ ರೂ ಜಮಾವಣೆ ಆಗಬೇಕಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. 2016-17 ನೇ ಸಾಲಿನಲ್ಲಿ ಶೇ.5 ರಷ್ಟು ರಿಯಾಯಿತಿ ನೀಡಿದರೂ ಕೇವಲ 333 ಕೋಟಿ ರೂ, 2017-18 ರಲ್ಲಿ 515 ಕೋಟಿ ರೂ ಹಣ ಸಂಗ್ರಹವಾಗಿತ್ತು. ಈ ಸಾಲಿನಲ್ಲಿ ಕಳೆದ ವರ್ಷಕ್ಕಿಂತ ದುಪ್ಪಟ್ಟು ತೆರಿಗೆ ಸಂಗ್ರಹವಾಗಿದೆ.

BBMP collects 1,026 cr tax, a new record!

ಕೊನೆಯ ದಿನ 130 ಕೋಟಿ ರೂ. ಸಂಗ್ರಹ: ಏ.30ರಂದು ರಿಯಾಯಿತಿಗೆ ಕೊನೆಯ ದಿನವಾಗಿದ್ದರಿಂದ ಆಸ್ತಿ ಮಾಲೀಕರು ಮುಗಿಬಿದ್ದು ತೆರಿಗೆ ಪಾವತಿ ಮಾಡಿದ್ದಾರೆ. ಏ.30 ರಂದು ಆನ್‌ಲೈನ್‌ನಲ್ಲಿ 30 ಕೋಟಿ, ಬ್ಯಾಂಕ್ ಮೂಲಕ 100 ಕೋಟಿ ಸಂಗ್ರಹಣೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+