'ಸಮಸ್ಯೆ ಹೇಳಿ- ಸ್ಥಳದಲ್ಲೇ ಪರಿಹಾರ'- ಬಿಬಿಎಂಪಿ ಮುಖ್ಯ ಆಯುಕ್ತರ ವಲಯವಾರು ಸಭೆ

ಬೆಂಗಳೂರು, ಜೂ.21: ಬಿಬಿಎಂಪಿ ಎಂಟೂ ವಲಯಗಳ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ನೀಡಲು ಮುಖ್ಯ ಆಯುಕ್ತರ ಕಛೇರಿಗೆ ಸಾರ್ವಜನಿಕರು ಬಹಳ ದೂರದಿಂದ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರಿಗೆ ಅನುಕೂಲವಾಗಲೆಂದು ಪ್ರತೀ ಮಂಗಳವಾರ ಹಾಗೂ ಶುಕ್ರವಾರದಂದು ವಲಯಗಳ ಕಛೇರಿಗಳಿಗೆ ಭೇಟಿ ನೀಡಿ ಸ್ಥಳೀಯ ನಾಗರಿಕರ ಅಹವಾಲುಗಳನ್ನು ಸ್ಥಳದಲ್ಲಿಯೇ ಆಲಿಸಿ ಅವರ ಸಮಸ್ಯೆಗಳು/ಕುಂದುಕೊರತೆಗಳನ್ನು ಶೀಘ್ರದಲ್ಲಿಯೇ ಬಗೆಹರಿಸುವ ನಿಟ್ಟಿನಲ್ಲಿ "ಮುಖ್ಯ ಆಯುಕ್ತರ ನಡೆ ವಲಯದ ಕಡೆ' ಪರಿಕಲ್ಪನೆಯನ್ನು ಜಾರಿಗೊಳಿಸಲಾಗಿದೆ.

ಅದರಂತೆ ಇಂದು ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ಮೊದಲ ಸಭೆ ನಡೆಸಿ ಸಾರ್ವಜನಿಕರು ಹಾಗೂ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳಿಂದ ಅಹವಾಲುಗಳನ್ನು ಸ್ವೀಕರಿಸಲಾಯಿತು.

ಹೆಚ್ಎಸ್ಆರ್ ಬಡಾವಣೆಯ 6 ಹಾಗೂ 7ನೇ ಸೆಕ್ಟರ್ ನಲ್ಲಿ ಮಳೆಗಾಲದ ವೇಳೆ ಜಲಾವೃತವಾಗುತ್ತದೆ. ರಾಜಕಾಲುವೆಗಳಲ್ಲಿ ನಿರಂತರವಾಗಿ ಹೂಳೆತ್ತುವ, ಮರ ಕತ್ತರಿಸುವ ಶೆಡ್ಡರ್ ಗಳ ವ್ಯವಸ್ಥೆ, ಉದ್ಯಾನವನಗಳಲ್ಲಿ ಕಾಂಪೋಸ್ಟರ್‌ಗಳನ್ನು ಅಳವಡಿಸುವ ಕೆಲಸವಾಗಬೇಕಿದೆ. ಪಾದಚಾರಿ ಮಾರ್ಗಗಳನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುವ, ಅನಧಿಕೃತವಾಗಿ ಕಟ್ಟಗಳನ್ನು ನಿರ್ಮಿಸಿರುವ, ರಸ್ತೆ ಗುಂಡಿಗಳನ್ನು ಮುಚ್ಚುವ, ರಾಜಕಾಲುವೆಗಳನ್ನು ದುರಸ್ತಿ ಪಡಿಸುವ, ಮರ ಕತ್ತರಿಸಿದ ಕೊಂಬೆಗಳನ್ನು ತೆರವುಗೊಳಿಸುವ, ಕೆ.ಸಿ.ಡಿ.ಸಿಯಿಂದ ವಾಸನೆ ಬರದಂತೆ ಕ್ರಮವಹಿಸುವ, ಒ.ಎಫ್.ಸಿ ಕೇಬಲ್‌ಗಳನ್ನು ತೆರವುಗೊಳಿಸುವ, ಫ್ಲೆಕ್ಸ್/ಬ್ಯಾನರ್‌ಗಳನ್ನು ತೆರವುಗೊಳಿಸುವ, ಉದ್ಯಾನವನ ನಿರ್ವಹಣೆ ಮಾಡುವ ಬಗ್ಗೆ ಅಹವಾಲುಗಳನ್ನು ನೀಡಿ ಶೀಘ್ರ ಸಮಸ್ಯೆ ಬಗೆಹರಿಸುವಂತೆ ನಾಗರಿಕರು ಮುಖ್ಯ ಆಯುಕ್ತರಲ್ಲಿ ಮನವಿ ಮಾಡಿದರು.

ಸಭೆಯಲ್ಲಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರು ನಾಗರಿಕರ ಅಹವಾಲುಗಳಿಗೆ ಪ್ರತಿಕ್ರಿಯಿಸಿ, ಹೆಚ್.ಎಸ್.ಆರ್ ಬಡಾವಣೆ 6ನೇ ಸೆಕ್ಟರ್ ನಲ್ಲಿ ಈಗಾಗಲೇ ಪರ್ಯಾಯ ಕಾಲುವೆಯನ್ನು ನಿರ್ಮಿಸಿದ್ದು, ಆ ಭಾಗದಲ್ಲಿ ಜಲಾವೃತವಾಗುವುದನ್ನು ತಪ್ಪಿಸಲಾಗಿದೆ. ಅದೇ ರೀತಿ ಉಳಿದ ಕಡೆಗಳಲ್ಲೂ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು. ಇನ್ನು ರಾಜಕಾಲುವೆಗಳಲ್ಲಿ ಹೂಳೆತ್ತಲು ಕೂಡಲೆ ಟೆಂಡರ್ ಕರೆದು ನಿರಂತರವಾಗಿ ಹೂಳೆತ್ತಿ ರಾಜಕಾಲುವೆ, ಸೈಡ್ ಡ್ರೈನ್‌ಗಳಲ್ಲಿ ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಲಾಗುದು ಎಂದು ತಿಳಿಸಿದರು.

ಜನರ ಓಡಾಟಕ್ಕೆ ಸಮಸ್ಯೆಯಾಗದಂತೆ ಕ್ರಮವಹಿಸಿ

ಜನರ ಓಡಾಟಕ್ಕೆ ಸಮಸ್ಯೆಯಾಗದಂತೆ ಕ್ರಮವಹಿಸಿ

ಪಾದಚಾರಿ ಮಾರ್ಗಗಳನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುವುದರಿಂದ ಪಾದಚಾರಿಗಳ ಓಡಾಟಕ್ಕೆ ಹೆಚ್ಚು ಸಮಸ್ಯೆ ಆಗಲಿದೆ. ಜೊತೆಗೆ ಅಲ್ಲಲ್ಲಿ ಕರ್ಬ್ ಸ್ಟೋನ್ಸ್ ಹಾಗೂ ಸ್ಲ್ಯಾಬ್ ಗಳು ಹಾಳಾಗಿದ್ದು, ಅದನ್ನು ಸರಿಪಡಿಸಲು ನಾಗರಿಕರು ಮನವಿ ಮಾಡಿದರು. ಈ ವೇಳೆ ಮುಖ್ಯ ಆಯುಕ್ತರು ಪ್ರತಿಕ್ರಿಯಿಸಿ, ಪಾದಚಾರಿ ಮಾರ್ಗಗಳಲ್ಲಿ ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವ ಕಡೆ ಕೂಡಲೆ ತೆರವು ಕಾರ್ಯಚರಣೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜೊತೆಗೆ ಎಲ್ಲೆಲ್ಲಿ ಕರ್ಬ್ ಸ್ಟೋನ್ಸ್ ಹಾಗೂ ಸ್ಲ್ಯಾಬ್ಸ್ ಆಳಾಗಿದೆ ತ್ವರಿತವಾಗಿ ದುರಸ್ತಿ ಕಾರ್ಯ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಸ್ತೆಗುಂಡಿ ಮುಚ್ಚಿದ ಚಿತ್ರ ತಂತ್ರಾಂಶದಲ್ಲಿ ಹಾಕಿ

ರಸ್ತೆಗುಂಡಿ ಮುಚ್ಚಿದ ಚಿತ್ರ ತಂತ್ರಾಂಶದಲ್ಲಿ ಹಾಕಿ

ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ 748 ರಸ್ತೆ ಗುಂಡಿಗಳನ್ನು ಗುರುತಿಸಿದ್ದು, 710 ರಸ್ತೆಗುಂಡಿಗಳನ್ನು ಮುಚ್ಚಲಾಗಿರುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಈ ವೇಳೆ ನಿವಾಸಿ ಕ್ಷೇಮಾಭಿವೃದ್ಧಿ ಸಂಘದವರಲ್ಲೊಬ್ಬರು ಮಾತನಾಡಿ, ಬೊಮ್ಮನಹಳ್ಳಿ ವಲಯ ವ್ಯಾಪ್ತಿಯ ಹೆಚ್.ಎಸ್.ಆರ್ ಬಡಾವಣೆಯಲ್ಲಿ ಇನ್ನೂ ರಸ್ತೆ ಗುಂಡಿಗಳಿದ್ದು, ರಸ್ತೆಗುಂಡಿಗಳನ್ನು ಸಮರ್ಪಕವಾಗಿ ಮುಚ್ಚುವ ಕಾರ್ಯ ಆಗಬೇಕಿದೆ ಎಂದು ತಿಳಿಸಿದರು. ಈ ವೇಳೆ ಮುಖ್ಯ ಆಯಕ್ತರು ಮಾತನಾಡಿ, ರಸ್ತೆ ಗುಂಡಿಳನ್ನು ಮುಚ್ಚುವ ಬಗ್ಗೆ ಜಿ.ಐ.ಎಸ್ ಮ್ಯಾಪಿಂಗ್ ಸಹಿತ ಚಿತ್ರಗನ್ನು ಫಿಕ್ಸ್ ಮೈ ಸ್ಟ್ರೀಟ್ ತಂತ್ರಾಂಶದಲ್ಲಿ ಹಾಕಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇನ್ನು ಮುಂದೆ ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಪ್ರತಿನಿಧಿಗಳನ್ನೊಳಗೊಂಡ ವ್ಯಾಟ್ಸಪ್ ಗ್ರೂಪ್ ರಚಿಸಿಕೊಂಡು, ಅವರ ಸಹಯೋಗದೊಂದಿಗೆ ರಸ್ತೆ ಗುಂಡಿ ಮುಚ್ಚುವ ಬಗ್ಗೆ ಹಿಂದಿನ ದಿನವೇ ಪಟ್ಟಿ ಮಾಡಿಕೊಂಡು ಸ್ಥಳೀಯ ವಾರ್ಡ್ ಸಮಿತಿ ವ್ಯಾಟ್ಸಪ್ ಗ್ರೂಪ್ ನಲ್ಲಿ ಹಾಕಬೇಕು. ಸಾಮಾನ್ಯವಾಗಿ ಮಧ್ಯಾಹ್ನದ ನಂತರ ಮಳೆ ಬರುತ್ತಿರುವ ಹಿನ್ನೆಲೆಯಲ್ಲಿ ಬೆಳಗ್ಗೆ 6.00 ರಿಂದ ಮಧ್ಯಾಹ್ನ 3 ಗಂಟೆಯ ವೇಳೆಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ಹಮ್ಮಿಕೊಳ್ಳಲು‌ ಹಾಗೂ ವರುಣ ಮಿತ್ರ ವೆಬ್ ಸೈಟ್ ಮೂಲಕ ಹವಾಮಾನದ ಮಾಹಿತಿ ಪಡೆದು ಅದರಂತೆ ರಸ್ತೆಗುಂಡಿ ಮುಚ್ಚಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಲಮಂಡಳಿ ಅಧಿಕಾರಿಗೆ ಸೂಚನೆ

ಜಲಮಂಡಳಿ ಅಧಿಕಾರಿಗೆ ಸೂಚನೆ

ಹೆಚ್ಎಸ್ಆರ್ 2ನೇ ಸೆಕ್ಟರ್ ನಲ್ಲಿ ಜಲಮಂಡಳಿ ವತಿಯಿಂದ ಪೂರೈಕೆ ಮಾಡುತ್ತಿರುವ ಕುಡಿಯುವ ನೀರನ್ನು ಸರಿಯಾಗಿ ಬಿಡುತ್ತಿಲ್ಲ. ಇದರಿಂದ ಸಮಸ್ಯೆಯಾಗುತ್ತಿದೆ ಎಂದು ನಿವಾಸಿಯೊಬ್ಬರು ತಿಳಿಸಿದರು. ಅದಕ್ಕೆ ಮುಖ್ಯ ಆಯುಕ್ತರು ಪ್ರತಿಕ್ರಿಯಿಸಿ, ಕುಡಿಯುವ ನೀರಿನ ಪೂರೈಕೆಯನ್ನು ಸರಿಯಾಗಿ ನೀಡಬೇಕು. ಈ ಸಂಬಂಧ ವೇಳಾಪಟ್ಟಿ ಸಿದ್ದಪಡಿಸಿ ಅದರನುಸಾರ ನೀರನ್ನು ಪೂರೈಸಬೇಕು. ಈ ಬಗ್ಗೆ ನಾಗರಿಕರಿಗೆ ಮಾಹಿತಿ ನೀಡಬೇಕು ಎಂದು ಜಲಮಂಡಳಿ ಅಧಿಕಾರಿಗೆ ಸೂಚನೆ ನೀಡಿದರು.

ಟೆಂಡರ್ ಪ್ರಕ್ರಿಯೆ ಚಾಲನೆಯಲ್ಲಿದೆ

ಟೆಂಡರ್ ಪ್ರಕ್ರಿಯೆ ಚಾಲನೆಯಲ್ಲಿದೆ

ನಗರದಲ್ಲಿ ಮೂಲದಲ್ಲಿಯೇ ಕಾಂಪೋಸ್ಟಿಂಗ್ ಮಾಡುವ ಸಲುವಾಗಿ ಪಾಲಿಕೆಯ ಆಯಾ ವಲಯ ವ್ಯಾಪ್ತಿಯಲ್ಲಿ ಬರುವ ಉದ್ಯಾನವನಗಳಲ್ಲಿ ಸಾಮರ್ಥ್ಯಕ್ಕೆ ಅನುಗುಣವಾಗಿ ಕಾಂಪೋಸ್ಟರ್ ಗಳನ್ನು ಅಳವಡಿಸುವ ನಿಟ್ಟಿನಲ್ಲಿ ಕಾಯೋನ್ಮುಖರಾಗಲು ಮುಖ್ಯ ಆಯುಕ್ತರು ಘನತ್ಯಾಜ್ಯ ವಿಭಾಗದ ಮುಖ್ಯ ಅಭಿಯಂತರರಾದ ಬಸವರಾಜ್ ಕಾಬಾಡೆಗೆ ಸೂಚನೆ ನೀಡಿದರು. ಈ ವೇಳೆ ಕಬಾಡೆ ರವರು ಪ್ರತಿಕ್ರಿಯಿಸಿ, ಶುಭ್ರ ಬೆಂಗಳೂರು ಅನುದಾನದಡಿ ನಗರದ 200 ಉದ್ಯಾನವನಗಳಲ್ಲಿ ಕಾಂಪೋಸ್ಟರ್ ಗಳನ್ನು ಅಳಡಿಸಲು ಯೋಜನೆ ರೂಪಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಶೀಘ್ರ ಉದ್ಯಾನವನಗಳಲ್ಲಿ ಕಾಂಪೋಸ್ಟರ್ ಗಳನ್ನು ಅಳವಡಿಸಲಾಗುವುದು ಎಂದು ಮಾಹಿತಿ ನೀಡಿದರು. ಇನ್ನು ಮಳೆಗಾಲದ ವೇಳೆ ಬೀಳುವ ಮರ, ರೆಂಬೆ/ಕೊಬೆಗಳನ್ನು ಮೂಲದಲ್ಲಿಯೇ ಪುಡಿ ಮಾಡುವ ಸಲುವಾಗಿ ಮರ ಕತ್ತಿರುವ ಶೆಡ್ಡರ್ ಯಂತ್ರಗಳ ವ್ಯವಸ್ಥೆ ಮಾಡಲು ಸಹ ಇದೇ ವೇಳೆ ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ವೈಜ್ಞಾನಿಕವಾಗಿ ತ್ಯಾಜ್ಯ ಸಂಸ್ಕರಣೆ ಮಾಡಿ

ವೈಜ್ಞಾನಿಕವಾಗಿ ತ್ಯಾಜ್ಯ ಸಂಸ್ಕರಣೆ ಮಾಡಿ

ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮ ನಿಯಮಿತ(ಕೆ.ಸಿ.ಡಿ.ಸಿ) ಕಸ ಸಂಸ್ಕರಣಾ ಘಟಕದಿಂದ ವಾಸನೆ ಬರತಿದ್ದು, ಇದರಿಂದ ಸ್ಥಳೀಯ ನಿವಾಸಿಗಳಿಗೆ ಸಮಸ್ಯೆಯಾಗುತ್ತಿದೆ ಎಂಬುದನ್ನು ತಿಳಿದು, ಕೂಡಲೆ ಸಮಸ್ಯೆ ಇತ್ಯರ್ಥಪಡಿಸಿ ವೈಜ್ಞಾನಿಕವಾಗಿ ತ್ಯಾಜ್ಯ ಸಂಸ್ಕರಣೆ ಮಾಡಿ ಸುತ್ತಮುತ್ತಲಿನ ಪ್ರದೇಶಕ್ಕೆ ವಾಸನೆ ಬಾರದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ವಲಯ ಜಂಟಿ ಆಯುಕ್ತರಿಗೆ ಸೂಚನೆ ನೀಡಿದರು.

ತುಷಾರ್ ಗಿರಿನಾಥ್‌ರ ಮುಖ್ಯ ಆಯುಕ್ತರ ನಡೆ ವಲಯದ ಕಡೆ ಪರಿಕಲ್ಪನೆಯಲ್ಲಿ ಬೊಮ್ಮಲಹಳ್ಳಿ ವಲಯ ಆಯುಕ್ತರಾದ ಡಾ. ಹರೀಶ್ ಕುಮಾರ್, ವಲಯ ಜಂಟಿ ಆಯುಕ್ತರಾದ ಕೃಷ್ಣ ಮೂರ್ತಿ, ವಲಯ ಮುಖ್ಯ ಇಂಜಿನಿಯರ್, ಬೆಸ್ಕಾಂ, ಜಲಮಂಡಳಿ ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

Recommended Video

      ಟೀಮ್ ಇಂಡಿಯಾಗೆ ಐಸಿಸಿಯಿಂದ ಖಡಕ್ ಎಚ್ಚರಿಕೆ | *Cricket | OneIndia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+