ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಬಜೆಟ್: 10,208 ಕೋಟಿ ಗಾತ್ರಕ್ಕೆ ಪರಿಷ್ಕರಣೆ

|
Google Oneindia Kannada News

ಬೆಂಗಳೂರು, ಮಾರ್ಚ್ 13: ಬಿಬಿಎಂಪಿ ಬಜೆಟ್ ಮಂಡನೆ ನಂತರ ವಾರಗಳ ಕಾಲ ಸಭೆ ನಡೆಸಿ, ಸದ್ಯರಿಂದ ಬಂದ ಅಹವಾಲು ಸ್ವೀಕರಿಸಿ ಬಜೆಟ್ ಗಾತ್ರವನ್ನು 10,208ಕೋಟಿ ರೂ.ಗೆ ಹೆಚ್ಚಳ ಮಾಡಲಾಗಿದೆ.

ಫೆ.28ರಂದು ಮಂಡಿಸಿದ್ದ ಆಯವ್ಯಯದಲ್ಲಿ 2018-19ನೇ ಸಾಲಿನಲ್ಲಿ 9,326.87ಕೋಟಿ ಸ್ವೀಕೃತಿ ಮತ್ತು 9,325.53ಕೋಟಿ ರೂ ವೆಚ್ಚ ತೋರಿಸಲಾಗಿತ್ತು. ಇದೀಗ ಸ್ವೀಕೃತಿ ಮತ್ತು ವೆಚ್ಚದಲ್ಲಿ ಬದಲಾವಣೆ ತರಲಾಗಿದೆ. ಆದಾಯ 882.47 ಕೋಟಿ ರೂ ಹೆಚ್ಚಿದ್ದು, 10,208ಕೋಟಿ ರೂ.ವೆಚ್ಚ ತೋರಿಸಲಾಗಿದೆ. ಪರಷ್ಕೃತ ಬಜೆಟ್ ಗೆ ಅನುಮೋದನೆ ಪಡೆದು, ಸರ್ಕಾರದ ಒಪ್ಪಿಗೆಗೆ ಕಳುಹಿಸಲಾಗಿದೆ.

ಜನಪ್ರಿಯ ಯೋಜನೆಗಳ ಹೂರಣ ಬಿಬಿಎಂಪಿ ಬಜೆಟ್!ಜನಪ್ರಿಯ ಯೋಜನೆಗಳ ಹೂರಣ ಬಿಬಿಎಂಪಿ ಬಜೆಟ್!

ಆದಾಯ ಹೆಚ್ಚಳ: ಆಸ್ತಿ ತೆರಿಗೆಯಲ್ಲಿ 425 ಕೋಟಿ ರೂ. ಆರೋಗ್ಯಕರ 63.75 ಕೋಟಿ ರೂ. ಗ್ರಂಥಾಲಯ ಕರ 25.5ಕೋಟಿ ರೂ. ಭಿಕ್ಷಾಟನೆ ಕರ 12.75 ಕೋಟಿ ರೂ. ಘನತ್ಯಾಜ್ಯ ನಿರ್ವಹಣಾ ಕರ 10 ಕೋಟಿ ರೂ. ಭದ್ರತಾ ಠೇವಣಿಯಿಂದ 30ಕೋಟಿ ರೂ. ಜಾಹೀರಾತು ಫಲಕಗಳಿಂದ 15ಕೋಟಿ ರೂ. ಅಭಿವೃದ್ಧಿ ಶುಲ್ಕದಿಂದ 50ಕೋಟಿ ರೂ ಆಸ್ತಿ ತೆರಿಗೆ ಪಾವತಿ ವಿಳಂಬದ ದಂಡದ ಮೊತ್ತದಿಂದ 25 ಕೋಟಿ ರೂ. ಕಟ್ಟಡ ಪರವಾನಗಿ ಶುಲ್ಕ 35ಕೋಟಿ ರೂ. ಒಎಫ್ ಸಿ ಶುಲ್ಕ 50ಕೋಟಿ ರೂ, ಇತರೆ ಸ್ವೀಕೃತಿಗಳಿಂದ 50ಕೋಟಿ ರೂ. ಹೆಚ್ಚುವರು ಆದಾಯ ತೋರಿಸಲಾಗಿದೆ.

 BBMP budget expands to Rs10,208 cr

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಪ್ರತಿಮೆಗಳ ಸ್ಥಾಪನೆ: ಮೇಖ್ರಿ ವೃತ್ತದಲ್ಲಿ ಮೇಜರ್ ಅಕ್ಯ್ ಗಿರೀಶ್ ಕುಮಾರ್, ಮೇಜರ್ ಸಂದೀಪ್ ಉನ್ನಿಕೃಷ್ಣನ್, ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಕುಮಾರ್ ಪ್ರತಿಮೆಗೆ 1.5 ಕೋಟಿ ರೂ ನಿಗದಿ ಮಾಡಲಾಗಿದೆ. ನಾಗಪುರ ವಾರ್ಡ್ ನ ಪೈಪ್ ಲೈನ್ ರಸ್ತೆಯಲ್ಲಿ ಡಾ. ರಾಜ್ ಪ್ರತಿಮೆಗೆ 30ಲಕ್ಷ ರೂ. ಹಾಗೂ ಮಹಾಲಕ್ಷ್ಮೀ ಲೇಔಟ್ ನ ಆಂಜನೇಯ ದೇವಸ್ಥಾನದ ಉದ್ಯಾನದಲ್ಲಿ ಮಹಾತ್ಮಾಗಾಮಧಿ ದಂಡಿ ಸತ್ಯಾಗ್ರ ಪ್ರತಿಮೆ ಸ್ಥಾಪನೆಗೆ ಪರಿಷ್ಕ್ಋತ ಬಜೆಟ್ ನಲ್ಲಿ 50ಲಕ್ಷ ರೂ. ಒದಗಿಸಲಾಗಿದೆ.

English summary
BBMP budget has expanded to Rs.10,208 crores and sent to state government for approval on Monday. It was also fixed Fiscal responsibility Act for implementation and maintain the financial discipline as well.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X