ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

9 ವರ್ಷದಲ್ಲಿ 24 ಬಾರಿಗೆ ಕೆ.ಮಥಾಯಿ ವರ್ಗಾವಣೆ!

|
Google Oneindia Kannada News

ಬೆಂಗಳೂರು, ಏಪ್ರಿಲ್ 27 : ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಸಹಾಯಕ ಆಯುಕ್ತ (ಜಾಹೀರಾತು) ಕೆ.ಮಥಾಯಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಒಂಬತ್ತು ವರ್ಷಗಳ ಸೇವೆಯಲ್ಲಿ ಮಥಾಯಿ ಅವರು 24 ಬಾರಿ ವರ್ಗಾವಣೆಯಾಗಿದ್ದಾರೆ.

ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಎನ್.ನರಸಿಂಹ ಅವರು ಮಂಗಳವಾರ ಕೆ.ಮಥಾಯಿ ಅವರ ವರ್ಗಾವಣೆ ಕುರಿತು ಆದೇಶ ಹೊರಡಿಸಿದ್ದಾರೆ. ಕೆಎಎಸ್ ಅಧಿಕಾರಿ ಕೆ.ಮಥಾಯಿ ಅವರನ್ನು ಮಾತೃ ಇಲಾಖೆಯಾದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ. [ಜಾಹೀರಾತು ಹಗರಣ ಬೆಳಕಿಗೆ ತಂದ ಮಥಾಯಿ ವರ್ಗಾವಣೆ?]

k mathai

ಬಿಬಿಎಂಪಿ ಆಯುಕ್ತರ ಪತ್ರ : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಿಂದಿನ ಆಯುಕ್ತರಾಗಿದ್ದ ಕುಮಾರ್‌ ನಾಯಕ್‌ ಅವರು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದು ಮಥಾಯಿ ಅವರ ವಿರುದ್ಧ ದೂರಿದ್ದರು. ಕೌನ್ಸಿಲ್‌ ಹಾಗೂ ಸ್ಥಾಯಿ ಸಮಿತಿಯ ನಿರ್ದೇಶನ, ಮೇಲಧಿಕಾರಿಗಳ ಆದೇಶ ಇಲ್ಲದಿದ್ದರೂ ಜಾಹೀರಾತು ವಿಭಾಗದ ಆಗುಹೋಗುಗಳ ಕುರಿತು ವರದಿ ಸಿದ್ಧಪಡಿಸಿ ಮಾಧ್ಯಮದಲ್ಲಿ ಪ್ರಚಾರ ಮಾಡಿದ್ದಾರೆ ಎಂದು ಆರೋಪಿಸಿದ್ದರು. [ಬಿಬಿಎಂಪಿ ಆಯುಕ್ತ ಕುಮಾರ್ ನಾಯಕ್ ವರ್ಗಾವಣೆ]

ಕೆ.ಮಥಾಯಿ ಅವರು ತಮ್ಮ ನಡವಳಿಕೆಯಿಂದ ಬಿಬಿಎಂಪಿಯ ಹಿರಿಯ ಅಧಿಕಾರಿಗಳ ತೇಜೋವಧೆಗೆ ಪ್ರಯತ್ನ ನಡೆಸಿದ್ದಾರೆ ಎಂದು ಹೇಳಿದ್ದರು. ಕುಮಾರ್‌ ನಾಯಕ್‌ ಅವರ ವರ್ಗಾವಣೆಯಾದ ಬೆನ್ನಲ್ಲೇ ಕೆ.ಮಥಾಯಿ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. [ಬೆಂಗಳೂರು ನಗರಕ್ಕೊಂದು 10 ಪಥದ ರಸ್ತೆ]

ವರದಿ ನೀಡಿದ್ದರು : ಬಿಬಿಎಂಪಿಯ ಜಾಹೀರಾತು ವಿಭಾಗದ ಅವ್ಯವಸ್ಥೆ, ಜಾಹೀರಾತು ತೆರಿಗೆ ಸಂಗ್ರಹದ ವೈಫಲ್ಯದ ಬಗ್ಗೆ ಕೆ.ಮಥಾಯಿ ಅವರು 5 ವರದಿಗಳನ್ನು ನೀಡಿದ್ದರು. ತೆರಿಗೆ ಸಂಗ್ರಹ ವೈಫಲ್ಯದಿಂದ 2000 ಸಾವಿರ ಕೋಟಿ ನಷ್ಟ ಉಂಟಾಗಿದೆ ಎಂದು ಅವರು ವರದಿಯಲ್ಲಿ ಹೇಳಿದ್ದರು.

ಬಿಬಿಎಂಪಿಯ ಜಾಹೀರಾತು, ಕಂದಾಯ ವಿಭಾಗದ ಅಧಿಕಾರಿಗಳು, ನೌಕರರು, ಹಿರಿಯ ಅಧಿಕಾರಿಗಳ ಅಡಳಿತ ವೈಫಲ್ಯವೇ ಈ ನಷ್ಟಕ್ಕೆ ಕಾರಣ ಎಂದು ವರದಿಯಲ್ಲಿ ಹೇಳಿದ್ದರು. ಹಗರಣದ ಬಗ್ಗೆ ಸಿಬಿಐ ಅಥವ ಸಿಐಡಿ ತನಿಖೆಯಾಗಬೇಕು ಎಂದು ಶಿಫಾರಸು ಮಾಡಿದ್ದರು.

ಕೌನ್ಸಿಲ್ ಸಭೆಯಲ್ಲಿ ಚರ್ಚೆ : ಕೆಲವು ದಿನಗಳ ಹಿಂದೆ ನಡೆದ ಬಿಬಿಎಂಪಿ ಕೌನ್ಸಿನ್ ಸಭೆಯಲ್ಲಿ ಕೆ.ಮಥಾಯಿ ಅವರನ್ನು ಜಾಹೀರಾತು ವಿಭಾಗದ ಸಹಾಯಕ ಆಯುಕ್ತ ಹುದ್ದೆಯಿಂದ ಮಾರುಕಟ್ಟೆ ವಿಭಾಗಕ್ಕೆ ವರ್ಗಾವಣೆ ಮಾಡುವ ಬಗ್ಗೆ ಚರ್ಚೆ ನಡೆದಿತ್ತು.

24 ಬಾರಿ ವರ್ಗಾವಣೆ : ಕೆಎಎಸ್ ಅಧಿಕಾರಿ ಕೆ.ಮಥಾಯಿ ಅವರು 9 ವರ್ಷಗಳಲ್ಲಿ 24 ಬಾರಿ ವರ್ಗಾವಣೆಯಾಗಿದ್ದಾರೆ. ಜಾಹೀರಾತು ವಿಭಾಗದ ಸಹಾಯಕ ಆಯುಕ್ತರಾಗಿದ್ದ ಅವರನ್ನು ವರ್ಗಾವಣೆ ಮಾಡುವಲ್ಲಿ ಜಾಹೀರಾತು ಮಾಫಿಯಾದ ಕೈವಾಡವಿದೆ ಎಂದು ಆರೋಪಿಸಲಾಗುತ್ತಿದೆ.

English summary
Bruhat Bengaluru Mahanagara Palike assistant commissioner (advertisement) K.Mathai transferred. K.Mathai exposed large- scam and irregularities in the department. With this Mathai has been transferred for the 24th time in the last 9 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X