BBK Season 12: ಬಿಗ್ ಬಾಸ್ ಮನೆಯಲ್ಲಿರುವವರು ಪಾತ್ರಧಾರಿಗಳೋ, ಹೊರಗಿರುವ ವೀಕ್ಷಕರೋ?: ದಿನೇಶ್ ಅಮಿನ್ ಮಟ್ಟು ಬರಹ
ಬೆಂಗಳೂರು: ಫೈನಲ್ ತಲುಪಿರುವ ಕನ್ನಡದ ಟಿವಿ ರಿಯಾಲಿಟಿ ಶೋ 'ಬಿಗ್ ಬಾಸ್ 12'ರ (Bigg Boss 12 Kannada) ವಿಜೇತರು ಯಾರೆಂದು ಇಂದಿನ (ಜನವರಿ 18) ಕಾರ್ಯಕ್ರಮದಲ್ಲಿ ನಟ ಕಿಚ್ಚ ಸುದೀಪ್ ಅವರು ಘೋಷಿಸಲಿದ್ದಾರೆ. ಹತ್ತಾರು ವಾರಗಳು ದೊಡ್ಡ ಮನೆಯಲ್ಲಿದ್ದು, ಅನೇಕ ಆಟಗಳನ್ನು ಆಡಿ ಜನರ ಮನ ಗೆದ್ದಿದ್ದ ಸ್ಪರ್ಧಿಗಳು ಇಂದು ಹೊರ ಬಲಿದ್ದಾರೆ. ಇನ್ನೂ ಈ ಬಿಗ್ ಬಾಸ್ ಕಾರ್ಯಕ್ರಮ, ಸ್ಪರ್ಧಿಗಳಿಗೆ ಇರುವ ಕ್ರೇಜ್, ಆನ್‌ಲೈನ್ ಅಭಿಯಾನಗಳ ಬಗ್ಗೆ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ. ಬಿಗ್ ಬಾಸ್ ಬಗ್ಗೆ ಹಿರಿಯ ಪತ್ರಕರ್ತರಾದ 'ದಿನೇಶ್ ಅಮಿನ್ ಮಟ್ಟು' ಅವರು ಫೇಸ್‌ಬುಕ್‌ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅದರ ವಿವರ ಮುಂದಿದೆ.
'ನಿಜವಾಗಿ ಬಿಗ್ ಬಾಸ್ ನಲ್ಲಿರುವುದು ಯಾರು? ಒಳಗಿರುವ ಪಾತ್ರಧಾರಿಗಳೋ? ಹೊರಗೆ ಇರುವ ವೀಕ್ಷಕರೋ?
ಬಿಗ್ ಬಾಸ್ ಎಂಬ ಬಯಲು ಬಂಧಿಖಾನೆಯಲ್ಲಿರುವ ಪಾತ್ರಧಾರಿಗಳ ಸಿಟ್ಟು, ಸಿಡುಕು, ಜಗಳ, ಕಿರುಚಾಟ ಪ್ರೀತಿ-ದ್ವೇಷ, ಅಸೂಯೆಗಳನ್ನು ಅರ್ಥಮಾಡಿಕೊಳ್ಳಬಹುದು. ಮನುಷ್ಯನ ಸಹನೆ-ಸಂಯಮಗಳನ್ನು ಪರೀಕ್ಷೆಗೊಡ್ಡುವುದೂ ಕೂಡಾ ಬಿಗ್ ಬಾಸ್ ಕಾರ್ಯಕ್ರಮದ ಉದ್ದೇಶವಾಗಿರುವ ಕಾರಣ ಈ ಬೆಳವಣಿಗೆಗಳು ಸಹಜ.

ಆದರೆ ಈ ಕಾರ್ಯಕ್ರಮಗಳನ್ನು ನೋಡುವ ವೀಕ್ಷಕರು ಒಳಗಿರುವ ಪಾತ್ರಧಾರಿಗಳನ್ನು ಮೀರಿಸುವಂತೆ ಗುಂಪುಗಾರಿಕೆ, ಜಾತೀಯತೆ, ಸ್ವಾರ್ಥ, ದ್ವೇಷ, ಅಸೂಯೆ, ಜಗಳ, ಪ್ರತೀಕಾರಗಳಲ್ಲಿ ತೊಡಗಿರುವುದನ್ನು ನೋಡಿದರೆ ನಿಜವಾದ ಬಿಗ್ ಬಾಸ್ ಒಳಗೆ ಇಲ್ಲ, ಹೊರಗೆ ಇದೆ ಮತ್ತು ಹೊರಗೆ ಇರುವ ಹುಚ್ಚು ವೀಕ್ಷಕರಿಗಿಂತ ಒಳಗಿರುವ ಪಾತ್ರಧಾರಿಗಳೇ ಸಂಭಾವಿತರು, ಜಂಟಲ್ ಮೆನ್ ಗಳು ಎಂದು ಅನಿಸುತ್ತಿದೆ.
ಈ ರೀತಿ ನಮ್ಮ ಸುತ್ತಮುತ್ತ ಇರುವ ಕೆಲವರ ಮುಖವಾಡಗಳನ್ನು ಕಳಚಿ ಹಾಕುತ್ತಿರುವುದಕ್ಕದಾರೂ ಬಿಗ್ ಬಾಸ್ ಗೆ ಧನ್ಯವಾದಗಳನ್ನು ಅರ್ಪಿಸಬೇಕು' ಎಂದು ಅವರು ಬರೆದುಕೊಂಡಿದ್ದಾರೆ.
ನೆಟ್ಟಿಗರು ಹೇಳಿದ್ದೇನು?
ನೆಟ್ಟಿಗರು ಅವರ ಈ ಪೋಸ್ಟ್‌ಗೆ ಒಂದಷ್ಟು ಕಾಮೆಂಟುಗಳನ್ನು ಮಾಡಿದ್ದಾರೆ. 'ಈ ಬಿಗ್ ಬಾಸ್ ಕಾರ್ಯಕ್ರಮ ಏನು ಅಂತಾ ಇದುವರೆಗೂ ಗೊತ್ತಾಗಿಲ್ಲ' ಎಂದು ಒಬ್ಬರು ಕಾಮೆಂಟ್ ಹಾಕಿದ್ದಾರೆ. ಇನ್ನೊಬ್ಬರು 'ನಿಜಕ್ಕೂ ಸರಿಯಾಗಿ ಹೇಳಿದ್ದೀರಿ ಗುರುಗಳೆ..ಈ ಹುಚ್ಚರ ಸಂತೆಯನ್ನ ನೋಡುವವರ ಹುಚ್ಚಾಟ ನೋಡಿ ಸುಮ್ಮನಾಗಿರುವೆ..ಮಾತಾಡಿದರೂ ಕಷ್ಟವೇ..' ಎಂದಿದ್ದಾರೆ.
'ಸಿನೆಮಾಗಳು ಸೀರೀಯಲ್ ಗಳು ನೋಡೋದು ಮನರಂಜನೆಗೆ. ಅವುಗಳಿಗೆ ಹೋಲಿಕೆ ಮಾಡೋವಾಗ ಈ ಬಿಗ್ ಬಾಸ್ ನಿಜಕ್ಕೂ ಒಂದೊಳ್ಳೆ ಶೋ. ಒಳ್ಳೆ ಶೋ ಅಂದಾಗ ಒಳ್ಳೆ ವಿಷಯ ಮಾತ್ರ ಸಿಗುತ್ತೆ ಅಂತಲ್ಲ atleast ರಿಯಾಲಿಟಿ, ನೈಜ ವ್ಯಕ್ತಿತ್ವ ಗಳು ಅಲ್ಲಿವೆ. ಖಂಡಿತವಾಗಿಯೂ ಸ್ಕ್ರಿಪ್ಟ್ ಇರಲ್ಲ. ಕೆಲವು ಸ್ಪರ್ದಿಗಳ ಫೇಕ್ ವರ್ತನೆ ಗಳು ಸ್ಕ್ರಿಫ್ಟೆಡ್ ತರಾ ಅನ್ನಿಸುತ್ತದೆ.
ಸ್ಪರ್ದಿಗಳು ಹಳೇ ಸ್ಪರ್ಧಿಗಳನ್ನು, ಸೀಸನ್ ಗಳನ್ನ ನೋಡಿ ಆ ಶೈಲಿಗಳ ಅನುಕರಣೆ ಮಾಡುವದರಿಂಧ ಇವಾಗಿವಾಗ ಅಷ್ಟಾಗಿ ಆಸಕ್ತಿ ಬರಲ್ಲ ನೋಡೋಕೆ. ಈ ಹಿಂದೆ ಸೋನು ಶ್ರೀನಿವಾಸ ಬಂದಾಗ ಅವರನ್ನು, ಇವರನ್ನು ಕರೆಸುವುದರಲ್ಲಿ ತಪ್ಪಿಲ್ಲ. ಅದರೊಳಗೆ ಹಲವು ರೀತಿಯ ವ್ಯಕ್ತಿತ್ವ ಗಳು ಇರುತ್ತವೆ ಒಳ್ಳೆಯವರೇ ಹೋಗಬೇಕು ಅಂತೇನು ಇಲ್ಲ ಎಂಬುದು ನನ್ನ ಅಭಿಪ್ರಾಯವೆಂದು' ಮತ್ತೊಬ್ಬರು ಹೇಳಿದ್ದಾರೆ.
ಬಿಗ್ ಬಾಸ್ ಎಂಬುದು ವ್ಯಕ್ತಿತ್ವದ ಆಟ, ಇಲ್ಲಿ ಯಾವ ಸಂದರ್ಭ ಬರುತ್ತದೇ, ಏನೆಲ್ಲ ಅಡಬೇಕಾಗುತ್ತದೆ ಎಂಬುದು ಸ್ಪರ್ಧಿಗಳಿಗೆ ಮೊದಲ ಗೊತ್ತಿರುವುದಿಲ್ಲ. ಹೀಗಾಗಿ ಆಯಾ ಸಂದರ್ಭದಲ್ಲಿ ಸ್ಪರ್ಧಿಗಳು ಹೇಗಿರುತ್ತಾರೆ. ಪರಿಸ್ಥಿತಿ ಹೇಗೆ ನಿಭಾಯಿಸುತ್ತಾರೆ. ಟೀಂ ಕ್ಯಾಪ್ಟನ್ ಆಗಿ ಜವಾಬ್ದಾರಿ ನಿರ್ವಹಣೆಯಿಂದ ಕೆಲವರು ಹೆಚ್ಚು ಅಭಿಮಾನಿಗಳನ್ನು ಹೊಂದುತ್ತಾರೆ. ಈ ಬಿಗ್ ಬಾಸ್‌ಗೆ ನಾಡಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications