''GST ಸರಳೀಕರಣ ಘೋಷಣೆ: ವ್ಯಾಪಾರಸ್ಥರು, ಗ್ರಾಹಕರಿಗೆ ಅನುಕೂಲ''

ಬೆಂಗಳೂರು, ಆಗಸ್ಟ್ 17: ಸರಕು ಸೇವಾ ತೆರಿಗೆಯನ್ನು (GST) ತರ್ಕ ಬದ್ಧಗೊಳಿಸುವಿಕೆ ಮತ್ತು ತೆರಿಗೆ ಕಾನೂನು ಸರಳೀಕರಣಗೊಳಿಸುವುದು ಸೇರಿದಂತೆ ತೆರಿಗೆ ವಿಚಾರ ಒಂದಷ್ಟು ಬೇಡಿಕೆ ಸಲ್ಲಿಕೆ ಆಗಿದ್ದವು. ಇತ್ತೀಚೆಗೆ ಕೇಂದ್ರ ಸರ್ಕಾರ
ವ್ಯಾಪಾರಸ್ಥರು, ಗಾಹಕರು ಇಬ್ಬರಿಗೂ ಅನುಕೂಲ ಆಗುವಂತೆ ಕೇಂದ್ರ ಸರ್ಕಾರ ಜಿಎಸ್‌ಟಿ ಸರಳೀಕರಣಗೊಳಿಸಿರುವುದು ಸ್ವಾಗತಾರ್ಹ ಎಂದಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು, ಕೇಂದ್ರದ ಈ ನಿರ್ಧಾರದಿಂದ ಆಗುವ ಪ್ರಯೋಜನ ಬಗ್ಗೆ ವಿವರಿಸಿದ್ದಾರೆ.

ಕೆಂಪು ಕೋಟೆಯ ಮೇಲೆ ಪ್ರಧಾನಿ ನರೇಂದ್ರ ಮೋದಿಯವರು ಜಿಎಸ್‌ಟಿ ಕಡಿತ ಮಾಡುವ ಘೋಷಣೆ ಮಾಡಿರುವುದು ಅತ್ಯಂತ ಸ್ವಾಗತಾರ್ಹ. ತೆರಿಗೆಯ ಸರಳೀಕರಣ ಮಹತ್ವದ ಹೆಜ್ಜೆ ಘೋಷಣೆ ಮಾಡಿದ್ದಾರೆ. ಇದರಿಂದ ಬರುವಂತಹ ದಿನಗಳಲ್ಲಿ ವ್ಯಾಪಾರಸ್ಥರಿಗೆ ಮತ್ತು ಗ್ರಾಹಕರಿಗೆ ಬಹಳ ಅನುಕೂಲಕವಾಗಲಿದೆ. ಜಿಎಸ್‌ಟಿ ತೆರಿಗೆ ಬಂದು ಐದು ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಜಿಎಸ್‌ಟಿ ಒಂದು ರಾಷ್ಟ್ರ ಒಂದು ತೆರಿಗೆ ಮತ್ತು ತೆರಿಗೆ ಸರಳೀಕರಣ ಮತ್ತು ಅತ್ಯಂತ ಸರಳವಾಗಿರುವ ತೆರಿಗೆ ಪದ್ಧತಿ ಇರಬೇಕು. ವಿಶೇಷವಾಗಿ ಸಣ್ಣ ವ್ಯಾಪರಸ್ಥರಿಗೆ, ರೈತರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ನೆಚ್ಚಿನ ಪಧಾನಿ ನರೇಂದ್ರ ಮೋದಿಯವರು ತಂದಿದ್ದಾರೆ ಎಂದರು.

Basavaraj Bommai Welcomes GST Simplification and Tax Cuts Announced by PM Modi

ಈ ಐದು ವರ್ಷದ ಅನುಭವದಲ್ಲಿ ಕೆಲವು ಬದಲಾವಣೆ ಬಯಸಿ, ರೈತರು, ಸಣ್ಣ ವ್ಯಾಪಾರಸ್ಥರು, ದೊಡ್ಡ ವ್ಯಾಪಾರಸ್ಥರು ಎಲ್ಲರೂ ಕೂಡ ಅಭಿಪ್ರಾಯಪಟ್ಟ ಹಿನ್ನೆಲೆಯಲ್ಲಿ ತೆರಿಗೆಯ ಸ್ಲ್ಯಾಬ್ ಕಡಿಮೆ ಮಾಡಬೇಕು ಮತ್ತು ಕೆಲವು ವಸ್ತುಗಳ ತೆರಿಗೆ ಕಡಿಮೆ ಮಾಡಬೇಕು ಎಂದು ತಿರ್ಮಾನಿಸಲಾಗಿದೆ. ಜಿಎಸ್‌ಟಿ ಕೌನ್ಸಿಲ್‌ನಲ್ಲಿ ನನ್ನ ನೇತೃತ್ವದಲ್ಲಿ ಗ್ರೂಪ್‌ ಆಫ್ ಮಿನಿಸ್ಟರ್ಸ್ ಸುಮಾರು ಒಂದೂವರೆ ವರ್ಷ ನಾವು ಅಧ್ಯಯನ ಮಾಡಿ ಹಲವಾರು ಸರಳೀಕರಣ ಮತ್ತು ವರ್ಗೀಕರಣ ಮಾಡಿ ನಮ್ಮ ವರದಿ ಕೊಟ್ಟಿದ್ದೇವೆ.

ವರದಿಯಲ್ಲಿ ಬಹಳಷ್ಟು ದಿನಬಳಕೆಯಾಗುವ ವಸ್ತುಗಳು ಅವುಗಳನ್ನು ಕಡಿಮೆ ಸ್ಲ್ಯಾಬ್‌ನಲ್ಲಿ ಹಾಕುವಂಥದ್ದು ಸ್ಲ್ಯಾಬ್ ಸಂಖ್ಯೆ ಕಡಿಮೆ ಮಾಡುವುದು. ಇದರಿಂದ ವ್ಯಾಪಾರಸ್ಥರಿಗೆ ಮತ್ತು ಖರೀದಿದಾರರಿಗೆ ಇಬ್ಬರಿಗೂ ಅನುಕೂಲವಾಗುವ ರೀತಿಯಲ್ಲಿ ನಾವು ಕೆಲವು ಸಲಹೆ ಸೂಚನೆಗಳನ್ನು ಅಂದು ಜಿಎಸ್‌ಟಿ ಕೌನಿಲ್‌ನಲ್ಲಿ ಮಂಡನೆ ಮಾಡಿದ್ದೇವು ಎಂದು ಹೇಳಿದರು.

Basavaraj Bommai Welcomes GST Simplification and Tax Cuts Announced by PM Modi

ಜಿಎಸ್‌ಟಿ ಕೌನ್ಸಿಲ್‌ನಲ್ಲಿ ಒಪ್ಪಿರುವ ಕೆಲವು ತಿದ್ದುಪಡಿಗಳನ್ನು ತರಬೇಕೆಂದು ಕೇಂದ್ರ ಸರ್ಕಾರದ ತೀರ್ಮಾನವನ್ನು ಕೆಂಪು ಕೋಟೆಯ ಮೇಲೆ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿರುವುದು ಅತ್ಯಂತ ಸ್ವಾಗತಾರ್ಹ. ತೆರಿಗೆಯ ಸರಳೀಕರಣ ಮಹತ್ವದ ಹೆಜ್ಜೆ ಘೋಷಿಸಿದ್ದಾರೆ.

ಬರುವಂತಹ ದಿನಗಳಲ್ಲಿ ವ್ಯಾಪಾರಸ್ಥರಿಗೆ ಮತ್ತು ಗ್ರಾಹಕರಿಗೆ ಬಹಳ ಅನುಕೂಲಕವಾಗಲಿದೆ. ಇದೊಂದು ನರೇಂದ್ರ ಮೋದಿಯವರ ವಿಶೇಷವಾಗಿರುವ ಕೊಡುಗೆ ಬರುವ ದೀಪಾವಳಿಗೆ ಅವರು ಮಾಡುತ್ತಿರುವುದು ಇಡೀ ರಾಷ್ಟ್ರವೇ ಸ್ವಾಗತ ಮಾಡುತ್ತದೆ ಎನ್ನುವ ವಿಶ್ವಾಸ ನನಗಿದೆ ಎಂದು ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+