ಹೆದ್ದಾರಿಗಳಲ್ಲಿ ಬಾರ್‌ ಲೈಸೆನ್ಸ್ ನವೀಕರಣಕ್ಕೆ ಗ್ರೀನ್‌ ಸಿಗ್ನಲ್‌

ಬೆಂಗಳೂರು, ಸೆಪ್ಟೆಂಬರ್ 3: ಹಿಂದಿನ ಕಾಂಗ್ರೆಸ್‌ ಸರ್ಕಾರ ಮಧ್ಯದ ಮೇಲಿನ ತೆರಿಗೆ ಹೆಚ್ಚಿಸಿ ಹೆದ್ದಾರಿಗಳಲ್ಲಿರುವ ಬಾರ್‌ಗಳನ್ನು ಬಂದ್ ಮಾಡಿಸಿತ್ತು. ಆದರೆ ಕಾಂಗ್ರೆಸ್‌-ಜೆಡಿಎಸ್ ಮೈತ್ರಿ ಸರ್ಕಾರ ಮತ್ತೊಮ್ಮೆ ಹೆದ್ದಾರಿಗಳಲ್ಲಿರುವ ಬಾರ್‌ ನವೀಕರಣಕ್ಕೆ ಅವಕಾಶ ನೀಡಿದೆ.

ಇಂದಿನಿಂದಲೇ ನವೀಕರಣ ಪ್ರಕ್ರಿಯೆ ಆರಂಭೌಆಗಿದೆ. ಹಳೆಯ ಆದೇಶದಿಂದ ಬಂದ್ ಆಗಿದ್ದ ಗ್ರಾಮೀಣ ಭಾಗದ ಹೆದ್ದಾರಿ ಪಕ್ಕದ ಬಾರ್‌ಗಳೆಲ್ಲ ಮತ್ತೆ ಆರಂಭವಾಗಲಿವೆ.

ಈ ಕುರಿತು ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸಿದೆ. ಪರವಾನಗಿ ನವೀಕರಣಕ್ಕೆ ಹೆಚ್ಚುವರಿ ಶುಲ್ಕವಿರುವುದಿಲ್ಲ. ರಾಷ್ಟ್ರೀಯ ಹೆದ್ದಾರಿಯಿಂದ 500 ಮೀಟರ್ ಅಂತರದಲ್ಲಿನ ಮದ್ಯದಂಗಡಿಗಳನ್ನು ಬಂದ್ ಮಾಡುವಂತೆ 2017ರಲ್ಲಿ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಇದೀಗ ಸುಮಾರು 20ರಿಂದ 25 ಮದ್ಯದಂಗಡಿಗಳು ತೆರೆದುಕೊಳ್ಳಲಿವೆ.

Bars in highways: License renewal resumes

ಸುಪ್ರೀಂಕೋರ್ಟ್ ಆದೇಶದ ಬಳಿಕ ರಾಜ್ಯ ಸರ್ಕಾರ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಿಂದ ಹಾದು ಹೋಗಿರುವ ರಾಜ್ಯದ 1476.69 ಕಿ.ಮೀ ಹೆದ್ದಾರಿಯನ್ನು ನಗರ, ಸ್ಥಳೀಯ ಪ್ರಾಧಿಕಾರದ ರಸ್ತೆಗಳು ಎಂದು ಘೋಷಣೆ ಮಾಡಿದ್ದರಿಂದ ನಗರ, ಪಟ್ಟಣ ಪ್ರದೇಶದ ಮದ್ಯದಂಗಡಿಗಳು ಪಾರಾಗಿದ್ದವು.

ಆದರೆ ಗ್ರಾಮೀಣ ಭಾಗದಲ್ಲಿನ ಹೆದ್ದಾರಿ ಪಕ್ಕದ 500 ಮೀ.ಒಳಗಿನ ಎಲ್ಲ ಮದ್ಯದಂಗಡಿಗಳು ಬಂದ್ ಆಗಿದ್ದವು. ಕೆಲವು ಸ್ಥಳವನ್ನು ಶಾಶ್ವತವಾಗಿ ಬಳಸಿದ್ದರು. ಇನ್ನು ಕೆಲವರು ಸ್ಥಳ ಬದಲಾಯಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+