ಬೆಂಗಳೂರು ಬಾರ್ ಪರಿಚಾರಕಿ ಮೇಲೆ ಅತ್ಯಾಚಾರ?
ಬಾರ್ ಗೆ ಬರುತ್ತಿದ್ದ ಗ್ರಾಹಕ ಚಕ್ರಧರ ರೆಡ್ಡಿಯಿಂದ ಅತ್ಯಾಚಾರಕ್ಕೊಳಗಾಗಿರುವುದಾಗಿ ದೂರು ಕೊಟ್ಟಿರುವ ಸಂತ್ರಸ್ತೆ.
ಬೆಂಗಳೂರು, ಮಾರ್ಚ್ 10: ನಗರದ ರೆಸಿಡೆನ್ಸಿ ರಸ್ತೆಯಲ್ಲಿರುವ ಬಾರ್ ಒಂದರಲ್ಲಿ ಪರಿಚಾರಕಿಯಾಗಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳ ಮೇಲೆ ಚಕ್ರಧರ ರೆಡ್ಡಿ ಎಂಬಾತ ಅತ್ಯಾಚಾರ ಎಸಗಿರುವುದಾಗಿ ಹೇಳಲಾಗಿದೆ. ಸಂತ್ರಸ್ಥ ಯುವತಿ ಪೊಲೀಸರಿಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.
ಮಾ. 5ರಂದು ರಾಮಮೂರ್ತಿ ನಗರ ಪೊಲೀಸ್ ಠಾಣೆಗೆ ದೂರು ನೀಡಿರುವ ಯುವತಿ, '' ಬಾರ್ ಗೆ ಆಗಾಗ ಗ್ರಾಹಕನಾಗಿ ಬರುತ್ತಿದ್ದ ಚಕ್ರಧರ ರೆಡ್ಡಿ ತನಗೆ ಪರಿಚಿತನಾಗಿದ್ದ. ಇದು ಸ್ನೇಹಕ್ಕೆ ತಿರುಗಿ ಆಗಾಗ ಭೇಟಿಯಾಗುತ್ತಿದ್ದೆವು. ಒಂದೊಮ್ಮೆ ಆತ ಪಾನೀಯಕ್ಕೆ ಮತ್ತು ಬರುವ ಔಷಧಿ ಮಿಶ್ರಣ ಮಾಡಿ ನನ್ನನ್ನು ಪ್ರಜ್ಞೆ ತಪ್ಪುವಂತೆ ಮಾಡಿ ನನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ'' ಎಂದು ದೂರಿದ್ದಾಳೆ.[ಬೆಂಗಳೂರು: ರೇಪ್ ಕೇಸಿನಲ್ಲಿ ಜಾಮೀನು ಕೊಟ್ರು, ಆತ ಮತ್ತೆ ರೇಪ್ ಮಾಡಿದ]

ಅತ್ಯಾಚಾರದ ಕೆಲವಾರು ಫೋಟೋಗಳನ್ನು ಇಟ್ಟುಕೊಂಡಿರುವ ಚಕ್ರಧರ ರೆಡ್ಡಿ ತನಗೆ ಹಣ ನೀಡಬೇಕೆಂದೂ, ಹಣ ನೀಡದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಆ ಫೋಟೋಗಳನ್ನು ಹಾಕುವುದಾಗಿ ಹಾಗೂ ತನ್ನ ಮೇಲೆ ಆ್ಯಸಿಡ್ ಎರಚುವುದಾಗಿ ಬೆದರಿಕೆ ಹಾಕಿದ್ದಾನೆಂದೂ ಯುವತಿ ಆರೋಪಿಸಿದ್ದಾಳೆ.[ಕೇರಳದಲ್ಲಿ 7 ಅಪ್ರಾಪ್ತ -ಅನಾಥ ಬಾಲಕಿಯರ ಮೇಲೆ ಸರಣಿ ರೇಪ್]
ಪ್ರಕರಣದ ತನಿಖೆಯನ್ನು ನಡೆಸಿರುವ ಪೊಲೀಸರು, ಚಕ್ರಧರ ರೆಡ್ಡಿಯನ್ನು ಕರೆಸಿ ವಿಚಾರಣೆಗೊಳಪಡಿಸಿದ್ದಾರೆ. ಆಗ, ಇಬ್ಬರ ನಡುವೆ ಹಣಕಾಸು ವಿಚಾರವೊಂದರ ಬಗ್ಗೆ ಮನಸ್ತಾಪ ಇತ್ತೆಂಬ ಮತ್ತೊಂದು ಮಾಹಿತಿಯೂ ಬಯಲಾಗಿದ್ದು, ವಿಚಾರಣೆ ಮುಂದುವರಿಸಿದ್ದಾರೆ.











Click it and Unblock the Notifications