ಜಯನಗರದಲ್ಲಿ 25, 26ರಂದು ಮತದಾರರ ನೋಂದಣಿ
ಬೆಂಗಳೂರು, ಜ.25 : ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ಜ.25 ಮತ್ತು 26ರಂದು ಮತದಾರರ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಜಯನಗರದಲ್ಲಿ ಬಿಬಿಎಂಪಿ, ಜಯನಗರ ವ್ಯಾಪಾರಿಗಳ ಸಂಘ ಹಾಗೂ ಆರ್ಟ್ ಆಫ್ ಲೀವಿಂಗ್ ಜಂಟಿಯಾಗಿ ಈ ಅಭಿಯಾನವನ್ನು ಹಮ್ಮಿಕೊಂಡಿವೆ.
ಉತ್ತಮ ಭಾರತಕ್ಕಾಗಿ ಮತದಾನದ ಪ್ರಮಾಣ ಹೆಚ್ಚಿಸಲು ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಹಲಸೂರು, ಚಾಮರಾಜಪೇಟೆ, ಬನಶಂಕರಿ, ಜೆ.ಪಿ.ನಗರ, ಮಲ್ಲೇಶ್ವರ ಸೇರಿದಂತೆ ನಗರದ 46 ಕಡೆಗಳಲ್ಲಿ ಅಭಿಯಾನ ಪೂರ್ಣಗೊಂಡಿದ್ದು, 31 ಸಾವಿರ ಮಂದಿಯಿಂದ ನೋಂದಣಿಗಾಗಿ ಅರ್ಜಿ ಸಲ್ಲಿಸಿದ್ದಾರೆ.

ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಚುನಾವಣಾ ಆಯೋಗ ಹಾಗೂ ಬಿಬಿಎಂಪಿ ವತಿಯಿಂದ 'ನಿಮ್ಮ ಬಡಾವಣೆಗಳಲ್ಲಿ ಮತದಾರರ ನೋಂದಣಿ ಅಭಿಯಾನ ಆಯೋಜಿಸುವುದು ಹೇಗೆ?' ಎಂಬ ಕುರಿತು ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ. ಫೆಬ್ರವರಿಯಲ್ಲಿ 'ವೋಟಾಥಾನ್' ಕೂಡ ಆಯೋಜಿಸಲಾಗಿದೆ. [ಮತದಾರರ ಪಟ್ಟಿಗೆ ಹೆಸರು ಸೇರಿಸುವುದು ಹೇಗೆ]
ಸದ್ಯ ಜಯನಗರದಲ್ಲಿ ಅಭಿಯಾನ ಆರಂಭಗೊಂಡಿದ್ದು, ಜ.25 ಮತ್ತು 26ರಂದು ಜಯನಗರದ ಶಾಪಿಂಗ್ ಕಾಂಪ್ಲೆಕ್ಸ್‌ನ ಪಾರ್ಕಿಂಗ್ ಸ್ಥಳದ ಬಳಿ ಬೆಳಗ್ಗೆ 9 ರಿಂದ ಸಂಜೆ 6ರವರೆಗೆ ಮತದಾರರ ನೋಂದಣಿ ಅರ್ಜಿ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಮೊ. 93424 01398 ಸಂಪರ್ಕಿಸಬಹುದು.
ನೋಂದಣಿಗೆ ಅಗತ್ಯವಿರುದ ದಾಖಲೆಗಳು
* ವೋಟರ್ ಐಡಿ ನೋಂದಣಿ ಫಾರ್ಮ್ 6
* ಪಾಸ್ ಪೋರ್ಟ್ ಸೈಜ್ ಪೋಟೋ
* ವಿಳಾಸ ಧೃಡೀಕರಣ ಪತ್ರ












Click it and Unblock the Notifications