ಬೆಂಗಳೂರು ರೇಪ್: ಪ್ರಕರಣದ ಮತ್ತೊಂದು ಮುಖ ಅನಾವರಣ

ಮೊದಲನೆಯದಾಗಿ ಬಾಧಿತ ಯುವತಿ ಹಗದೂರಿನಲ್ಲಿ ವಾಸವಾಗಿದ್ದ ಮುಂಬೈ ಮೂಲದ ಲೈಂಗಿಕ ಕಾರ್ಯಕರ್ತೆ. ಬಂಧಿತ ಆರೋಪಿಗಳು ಹಾವೇರಿ ಜಿಲ್ಲೆಯ ಬಾಹುಬಲಿ ಸುಭಾಷ್, ಆತನ ಅಕ್ಕನ ಮಗ ಬಾಹುಬಲಿ ಶೀತಲ್, ಮಂಡ್ಯ ಜಿಲ್ಲೆ ಕೆಆರ್ ಪೇಟೆಯ ಮಂಜುನಾಥ್ ಮತ್ತು ಬನ್ನೇರುಘಟ್ಟ ರಸ್ತೆ ಸಮೀಪದ ಅರಕೆರೆಯ ವಿನೋದ್ ರಾಜ್. ಬಂಧಿತರೆಲ್ಲಾ 20ರ ಹರೆಯದವರು. ಬಂಧಿತರನ್ನು ಇಂದು ಪೊಲೀಸರು ತಮ್ ಕಸ್ಟಡಿಗೆ ಪಡೆಯುವ ಸಾಧ್ಯತೆಯಿದೆ.
ಹಗದೂರಿನ ಬಾಡಿಗೆ ಮನೆಯಲ್ಲಿ ಒಟ್ಟಿಗೆ ವಾಸವಾಗಿದ್ದ ಆರೋಪಿಗಳು ಇಂಟರ್ನೆಟ್ ಮೂಲಕ ವೇಶ್ಯಾವಾಟಿಕೆ ದಂಧೆಯ ದಲ್ಲಾಳಿಗಳ ಮೊಬೈಲ್ ಸಂಖ್ಯೆಯನ್ನು ಕಲೆ ಹಾಕಿದ್ದರು. ನಂತರ ಆ ದಲ್ಲಾಳಿಗಳ ಮೂಲಕ ಮುಂಬೈ ಮೂಲದ ಸದರಿ ಮಹಿಳೆಯನ್ನು ಸಂಪರ್ಕಿಸಿ ಶನಿವಾರ (ಮೇ 10) ರಾತ್ರಿ ಹಗದೂರಿನ ಮನೆಗೆ ಕರೆಸಿಕೊಂಡು ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. (ಬೆಂಗಳೂರು: ಬ್ಯೂಟಿ ಪಾರ್ಲರ್ ಯುವತಿ ಗ್ಯಾಂಗ್ ರೇಪ್)
ಆದರೆ ಆರೋಪಿಗಳು ಹೇಳುವಂತೆ ಅವರುಗಳು ಅತ್ಯಾಚಾರ ಮಾಡಿಲ್ಲವಂತೆ. ಅದಕ್ಕಾಗಿ ಆಕೆಯ ಮನೆಗೆ ಕರೆಯಿಸಿಕೊಂಡಾಗ ಆಕೆ ಅದಕ್ಕೆ ಸಹಕರಿಸಿಲ್ಲ. ಪ್ರಮುಖ ಆರೋಪಿ ಸುಭಾಷನಿಗೆ ಅವಾಚ್ಯವಾಗಿ ನಿಂದಿಸಿ, ಮನೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಳು. ಇದರಿಂದ ಕೋಪಗೊಂಡ ಸುಭಾಷ್ ಆಕೆಯನ್ನು ಮನೆಯ ಮಹಡಿಗೆ ಎಳೆದೊಯ್ದು ಕಟ್ಟಡದಿಂದ ಕೆಳಗೆ ತಳ್ಳಿದ್ದ ಎನ್ನಲಾಗಿದೆ.
ಮುಂದೆ... ಕಟ್ಟಡದಿಂದ ಕೆಳಗೆ ಬಿದ್ದ ಆಕೆಯನ್ನು ನೆರೆಹೊರೆಯವರು ಆಸ್ಪತ್ರೆಗೆ ದಾಖಲಿಸಿದ್ದರು. ಇತ್ತ, ಘಟನೆ ನಂತರ ಆರೋಪಿಗಳು ಹೆಬ್ಬಗೋಡಿಯಲ್ಲಿನ ಸ್ನೇಹಿತನ ಮನೆಯಲ್ಲಿ ತಲೆಮರೆಸಿಕೊಂಡಿದ್ದರು. ಈ ಮಧ್ಯೆ, ಬಾಧಿತ ಯುವತಿ ತನ್ನ ಮೇಲೆ ಅತ್ಯಾಚಾರ ಆಗಿರುವ ಬಗ್ಗೆ ಪೊಲೀಸರಿಗೆ ಏನೂ ಹೇಳಿಲ್ಲ. ಹಾಗಾಗಿ ಪೊಲೀಸರು ಆಕೆಯ ಹೇಳಿಕೆಗಾಗಿ ಕಾಯುತ್ತಿದ್ದಾರೆ.
ಘಟನೆಯ ಸಂದರ್ಭದಲ್ಲಿ ಮಹಿಳೆಯ ಮೊಬೈಲಿಗೆ ಬಂದಿದ್ದ ಕರೆಗಳ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಮಾಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯಕ್ಕೆ ಯುವತಿಯ ಹತ್ಯೆ ಯತ್ನ ಆರೋಪದಡಿ ಪೊಲೀಸರು ನಾಲ್ವರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಾಹುಬಲಿ ಸುಭಾಷ್ ಮತ್ತು ಬಾಹುಬಲಿ ಶೀತಲ್ ಔಷಧ ಕಂಪೆನಿಗಳಲ್ಲಿ ಉದ್ಯೋಗಿಗಳು. ಮಂಜುನಾಥ್ ಹೊಸಕೋಟೆಯ ಕಾರು ಮಾರಾಟ ಮಳಿಗೆಯೊಂದರಲ್ಲಿ ಕೆಲಸದಲ್ಲಿದ್ದಾನೆ. ಇನ್ನು ಅರಕೆರೆಯ ವಿನೋದ್ ರಾಜ್ ದ್ವಿತೀಯ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ.












Click it and Unblock the Notifications