ಸರಗಳ್ಳನನ್ನು ಹಿಡಿದ ಸಾಹಸಿ ಸಂಚಾರಿ ಪೊಲೀಸ್ ಪೇದೆ
ಬೆಂಗಳೂರು, ಸೆ. 26 : ಮಹಿಳೆಯ ಸರ ಕದ್ದು ಪರಾರಿಯಾಗುತ್ತಿದ್ದ ಕಳ್ಳನನ್ನು ಸಂಚಾರಿ ಪೊಲೀಸ್ ಪೇದೆ ಹಿಡಿದಿರುವ ಘಟನೆ ಜಯನಗರದಲ್ಲಿ ನಡೆದಿದೆ. ಸಾಹಸ ಮಾಡಿದ ಪೇದೆ ಆನಂದ್‌ಗೆ ನಗರ ಪೊಲೀಸ್ ಆಯುಕ್ತರು 25 ಸಾವಿರ ರೂ. ಬಹುಮಾನ ಘೋಷಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ಜಯನಗರದಲ್ಲಿ ಮಹಿಳೆಯ ಸರವನ್ನು ಕದ್ದು ಪರಾರಿಯಾಗುತ್ತಿದ್ದವನನ್ನು ಕರ್ತವ್ಯ ನಿತರರಾಗಿದ್ದ ಸಂಚಾರಿ ಪೊಲೀಸ್ ಪೇದೆ ಆನಂದ್ ನೋಡಿದರು. ತಕ್ಷಣ ಕಳ್ಳನನ್ನು ಓಡಿಸಿಕೊಂಡು ಹೋದ ಅವರು 100 ಗ್ರಾಂ ಚಿನ್ನದ ಸರವನ್ನು ಅವನಿಂದ ಕಿತ್ತುಕೊಂಡರು.

ಸಂಚಾರಿ ಪೇದೆ ಆನಂದ್ ಸಾಹಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಆನಂದ್‌ಗೆ 25 ಸಾವಿರ ರೂ.ಗಳ ಬಹುಮಾನ ಘೋಷಿಸಿದ್ದಾರೆ. ಸಾಹಸಿ ಪೇದೆಗೆ ನಮ್ಮ ಕಡೆಯಿಂದಲೂ ಸೆಲ್ಯೂಟ್.












Click it and Unblock the Notifications