ಮದ್ಯದ ಅಮಲಿನಲ್ಲಿ ವೇಗದ ಸವಾರಿ: ಟೆಕ್ಕಿ ಸಾವು

bangalore-techie-n-vivek-killed-in-bike-accident-hosur-road
ಬೆಂಗಳೂರು, ಜ.25: ಯುವ ಸಾಫ್ಟ್ ವೇರ್‌ ಇಂಜಿನಿಯರ್ ಒಬ್ಬರು ಮದ್ಯದ ಅಮಲಿನಲ್ಲಿ ಅತಿ ವೇಗವಾಗಿ ಬೈಕ್‌ ಚಲಾಯಿಸಿ, ಕೊನೆಗೆ ಅದು ನಿಯಂತ್ರಣಕ್ಕೆ ಬಾರದೆ ರಸ್ತೆಗೆ ಉರುಳಿದ ಪರಿಣಾಮ ಆತ ಕೊನೆಯುಸಿರೆಳೆದಿದ್ದಾರೆ. ಈ ಘಟನೆಯು ಅಶೋಕನಗರ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯ ಹೊಸೂರು-ಲಷ್ಕರ್‌ ಮುಖ್ಯರಸ್ತೆಯಲ್ಲಿ ಗುರುವಾರ ತಡರಾತ್ರಿ ನಡೆದಿದೆ.

ಜೆಪಿ ನಗರದ ನಿವಾಸಿ ನಿವಾಸಿ ಎನ್‌ ವಿವೇಕ್‌ (24) ಮೃತಪಟ್ಟ ಟೆಕ್ಕಿ. ಅಪಘಾತದಲ್ಲಿ ಗಾಯಗೊಂಡಿರುವ ಮೃತನ ಸ್ನೇಹಿತ ರಾಕೇಶ್‌ (25) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೆಲಸ ಮುಗಿಸಿ ಸ್ನೇಹಿತನೊಂದಿಗೆ ಬೈಕಿನಲ್ಲಿ ವಿವೇಕ್‌ ಮನೆಗೆ ಮರಳುವಾಗ ಈ ಘಟನೆ ನಡೆದಿದೆ. ಮೃತ ವಿವೇಕ್‌ ಮೈಸೂರು ಜಿಲ್ಲೆಯವರಾಗಿದ್ದು, ಮಾರತ್‌ ಹಳ್ಳಿಯ ಸಾಫ್ಟ್ ವೇರ್‌ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದರು. ಎಂದಿನಂತೆ ಕೆಲಸ ಮುಗಿಸಿ ಗುರುವಾರ ರಾತ್ರಿ 1 ಗಂಟೆ ಸುಮಾರಿಗೆ ಬೈಕಿನಲ್ಲಿ ಅವರು ಮನೆಗೆ ಮರಳುತ್ತಿದ್ದು, ಮಾರ್ಗ ಮಧ್ಯೆ ಗೆಳೆಯನ ಜತೆ ಮದ್ಯ ಸೇವಿಸಿದ್ದಾರೆ.

ನಂತರ ಬೈಕನ್ನು ಹೆಚ್ಚು ವೇಗದಲ್ಲಿ ಚಾಲನೆ ಮಾಡಿಕೊಂಡು ಬಂದಿದ್ದು, ಲ್ಯಾಂಗ್ ಫೋರ್ಡ್ ಟೌನ್ ಲಷ್ಕರ್‌ ರಸ್ತೆಯಲ್ಲಿದ್ದ ಗುಂಡಿಗೆ ಚಕ್ರ ಹರಿದಿದೆ. ಶರವೇಗದಲ್ಲಿದ್ದರಿಂದ ನಿಯಂತ್ರಣ ತಪ್ಪಿ ಬೈಕಿನಿಂದ ಕೆಳಗೆ ಬಿದ್ದ ವಿವೇಕ್‌ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಆತನನ್ನು ಸ್ಥಳೀಯರು ಹತ್ತಿರದ ಸೇಂಟ್‌ ಫಿಲೋಮಿನಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫ‌ಲಕಾರಿಯಾಗದೆ ವಿವೇಕ್‌ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+