Get Updates
Get notified of breaking news, exclusive insights, and must-see stories!

ವಿಬ್ ಗಯಾರ್ ಪ್ರಕರಣ : ಇಬ್ಬರು ಸಿಬ್ಬಂದಿ ಬಂಧನ

ಬೆಂಗಳೂರು, ಜು. 29 : ಬೆಂಗಳೂರಿನ ಹೊರವಲಯದ ಮಾರತ್ ಹಳ್ಳಿಯ ವಿಬ್‌ ಗಯಾರ್ ಶಾಲೆಯಲ್ಲಿ ಒಂದನೇ ತರಗತಿ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರು ಶಾಲೆಯಲ್ಲಿ ಜಿಮ್ನಾಸ್ಟಿಕ್ ತರಬೇತುದಾರರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಅವರು, ಶಾಲೆಯ ಜಿಮ್ನಾಸ್ಟಿಕ್ ತರಬೇತುದಾರರಾದ ವಾಸಿಂ ಪಾಷ ಮತ್ತು ಲಾಲ್ ಗಿರಿ ಅಲಿಯಾಸ್ ಇಂಧ್ರ ಅವರನ್ನು ಒಂದನೇ ತರಗತಿ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ ಎಂದು ಹೇಳಿದರು.

M N Reddi

ಪ್ರಕರಣಕ್ಕೆ ಸಂಬಂಧಿಸಂತೆ ಸ್ಕೇಟಿಂಗ್ ತರಬೇತುದಾರ ಮುಸ್ತಾಫ, ಜಿಮ್ನಾಸ್ಟಿಕ್ ತರಬೇತುದಾರರಾದ ವಾಸಿಂ ಪಾಷ ಮತ್ತು ಲಾಲ್ ಗಿರಿ ಅವರನ್ನು ಬಂಧಿಸಲಾಗಿದೆ. ಶಾಲೆಯ ಸಂಸ್ಥಾಪಕ ರುಸ್ತುಂ ಕೇರವಾಲಾ ಅವರನ್ನು ಬಂಧಿಸಲಾಗಿತ್ತು. ಆದರೆ, ಜಾಮೀನಿನ ಮೇಲೆ ಅವರು ಬಿಡುಗಡೆಯಾಗಿದ್ದಾರೆ. [ಅತ್ಯಾಚಾರ ಪ್ರಕರಣದ ನಂತರ ಶಾಲೆ ಆರಂಭ]

ಪೊಲೀಸ್ ವಶದಲ್ಲಿರುವ ಮುಸ್ತಾಫ ನೀಡಿದ ಮಾಹಿತಿ ಮೇರೆಗೆ ಜಿಮ್ನಾಸ್ಟಿಕ್ ತರಬೇತುದಾರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ವಿಚಾರಣೆ ವೇಳೆ ಈ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆಂದು ತಿಳಿದುಬಂದಿದೆ. ಮೂವರು ಸೇರಿ ಶಾಲೆಯ ಕೊಠಡಿಯೊಂದರಲ್ಲಿ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದರು ಎಂಬ ಮಾಹಿತಿ ವಿಚಾರಣೆ ವೇಳೆ ಲಭ್ಯವಾಗಿದೆ. [ಶಾಲೆ ಆರಂಭ: ಆತಂಕದಲ್ಲಿ ಪೋಷಕರು]

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+