Get Updates
Get notified of breaking news, exclusive insights, and must-see stories!

Bangalore metro: ಈ ಮೆಟ್ರೋ ಮಾರ್ಗದಲ್ಲಿ ಒಂದಲ್ಲ.. ಎರಡಲ್ಲ ಬರೋಬ್ಬರಿ 720 ಮರಗಳ ಕೊಂಬೆಗಳಿಗೆ ಬೀಳಲಿದೆ ಕೊಡಲಿ-ಮಾಹಿತಿ

ಬೆಂಗಳೂರು, ಏಪ್ರಿಲ್‌, 12: ಬೆಂಗಳೂರಿನ ನಮ್ಮ ಮೆಟ್ರೋ ಇತ್ತೀಚಿನ ದಿನಗಳಲ್ಲಿ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಾಗುತ್ತಲೇ ಇದೆ. ಆದರೆ ಇದೀಗ ಈ ಮೆಟ್ರೋ ಮಾರ್ಗದಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 750 ಮರಗಳ ಕೊಂಬೆಗಳಿಗೆ ಕೊಡಲಿ ಹಾಕಲು ಬಿಎಂಆರ್‌ಸಿಎಲ್‌ ಮುಂದಾಗಿದೆ. ಹಾಗಾದರೆ ಇದರ ಅಸಲಿ ಉದ್ದೇಶ ಏನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಸಾಮಾನ್ಯವಾಗಿ ಮೆಟ್ರೋ ಹೋಗುವ ಮಾರ್ಗದಲ್ಲಿ ಯಾವುದೇ ಅಡೆತಡೆಗಳು ಇರಬಾರದು. ಒಂದು ವೇಳೆ ಏನಾದರೂ ಮರಗಳ ಕೊಬೆಗಳು ಅಡ್ಡ ಬಂದಿದ್ದರೆ ಮುಂಜಾಗ್ರತೆಗಾಗಿ ಅವುಗಳನ್ನು ಯಾವುದೇ ಬೇರೆ ದಾರಿಯಿಲ್ಲದೆ ಕತ್ತರಿಸಲಾಗುತ್ತದೆ.

Bangalore metro 750 trees Branches will be cut on this metro line know details

ಮೆಟ್ರೊ ರೈಲಿನ ಸುರಕ್ಷತೆ ದೃಷ್ಟಿಯಿಂದ ವಯಾಡಕ್ಟ್‌ಗೆ ಹೊಂದಿಕೊಂಡಿರುವ ಮರಗಳ ಕೊಂಬೆಗಳನ್ನು ಕತ್ತರಿಸಲು ಬಿಎಂಆರ್‌ಸಿಎಲ್‌ ನಿರ್ಧಾರ ಮಾಡಿದೆ. ನಮ್ಮ ಮೆಟ್ರೋದ ವೈಟ್‌ಫೀಲ್ಡ್‌ನಿಂದ ಚಲ್ಲಘಟ್ಟವರೆಗೆ (ನೇರಳೆ ಮಾರ್ಗ) ಹಾಗೂ ನಾಗಸಂದ್ರದಿಂದ ಸಿಲ್ಕ್ ಇನ್‌ಸ್ಟಿಟ್ಯೂಟ್‌ (ಹಸಿರು ಮಾರ್ಗ)ವರೆಗಿನ ಒಟ್ಟು 74 ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ವಯಾಡಕ್ಟ್‌ಗೆ ಹೊಂದಿಕೊಂಡಿರುವ ಸುಮಾರು 750 ಮರಗಳ ಕೊಂಬೆಗಳಿಗೆ ಕೊಡಲಿ ಹಾಕಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ವರ್ಷಕ್ಕೆ ಎರಡು ಬಾರಿ ಟೊಂಗೆಗಳಿಗೆ ಕತ್ತರಿ ಹಾಕಲಾಗುತ್ತದೆ. ಇದೀಗ ನೇರಳೆ ಮಾರ್ಗದಲ್ಲಿನ 370 ಹಾಗೂ ಹಸಿರು ಮಾರ್ಗದಲ್ಲಿ 380 ಮರಗಳ ರೆಂಬೆಗಳನ್ನು 30 ಮೀಟರ್‌ ಕತ್ತರಿಸಲು ಬಿಎಂಆರ್‌ಸಿಎಲ್ ನಿರ್ಧಾರ ಮಾಡಿದೆ. ಇದಕ್ಕಾಗಿ 36 ಲಕ್ಷ ರೂಪಾಯಿ ಮೌಲ್ಯದ ಬಿಡ್‌ ಸಹ ಆಹ್ವಾನಿಸಿದ್ದು, ಇದಕ್ಕಾಗಿ 60 ಟನ್‌ ತೂಕದ ಹೈಡ್ರಾಲಿಕ್‌ ಕ್ರೇನ್‌ ಮತ್ತು ಮರದ ಕೊಂಬೆ ಕತ್ತರಿಸುವಲ್ಲಿ ನುರಿತ ಕಾರ್ಮಿಕರನ್ನೊಳಗೊಂಡ ಸಂಸ್ಥೆ ಬಿಡ್‌ನಲ್ಲಿ ಭಾಗವಹಿಸಲು ನಿಯಮವನ್ನು ಹೊರಡಿಸಿದೆ.

ಹಸಿರು ಮಾರ್ಗದ ಶ್ರೀರಾಂಪುರ, ಸಂಪಿಗೆ ರಸ್ತೆ, ನ್ಯಾಷನಲ್‌ ಕಾಲೇಜು, ಲಾಲ್‌ಬಾಗ್‌, ಸೌತ್‌ ಎಂಡ್‌ ವೃತ್ತ, ಜಯನಗರ, ಆರ್‌.ವಿ.ರಸ್ತೆ, ಬನಶಂಕರಿ ಹಾಗೂ ಜೆಪಿ ನಗರದಲ್ಲಿ ಹೆಚ್ಚಿನ ಮರಗಳು ವಯಾಡಕ್ಟ್‌ಗೆ ಹೊಂದಿಕೊಂಡಿವೆ. ನೇರಳೆ ಮಾರ್ಗದಲ್ಲಿ ದೀಪಾಂಜಲಿ ನಗರ, ಅತ್ತಿಗುಪ್ಪೆ, ವಿಜಯನಗರ, ಹೊಸಹಳ್ಳಿ, ಮಾಗಡಿ ರಸ್ತೆ, ಟ್ರಿನಿಟಿ ಮತ್ತು ಹಲಸೂರು ನಿಲ್ದಾಣದ ಭಾಗದಲ್ಲಿ ಹೆಚ್ಚಿನ ಮರಗಳನ್ನು ಹೊಂದಿದೆ.

ಇನ್ನು ನೇರಳೆ ಮಾರ್ಗದಲ್ಲಿ ಹೆಚ್ಚು ಮರಗಳಿರುವ ಸಿಟಿ ರೈಲು ನಿಲ್ದಾಣ, ಸೆಂಟ್ರಲ್‌ ಕಾಲೇಜು, ವಿಧಾನಸೌಧ ಹಾಗೂ ಕಬ್ಬನ್‌ಪಾರ್ಕ್ ಭೂಗತ ಮಾರ್ಗ ಆಗಿರುವುದರಿಂದ ಮರಗಳು ಕೊಡಲಿ ಬೀಳುವುದನ್ನು ತಪ್ಪಿಸಿಕೊಳ್ಳಲಿವೆ.

ಮರಗಳ ಕೊಂಬೆಗಳು ಬೆಳೆದು ಮೆಟ್ರೊ ವಯಾಡಕ್ಟ್‌ಗೆ ಟಚ್‌ ಆಗುತ್ತಿವೆ. ಇನ್ನು, ಮಳೆಗಾಲದಲ್ಲಿ ಗಾಳಿ ಹೆಚ್ಚಿರುವುದರಿಂದ ನಿರಂತರವಾಗಿ ವಯಾಡಕ್ಟ್‌ಗೆ ಬಡಿದು ಹಾನಿ ಆಗಬಹುದು. ಮರಗಳು ಧರೆಗುರುಳುವ ಸಮಯದಲ್ಲಿ ರಭಸಕ್ಕೆ ಮೆಟ್ರೊ ಮಾರ್ಗಕ್ಕೆ ಹಾನಿ ಆಗಬಹುದು. ವಯಾಡಕ್ಟ್ ಮೇಲೆ ವಿದ್ಯುತ್‌ ರೈಲು ಹಳಿಗಳು ಇರುವುದಿಂದ ಆ ಕೊಂಬೆಗಳು ತಾಗಿದರೆ, ಆಪಾಯ ಉಂಟಾಗುವ ಸಾಧ್ಯತೆಯಿದೆ. ಸಿಗ್ನಲಿಂಗ್‌ ಸಮಸ್ಯೆ ಕೂಡ ಎದುರಾಗಬಹುದಾಗಿದ್ದು, ಈ ಎಲ್ಲಾ ದೃಷ್ಟಿಯಿಂದ ಮರಗಳ ಕೊಂಬೆಗಳಿಗೆ ಕೊಡಲಿ ಹಾಕಲಾಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+