ಬೆಂಗಳೂರು ಜೈನ ಮಂದಿರ ದೋಚಿದ್ದು ಸೆಕ್ಯೂರಿಟಿ ಗಾರ್ಡ್

temple
ಬೆಂಗಳೂರು, ಅ, 31 : ಬೆಂಗಳೂರಿನ ಅಕ್ಕಿಪೇಟೆ ಜೈನ ಮಂದಿರ ಕಳವು ಪ್ರಕರಣದ ಆರೋಪಿಗಳು ಸಿಕ್ಕಿ ಬಿದಿದ್ದಾರೆ. ದೇವಾಲಯದ ಭದ್ರತಾ ಸಿಬ್ಭಂದಿ ಸೇರಿದಂತೆ ಆರು ಜನ ಆರೋಪಿಗಳನ್ನು ಕಾಟನ್ ಪೇಟೆ ಪೊಲೀಸರು ಬಂಧಿಸಿದ್ದಾರೆ. ದೇವಾಲಯದ ಭದ್ರತಾ ಸಿಬ್ಭಂದಿಯೇ ಪ್ರಕರಣದ ಸಂಚು ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಬೆಂಗಳೂರು ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಆರೋಪಿಗಳ ಬಂಧನದ ಕುರಿತು ಮಾಹಿತಿ ನೀಡಿದರು. ಜೈನ ದೇವಾಲಯದಲ್ಲಿ ಭದ್ರತಾ ಸಿಬ್ಬಂದಿಯೇ ಕಳ್ಳತನದ ಪ್ರಕರಣದ ಸಂಚು ರೂಪಿಸಿದ್ದ ಎಂದು ಔರಾದ್ಕರ್ ತಿಳಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ 6 ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.

ಬಂಧಿತರು ನೇಪಾಳ ಮೂಲದ ಜೈಬಹದ್ದೂರ್ (38), ಬಷು ಅಲಿಯಾಸ್ ಬಷುಕಟ್ಟಿ (40), ರಾಜೇಶ್‌ಸಿಂಗ್ (34), ಬಾನು ಬಹದ್ದೂರ್ (37), ಪ್ರಕಾಶ್ ಬಹದ್ದೂರ್ (27) ಹಾಗೂ ಉತ್ತರ ಪ್ರದೇಶ ಮೂಲದ ಸಂಜಯ್‌ಕುಮಾರ್ ವರ್ಮ (28) ಎಂದು ಆಯುಕ್ತರು ಮಾಹಿತಿ ನೀಡಿದರು. ಆರೋಪಿಗಳಿಂದ 40 ಗ್ರಾಂ ಚಿನ್ನಾಭರಣ ಹಾಗೂ 2 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಭದ್ರತಾ ಸಿಬ್ಬಂದಿಯೇ ಸೂತ್ರಧಾರ : ದೇವಾಲಯದ ಭದ್ರತಾ ಸಿಬ್ಬಂದಿಯಾಗಿ ನಾಲ್ಕು ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದ ಪ್ರಕಾಶ್ ಬಹದ್ದೂರ್ ಈ ಕಳ್ಳತನದ ಪ್ರಮುಖ ಸೂತ್ರದಾರ. ಶ್ವೇತಾಂಬರ ಜೈನಮಂದಿರಕ್ಕೆ ಅ.19 ರಂದು ಕರ್ತವ್ಯಕ್ಕೆ ಆಗಮಿಸಿದ ಈತ, ಮೊದಲು ಭದ್ರತಾ ಸಿಬ್ಬಂದಿಗಳಿಗೆ ಊಟದಲ್ಲಿ ಮತ್ತು ಬರುವ ಔಷಧ ಬೆರೆಸಿ ಪ್ರಜ್ಞೆ ತಪ್ಪಿಸಿದ ನಂತರ ತಮ್ಮ ಕಳ್ಳತನ ನಡೆಸಿದ್ದಾರೆ. (ಅಕ್ಕಿಪೇಟೆ ಜೈನ ದೇಗುಲದಲ್ಲಿ 25 ಲಕ್ಷ ಲೂಟಿ)

ಬಂಧಿತ ಪ್ರಕಾಶ ಪೂರ್ವ ನಿಯೋಜಿತವಾಗಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಕತ್ತಲಾಗುತ್ತಿದ್ದಂತೆಯೇ ಎಲ್ಲಾ ಸಿಬ್ಬಂದಿಗಳನ್ನು ಒಟ್ಟಿಗೆ ಊಟ ಮಾಡೋಣವೆಂದು ಒಪ್ಪಿಸಿದ್ದ ಈತ ಅದರಲ್ಲಿ ಮತ್ತು ಬರಿಸುವ ಔಷಧ ಹಾಕಿದ್ದ. ಊಟ ಮಾಡಿದ ನಂತರ ಎಲ್ಲರೂ ಪ್ರಜ್ಞೆ ಕಳೆದುಕೊಂಡಿದ್ದರು. ನಂತರ ತಮ್ಮ ಕಾರ್ಯಾಚರಣೆ ನಡೆಸಿದ್ದರು. ಅನುಮಾನ ಬರಬಾರದೆಂದು ಗ್ರಿಲ್‌ಗಳನ್ನು ಕತ್ತಿರಿಸಿದ್ದರು. ಕದ್ದ ಮಾಲನ್ನು ಎಲ್ಲರೂ ಹಂಚಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ತನಿಖೆ ನಡೆಸಲು ರಚಿಸಲಾಗಿದ್ದ ವಿಶೇಷ ತಂಡದಲ್ಲಿದ್ದ ಕೆಂಗೇರಿ ಉಪವಿಭಾಗದ ಎಸಿಪಿ ಸತ್ಯನಾರಾಯಣ ಕುದೂರ್‌, ಕಬ್ಬನ್‌ಪಾರ್ಕ್‌ ಎಸಿಪಿ ನ್ಯಾಮೇಗೌಡ, ಕಾಟನ್‌ಪೇಟೆ ಇನ್ಸ್‌ಪೆಕ್ಟರ್‌ ಬಿ. ಸುನೀಲ್‌ ಕುಮಾರ್‌ ಹಾಗೂ ಕೆ.ಪಿ.ಸತ್ಯನಾರಾಯಣ್‌ ಘಟನೆ ನಡೆದ ಹತ್ತು ದಿನಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸ್ ಆಯುಕ್ತರು ಎಲ್ಲಾ ಅಧಿಕಾರಿಗಳಿಗೂ ಅಭಿನಂದನೆ ಸಲ್ಲಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+