• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮತ್ತಷ್ಟು ಸ್ಮಾರ್ಟ್ ಆಗಲಿದೆ ಕೆಂಪೇಗೌಡ ಏರ್‌ಪೋರ್ಟ್

|
Google Oneindia Kannada News

ಬೆಂಗಳೂರು, ಜುಲೈ 23: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆ ಹೊಣೆ ಹೊತ್ತಿರುವ ಬೆಂಗಳೂರು ಇಂಟರ್‌ ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ ಡಿಜಿಟಲ್ ಸೇವೆ, ತಂತ್ರಜ್ಞಾನ, ಕಾರ್ಯಾಚರಣೆ ಹಾಗೂ ಗ್ರಾಹಕರ ಸೇವೆಗಳನ್ನು ಮತ್ತಷ್ಟು ಉತ್ತಮಪಡಿಸುವ ನಿಟ್ಟಿನಲ್ಲಿ ಐಬಿಎಂ ಕಂಪನಿಯೊಂದಿಗೆ 10 ವರ್ಷದ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕಿದೆ.

ಐಬಿಎಂನ ಹೈಬ್ರಿಡ್ ಕ್ಲೌಡ್ ಸಾಧ್ಯತೆಗಳು, ರೆಡ್ ಹಾಟ್ ಆಟೊಮೇಷನ್ ಹಾಗೂ ಕಿಂಡ್ರಿಲ್ ತಂತ್ರಜ್ಞಾನವು ವಿಮಾನ ನಿಲ್ದಾಣದ ಮೂಲಸೌಕರ್ಯ ನಿರ್ವಹಣೆ ಸೇವೆಗಳನ್ನು ಉತ್ತಮಪಡಿಸಲು ನೆರವಾಗಲಿದೆ.

ಬೆಂಗಳೂರು: ಕೊರೊನಾದಿಂದಾಗಿ ವಿಮಾನಯಾನ ಶೇ.66ರಷ್ಟು ಕುಸಿತಬೆಂಗಳೂರು: ಕೊರೊನಾದಿಂದಾಗಿ ವಿಮಾನಯಾನ ಶೇ.66ರಷ್ಟು ಕುಸಿತ

ಹಾಗೆಯೇ ಭವಿಷ್ಯದಲ್ಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ನಿಭಾಯಿಸುವ ಹಾಗೂ ಕಾರ್ಯಾಚರಣೆಯಲ್ಲಿ ಹೊಂದಾಣಿಕೆ ತರುವ ನಿಟ್ಟಿನಲ್ಲಿ ತಂತ್ರಜ್ಞಾನದ ನೆರವು ನೀಡಲಿದೆ.

ಕೆಐಎ ವಿಮಾನ ನಿಲ್ದಾಣವನ್ನು ಮತ್ತಷ್ಟು ಸ್ಮಾರ್ಟ್, ಡಿಜಿಟಲೈಜ್ ವಿಮಾನ ನಿಲ್ದಾಣವಾಗಿ ರೂಪಿಸಿರುವ ನಮ್ಮ ಪರಕಲ್ಪನೆ ಸಾಕಾರಗೊಳಿಸಲು ಐಬಿಎಂ ಜತೆಗಿನ ಪಾಲುದಾರಿಕೆ ಒಪ್ಪಂದ ಸಹಕಾರಿಯಾಗಲಿದೆ.

ಈ ನಿಟ್ಟಿನಲ್ಲಿ ಬಿಐಎಎಲ್, ಐಬಿಎಂ ಪಾಲುದಾರಿಕೆಯಲ್ಲಿ ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿ ಕೆಲಸ ಮಾಡಲು ಉತ್ಸುಕವಾಗಿದೆ ಎಂದು ಬಿಐಎಎಲ್ ಸಿಇಒ ಹರಿ ತಿಳಿಸಿದ್ದಾರೆ.

   ಖಚಡ ಮಂತ್ರಿಗಳಿಂದ ಯಡಿಯೂರಪ್ಪನಿಗೆ ಸಂಕಷ್ಟ | Oneindia Kannada

   ಮೂಲಸೌಕರ್ಯ ಸೇವೆಗಳ ವ್ಯವಹಾರ ವೃದ್ಧಿ, ವಿಮಾನ ನಿಲ್ದಾಣದಲ್ಲಿ ಮುಂದಿನ ಪೀಳಿಗೆಯನ್ನು ದೃಷ್ಟಿಯಲ್ಲಿರಿಸಿಕೊಂಡು ವಾಸ್ತುಶಿಲ್ಪ ವಿನ್ಯಾಸ ಹಾಗೂ ಅನುಷ್ಠಾನದಂತಹ ಕಾರ್ಯಗಳನ್ನು ಕೈಗೊಳ್ಳಲಿದೆ ಎಂದು ಐಬಿಎಂ ತಿಳಿಸಿದೆ.

   English summary
   Bangalore International Airport to become Smart Airport in coming years! In a bid to create an “Airport in a Box” platform, which transforms technology, operations, as well as customer experience, the operator of Kempegowda International Airport in Bengaluru (KIAB/BLR Airport), Bangalore International Airport Limited (BIAL), has signed a ten-year partnership with the company- IBM.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X