ಅ- ಅತ್ಯಾಚಾರ, ಆ-ಆತ್ಮರಕ್ಷಣೆ, ಇ-ಇರಿದುಬಿಡು...
ಬೆಂಗಳೂರು.ಜು.31: ಅ- ಅತ್ಯಾಚಾರ, ಆ-ಆತ್ಮರಕ್ಷಣೆ, ಇ-ಇರಿದುಬಿಡು.... ವಿದ್ಯಾರ್ಥಿನಿಯರ ಮೇಲೆ ಎರಗುವ ಕಾಮುಕರನ್ನು ಇರಿದು ಬಿಡು.
ಪ್ರಸ್ತುತ ಶಾಲೆಯಲ್ಲಿ ನಡೆಯತ್ತಿರುವ ಅತ್ಯಾಚಾರ ಪ್ರಕರಣಗಳನ್ನು ನೋಡಿದರೆ, ಮುಂದಿನ ದಿನಗಳಲ್ಲಿ ಕನ್ನಡ ವರ್ಣಮಾಲೆಯನ್ನು ಶಾಲೆಯಲ್ಲಿ ಹೀಗೆ ಕಲಿಸಬೇಕಾಗುತ್ತದೆ ಎಂದು ಎಂದು ಪುಟ್ಟ ಬಾಲಕಿ ತನ್ನ ಕೈಯಲ್ಲಿದ್ದ ಸ್ಲೇಟ್‌ನ್ನು ಎತ್ತಿ ತೋರಿಸಿ ಪ್ರತಿಭಟಿಸುತ್ತಿದ್ದಳು.
ಇದು ಪುಟ್ಟ ಬಾಲಕಿಯ ಮನದ ಮಾತು ಮಾತ್ರವಲ್ಲ, ಟೌನ್‌ಹಾಲ್‌ನಿಂದ ಫ್ರೀಡಂಪಾರ್ಕ್ ವರೆಗೆ ಅತ್ಯಾಚಾರ ಮತ್ತು ಎಂಇಎಸ್ ಪುಂಡಾಟ ಖಂಡಿಸಿ ಗುರುವಾರ ಜು.31 ರಂದು ನಡೆದ ಬೆಂಗಳೂರು ಬಂದ್ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ, ಐದು ಸಾವಿರಕ್ಕೂ ಅಧಿಕ ಮಂದಿ ಪ್ರತಿಭಟನಾಕಾರರ ದುಗುಡವಾಗಿತ್ತು.[ರೇಪ್ ವಿರೋಧಿ ಬೆಂಗಳೂರು ಬಂದ್ ಗೆ ಶುಭಮಂಗಳ]
ತಂದೆ, ತಾಯಿ ಮಾತ್ರ ದೇವರು. ಗುರು ದೇವರಲ್ಲ ಎಂದು ಪ್ರತಿಭಟನಾಕಾರರು ಹೇಳಿದರೆ, ಇನ್ನೊಂದು ಕಡೆಯಲ್ಲಿ ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ ,ಕರ್ನಾಟಕದ ಕೀರ್ತಿಯನ್ನು ಉಳಿಸಿ ಎಂದು ಜನರು ಶಾಂತವಾಗಿ ಪ್ರತಿಭಟನೆ ನಡೆಸುವ ಮೂಲಕ ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿದರು.[ಬೆಂಗಳೂರು ಬಂದ್‌ನಲ್ಲಿ ಕರವೇ ನಾರಾಯಣ ಗೌಡ ಏಕಿಲ್ಲ?]
ಗುರುವಾರದ ಬಂದ್ ಚಿತ್ರಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

ಅಆಇಈ..
ಅ- ಅತ್ಯಾಚಾರ, ಆ- ಆತ್ಮರಕ್ಷಣೆ, ಇ-ಇರಿದುಬಿಡು, ಈ- ಈವರನ್ನು ಇರಿದು ಬಿಡು .. ವಿದ್ಯಾರ್ಥಿನಿಯರ ಮೇಲೆ ಎರಗುವ ಕಾಮುಕರನ್ನು ಇರಿದು ಬಿಡು

ಶಾಲೆಗೆ ಇನ್ನು ಮುಂದೆ ಚಾಕು!
ಪೆನ್ನು, ಪುಸ್ತಕ ತೆಗೆದುಕೊಂಡು ಹೋಗಬೇಕಾದ ನಾವು ಚಾಕು ತೆಗೆದುಕೊಂಡು ಹೋಗೋಣ ಎಂದು ಪುಟ್ಟ ಬಾಲಕಿ ತನ್ನ ಸ್ನೇಹಿತೆಯರಿಗೆ ಹೇಳುತ್ತಿದ್ದಾಳೆ.

ತಂದೆ ತಾಯಿ ಮಾತ್ರ ದೇವರು:
ತಂದೆ, ತಾಯಿ, ಶಿಕ್ಷಕರನ್ನು ದೇವರು ಎಂದು ನಂಬುತ್ತಿದ್ದೇವು. ಆದರೆ ಇನ್ನು ಮುಂದೆ ಶಿಕ್ಷಕರು ನಮ್ಮ ಪಾಲಿಗೆ ದೇವರಲ್ಲ.

ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ:
ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ ,ಕರ್ನಾಟಕದ ಕೀರ್ತಿಯನ್ನು ಉಳಿಸಿ

ಕಾಮಾಂಧರಿಗೆ ಧಿಕ್ಕಾರ:
ನಮ್ಮನ್ನು ಹೆತ್ತವಳು ಹೆಣ್ಣಲ್ಲವೆ, ತಾಯಿಯಾಗಿ, ಸಹೋದರಿಯಾಗಿ, ಮಗಳಾಗಿ, ಹೆಂಡತಿಯಾಗಿ, ಹೆಣ್ಣು ನಮ್ಮ ಬದುಕಿನಲ್ಲಿ ನೆಲೆಸಿದ್ದಾಳೆ ಅವರ ಮೇಲೆ ದುಷ್ಕೃತ್ಯವನ್ನು ಎಸಗುವುದು ಸರಿಯೇ?

ಶಾಲಾ ಕಾಲೇಜಿಗಳಿಗೆ ರಜಾ:
ಬಂದ್ ಹಿನ್ನಲೆಯಲ್ಲಿ ಬುಧವಾರವೇ ಕೆಲವು ಶಾಲಾ ಕಾಲೇಜುಗಳಿಗೆ ಆಡಳಿತ ಮಂಡಳಿ ರಜೆ ನೀಡಿತ್ತು. ಆದರೆ ರಜೆ ನೀಡದ ಕೆಲ ಆಡಳಿತ ಮಂಡಳಿಗಳು ಗುರುವಾರ ಶಾಲಾ ಕಾಲೇಜುಗಳಿಗೆ ರಜೆ ನೀಡಿದ್ದವು.

ನಮ್ಮನ್ನು ಕಾಪಾಡಿ:
ಹುಡುಗಿಯರನ್ನು ಕಾಪಾಡಿ, ನಮ್ಮ ವಿರುದ್ಧ ನಡೆಯುವ ದೌರ್ಜನ್ಯವನ್ನು ನಿಲ್ಲಿಸಿ.

ವಿದ್ಯಾರ್ಥಿನಿಯರಿಗೆ ಭದ್ರತೆ ನೀಡಿ:
ಶಾಲೆಯಲ್ಲಿ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಶಾಲೆಗೆ ಹೋಗಲು ಭಯವಾಗುತ್ತಿದ್ದು ವಿದ್ಯಾರ್ಥಿನಿಯರಿಗೆ ಭದ್ರತೆ ನೀಡಿ.

ಪೊಲೀಸ್ ಬಂದೋಬಸ್ತ್:
ಬಿಎಸ್‌ಎಫ್, ಸೇರಿದಂತೆ ಒಟ್ಟು ಎರಡು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಬಂದ್‌ಗಾಗಿ ನಿಯೋಜಿಸಲಾಗಿತ್ತು.

ಅಂಗಡಿಗಳು ಬಂದ್:
ಬಂದ್ ಹಿನ್ನಲೆಯಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಬಹುತೇಕ ಅಂಗಡಿಗಳು ಮುಚ್ಚಿದ್ದವು. ಮಧ್ಯಾಹ್ನದ ಬಳಿಕ ಅಂಗಡಿಗಳನ್ನು ತೆರೆಯುತ್ತಿದ್ದ ದೃಶ್ಯ ಅಲ್ಲಲ್ಲಿ ಕಂಡು ಬಂದಿತ್ತು.

ಸಂಚಾರ ದಟ್ಟಣೆ ಕಡಿಮೆ:
ಬಂದ್ ಹಿನ್ನಲೆಯಲ್ಲಿ ನಗರದ ಸಂಚಾರ ದಟ್ಟಣೆ ಮಧ್ಯಾಹ್ನದವರೆಗೂ ಕಡಿಮೆ ಇತ್ತು. ಮಧ್ಯಾಹ್ನದ ಬಳಿಕ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಯಿತು.

ಬಿಎಂಟಿಸಿಯಲ್ಲಿ ಜನ ಇಲ್ಲ:
ನಗರದಲ್ಲಿ ಬಿಎಂಟಿಸಿ ಬಸ್ಸುಗಳು ಎಂದಿನಂತೆ ಸಂಚರಿಸುತಿತ್ತು. ಆದರೆ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಿತ್ತು.

ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ
"ಮಕ್ಕಳಿಗೆ ಪಾಠ ಹೇಳಿಕೊಡುವ ಶಾಲೆಗಳೇ ಇಂದು ಅತ್ಯಾಚಾರ ಮಾಡುವ ತಾಣಗಳಾಗುತ್ತಿವೆ. ಇಲ್ಲಿಯವರೆಗೆ ಕಾಮುಕರು ನೀಚ ಕೃತ್ಯ ನಡೆಸಿದರೂ ಏನು ಆಗುವುದಿಲ್ಲ ಎಂದು ತಿಳಿದುಕೊಂಡಿದ್ದಾರೆ. ನಮಗೂ ಸಹನೆ ಇದೆ. ಸರ್ಕಾರಕ್ಕೆ ಎಚ್ಚರಿಕೆ ನೀಡುವ ದೃಷ್ಠಿಯಲ್ಲಿ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೇನೆ"
ಫ್ರೊ.ಸುಮಾ, ಕೇಂಬ್ರಿಡ್ಜ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ

ಕಾನೂನು ಜಾರಿಗೆ ತನ್ನಿ:
"ಅತ್ಯಾಚಾರಿಗಳ ವಿರುದ್ಧ ಪ್ರತಿಯೊಬ್ಬರು ಹೋರಾಟ ಮಾಡಬೇಕಿದೆ. ಕಠಿಣ ಕಾನೂನು ಜಾರಿಗೆ ತಂದರೆ ಮಾತ್ರ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಸಿಗಬಹುದು"
ಬಸವೇಶ್, ಕೃಷಿ ವಿಶ್ವವಿದ್ಯಾಲಯ ವಿದ್ಯಾರ್ಥಿ












Click it and Unblock the Notifications