ಬೆಂಗಳೂರು ಬಂದ್: ಕರವೇ ನಾರಾಯಣ ಗೌಡ ಏಕಿಲ್ಲ?
ಬೆಂಗಳೂರು, ಜು.31:ವಿವಿಧ ಕನ್ನಡ ಸಂಘಟನೆಗಳು ಅತ್ಯಾಚಾರ ಮತ್ತು ಎಂಇಎಸ್ ಪುಂಡಾಟ ಖಂಡಿಸಿ ಕರೆ ನೀಡಿದ ಬೆಂಗಳೂರು ಬಂದ್ ಗುರುವಾರ ಭಾಗಶಃ ಯಶಸ್ವಿಯಾಗಿದೆ.
ಕನ್ನಡ ಸಂಘಟನೆಗಳು ಬಂದ್‌ಗೆ ಕರೆ ನೀಡಿದರೂ, ನಾರಾಯಣ ಗೌಡರ ಕರ್ನಾಟಕ ರಕ್ಷಣಾ ವೇದಿಕೆ ಬಣ ಈ ಬಂದ್‌ಗೆ ಬೆಂಬಲ ನೀಡಿಲ್ಲ. ಹೀಗಾಗಿ ಬಹಳಷ್ಟು ಓದುಗರು, ಕನ್ನಡ ಹೋರಾಟಗಳು ಬಂದಾಗ ಮುಂಚೂಣಿಯಲ್ಲಿರುವ ನಾರಾಯಣ ಗೌಡರ ಬಣ ಈ ಬಂದ್‌ಗೆ ಬೆಂಬಲ ಯಾಕೆ ನೀಡಿಲ್ಲ ಎಂದು ಪ್ರಶ್ನಿಸಿದ್ದಾರೆ.[ಶಾಂತಿಯುವಾಗಿ ಮುಕ್ತಾಯಗೊಂಡ ಬೆಂಗಳೂರು ಬಂದ್]
ಈ ಕಾರಣಕ್ಕಾಗಿ ಒನ್ ಇಂಡಿಯಾ ಕನ್ನಡ ನಾರಾಯಣ ಗೌಡರನ್ನು ಮಾತನಾಡಿಸಿದ್ದು, ನಮ್ಮ ಬಣ ಯಾಕೆ ಈ ಬೆಂಗಳೂರು ಬಂದ್‌ಗೆ ಬೆಂಬಲ ನೀಡಿಲ್ಲ ಎನ್ನುವುದನ್ನು ತಿಳಿಸಿದ್ದಾರೆ. ಮುಂದಿನ ಪುಟದಲ್ಲಿ ಅವರ ಹೇಳಿಕೆಯನ್ನು ನೀಡಲಾಗಿದೆ.[ಅ- ಅತ್ಯಾಚಾರ, ಆ-ಆತ್ಮರಕ್ಷಣೆ, ಇ-ಇರಿದುಬಿಡು. ಬಾಲಕಿಯ ಸ್ಲೇಟ್‌ನಲ್ಲಿದ್ದ ವರ್ಣಮಾಲೆ]

ಬಂದ್ ಒಂದೇ ಉತ್ತರವಲ್ಲ:
ಯಾವುದೇ ಸಮಸ್ಯೆಯನ್ನು ಬಂದ್ ಮೂಲಕ ನಿವಾರಿಸಲು ಸಾಧ್ಯವಿಲ್ಲ. ಒಂದು ವೇಳೆ ಬಂದ್ ಮೂಲಕವೇ ಸಮಸ್ಯೆ ನಿವಾರಣೆಯಾದಲ್ಲಿ ಎಲ್ಲ ಸಮಸ್ಯೆಗಳಿಗೆ ಬಂದ್ ಮಾಡಬೇಕಾಗುತ್ತದೆ.

ಸರ್ಕಾರ ಕ್ರಮ ಕೈಗೊಂಡಿದೆ:
ಎಂಇಎಸ್ ಪುಂಡಾಟದ ನಾವು ಪ್ರತಿಭಟನೆ ಮಾಡುತ್ತಲೇ ಬಂದಿದ್ದೇವೆ. ಎರಡು ದಿನಗಳ ಹಿಂದೆಯಷ್ಟೇ ಸಹ ಪ್ರತಿಭಟನೆ ನಡೆಸಿದ್ದೇವೆ. ಇನ್ನು ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದೆ. ಇವುಗಳಿಗೆಲ್ಲ ಬಂದ್ ನಡೆಸುವ ಅಗತ್ಯವಿಲ್ಲ.

ಬಂದ್‌ಗೂ ನಮಗೂ ದೂರ:
ಕನ್ನಡ, ಕರ್ನಾಟಕಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಆದಲ್ಲಿ ನಾವು ಹೋರಾಟ ಮಾಡಿಕೊಂಡೆ ಬಂದಿದ್ದೇವೆ. ಬಂದ್‌ನಿಂದಾಗಿ ಕೆಲ ಜನರಿಗೆ ಭಯವಾದರೆ, ಮತ್ತೆ ಕೆಲವರು ರಜೆ ಸಿಗುತ್ತದೆ. ಒಂದು ದಿನದ ಬಂದ್‌ನಿಂದಾಗಿ ಕೋಟ್ಯಂತರ ರೂ. ನಷ್ಟವಾಗುತ್ತದೆ. ಹೀಗಾಗಿ ಬಂದ್‌ಗೆ ಕರೆ ನೀಡಿ ಸಾರ್ವಜನಿಕರಿಗೆ ದಿನ ನಿತ್ಯ ಬದುಕಿಗೆ ತೊಂದರೆಯಾಗುವುಂತಹ ಯಾವುದೇ ಕೆಲಸಕ್ಕೆ ಕರವೇ ಮುಂದಾಗುವುದಿಲ್ಲ. ಕರವೇ ಯಾವಾಗಲೂ ಬಂದ್‌ನಿಂದ ದೂರ ಉಳಿಯುತ್ತದೆ.

ಜನರಿಗೆ ಸಮಸ್ಯೆ ನೀಡಿ ಹೋರಾಟ ಮಾಡುವುದಿಲ್ಲ:
ಸರ್ಕಾರದ ಕಿವಿ ಹಿಂಡುವ ಸಂದರ್ಭದಲ್ಲಿ ನಾವು ಸರಿಯಾಗಿ ಹಿಂಡಿಕೊಂಡೆ ಬಂದಿದ್ದೇವೆ. ಬಂದ್ ಮೂಲಕವೇ ನಾವು ಆಕ್ರೋಶವನ್ನು ವ್ಯಕ್ತಪಡಿಸುವ ಅಗತ್ಯವಿಲ್ಲ. ಎಂಇಎಸ್ ಮತ್ತು ಶಿವಸೇನೆ ನಿಷೇಧಿಸುವಂತೆ ಈಗಾಗಲೇ ಮುಖ್ಯಮಂತ್ರಿಗಳಿಗೆ, ಗೃಹಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಕರವೇ ಯಾವತ್ತೂ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಹೋರಾಟ ಮಾಡುತ್ತದೆ ವಿನಾಃ ಜನರಿಗೆ ಸಮಸ್ಯೆ ನೀಡಿ ಹೋರಾಟ ಮಾಡುವುದಿಲ್ಲ.
-
ಇನ್ಮುಂದೆ KPSC ಮೂಲಕ ಪ್ರತಿ ವರ್ಷ ಗ್ರೂಪ್ A, B ಅಧಿಕಾರಿಗಳ ನೇಮಕಾತಿ: ಕೃಷ್ಣ ಬೈರೇಗೌಡ ಸ್ಪಷ್ಟನೆ -
ಔಷಧಿ ಪೂರೈಸುವ ಕೆಸ್ಎಂಸಿಎಲ್ಗೆ ಐಎಎಸ್ ಅಧಿಕಾರಿ ಮುಖ್ಯಸ್ಥ, ಇ-ಔಷಧಿ ಸಾಫ್ಟವೇರ್ ಜಾರಿ: ದಿನೇಶ್ ಗುಂಡೂರಾವ್ -
Ugadi 2026: ಹಬ್ಬದ ಕಳೆ ಹೆಚ್ಚಿಸುವ ಸುಂದರ ರಂಗೋಲಿಗಳು; ಸರಳ, ಚುಕ್ಕಿ ಹಾಗೂ ಬಣ್ಣದ ರಂಗೋಲಿ ಐಡಿಯಾ ಇಲ್ಲಿದೆ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral












Click it and Unblock the Notifications