India
 • search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾಂಗ್ಲಾದೇಶಿ ಯುವತಿ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಕಾಲಿಗೆ ಗುಂಡೇಟು

|
Google Oneindia Kannada News

ಬೆಂಗಳೂರು, ಜೂ. 02: ಬಾಂಗ್ಲಾದೇಶಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ. ಈ ಮೂಲಕ ಒಂದೇ ಪ್ರಕರಣದಲ್ಲಿ ಎರಡು ಬಾರಿ ಶೂಟೌಟ್ ಮಾಡಿ ಮೂವರ ಕಾಲಿಗೆ ಗುಂಡು ಹಾರಿಸಿ ವಿಕೃತ ಕಾಮುಕರಿಗೆ ರಾಮಮೂರ್ತಿನಗರ ಪೊಲೀಸರು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಬಾಂಗ್ಲಾ ಮೂಲದ ಶೂಬಜ್ ಗುಂಡೇಟು ತಿಂದ ಆರೋಪಿ. ಯುವತಿಯ ಗುಪ್ತಾಂಗಕ್ಕೆ ಕಾಲಿನಲ್ಲಿ ಒದ್ದು ಹಲ್ಲೆ ಮಾಡಿದ್ದ. ವಿಡಿಯೋ ವೈರಲ್ ಆಗಿತ್ತು. ಪ್ರಕರಣ ಬೆಳಕಿಗೆ ಬಂದ ನಂತರ ರಾಂಪುರ ಸಮೀಪ ತಲೆ ಮರೆಸಿಕೊಂಡಿದ್ದ ಶೂಬಜ್‌ನನ್ನು ಬಂಧಿಸಲು ರಾಮಮೂರ್ತಿನಗರ ಪೊಲೀಸರು ತೆರಳಿದ್ದಾರೆ. ಬಂಧನಕ್ಕೆ ತೆರಳಿದ ಪೊಲೀಸರ ಮೇಲೆ ಬಟನ್ ಚಾಕುವಿನಿಂದ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಈ ವೇಳೆ ರಾಮಮೂರ್ತಿನಗರ ಪಿಎಸ್ಐ ಶಿವರಾಜ್ ನಿಂದ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಲಾಗಿದೆ. ಆ ಬಳಿಕ ಚಾಕುವಿನಿಂದ ಹಲ್ಲೆ ಮಾಡಲು ಯತ್ನಿಸಿದ್ದ ಆರೋಪಿ ಶೂಬಜ್ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆಯಲಾಗಿದೆ. ಈ ವೇಳೆ ಪಿಎಸ್ಐ ಶಿವರಾಜ್ ಪೊಲೀಸ್ ಸಿಬ್ಬಂದಿ ದೇವೇಂದ್ರ ಸಿಂಗ್ ಅವರಿಗೆ ಸಣ್ಣ ಗಾಯವಾಗಿದೆ.

ಬಂಧಿತರ ಸಂಖ್ಯೆ ಹತ್ತಕ್ಕೆ ಏರಿಕೆ: ಬಾಂಗ್ಲಾದೇಶಿ ಮೂಲದ ಯುವತಿಯನ್ನು ಬೆಂಗಳೂರಿಗೆ ಕರೆಸಿಕೊಂಡು ಸಾಮೂಹಿಕ ಅತ್ಯಾಚಾರ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚೆನ್ನೈನಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ ಹತ್ತಕ್ಕೆ ಏರಿದೆ. ಸಂತ್ರಸ್ತ ಯುವತಿ, ಬಂಧಿತ ಆರೋಪಿಗಳೆಲ್ಲರೂ ಬಾಂಗ್ಲಾದೇಶಿಯರೇ. ಮಸಾಜ್ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು.

Bangaladeshi Girl gang rape case: main accused shot in leg while trying to escape

ಹಣಕಾಸಿನ ವಿಚಾರವಾಗಿ ಜಗಳ ತೆಗೆದು ಮಸಾಜ್ ಪಾರ್ಲರ್ ನಡೆಸುತ್ತಿದ್ದ ಯುವತಿಯನ್ನು ಬೆಂಗಳೂರಿಗೆ ಕರೆಸಿಕೊಂಡು ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಮಿಗಿಲಾಗಿ ಯುವತಿ ಜತೆ ವಿಕೃತವಾಗಿ ನಡೆದುಕೊಂಡು ದೌರ್ಜನ್ಯ ಎಸಗಿದ್ದರು. ಈ ಕುರಿತ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆದ ಬಳಿಕ ರಾಮಮೂರ್ತಿನಗರ ಪೊಲೀಸರು ಪ್ರಕರಣವನ್ನು ಪತ್ತೆ ಮಾಡಿದ್ದರು.

   ಖಡಕ್ ಜಿಲ್ಲಾಧಿಕಾರಿ Rohini Sindhuri ಇಂಟ್ರೆಸ್ಟಿಂಗ್ ಕಹಾನಿ | Oneinda Kannada

   ಬಂಧಿತ ಅರೋಪಿಗಳು ಅಕ್ರಮವಾಗಿ ದೇಶಕ್ಕೆ ನುಸುಳಿದ್ದಾರೆ. ಪಶ್ಚಿಮ ಬಂಗಾಳ ಮೂಲಕ ಅಕ್ರಮವಾಗಿ ದೇಶಕ್ಕೆ ನುಸುಳಿ ಇಲ್ಲಿ ನಕಲಿ ಆಧಾರ್ ಕಾರ್ಡ್‌ಗಳನ್ನು ಮಾಡಿಸಿಕೊಂಡು ನಾನಾ ಅಕ್ರಮ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿ ಆರೋಪಿಗಳನ್ನು ದೇಶದಿಂದ ಗಡಿಪಾರು ಮಾಡಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

   English summary
   Bangaldeshi Girl Gang Rape case: Ramamurthy Nagara police have arrested another accused in the rape case of Bangladeshi girl know more
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X