Get Updates
Get notified of breaking news, exclusive insights, and must-see stories!

ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ರೈಲ್ವೆ ಮಾರ್ಗದ ಸ್ವಯಂ ಚಾಲಿತ ಸಿಗ್ನಲ್ ಆರಂಭ

ಬೆಂಗಳೂರು, ಫೆಬ್ರವರಿ 20: ನೈಋತ್ಯ ರೈಲ್ವೆಯು ಬೆಂಗಳೂರು ವಿಭಾಗದ ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣ-ವೈಟ್‌ಫೀಲ್ಡ್ ವರೆಗೆ ಕೈಗೊಂಡಿದ್ದ ಸ್ವಯಂ ಚಾಲಿತ ಸಿಗ್ನಲ್ ಅಳವಡಿಕೆ ಕಾಮಗಾರಿ ಮುಕ್ತಾಯಗೊಂಡಿದೆ.

ಒಟ್ಟು 19 ಕಿ.ಮೀವರೆಗೆ ಸ್ವಯಂ ಚಾಲಿತ ಸಿಗ್ನಲ್ ಅಳವಡಿಸಲಾಗಿದೆ. ಈ ನೂತನ ವ್ಯವಸ್ಥೆಗೆ ಮಂಗಳವಾರ ಚಾಲನೆ ನೀಡಲಾಗಿದೆ.

ದಂಡು-ವೈಟ್‌ ಫೀಲ್ಡ್ ಮಾರ್ಗದಲ್ಲಿ ಸ್ವಯಂ ಚಾಲಿತ ಸಿಗ್ನಲ್ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಥಮ ಹಂತದಲ್ಲಿ ದಂಡು-ಬೈಯಪ್ಪನಹಳ್ಳಿ ವರೆಗೆ ಸಿಗ್ನಲ್ ಅಳವಡಿಕೆ ಕಾಮಗಾರಿ ಕೈಗೆತ್ತಿಕೊಂಉ ಫೆ. 10ರಂದು ಪೂರ್ಣಗೊಳಿಸಿತ್ತು. ಇದೀಗ ಬೈಯಪ್ಪನಹಳ್ಳಿ-ಕೆಆರ್‌ಪುರಂ ನಡುವಿನ ಮಾರ್ಗ ಇಳಿಜಾರು ಹೊಂದಿರುವ ರೈಲು ಹಳಿ ಮಾರ್ಗವಾಗಿದೆ.

Baiyappanahalli, whitefield automatic railway signal started

ಇಂತಹ ಮಾರ್ಗದಲ್ಲಿ ಸ್ವಯಂ ಚಾಲಿತ ಸಿಗ್ನಲಿಂಗ್ ಅಳವಡಿಕೆ ಸೇಶದ ರೈಲ್ವೆ ಜಾಲದಲ್ಲಿಯೇ ಪ್ರಥಮ ಪ್ರಯೋಗವಾಗಿದೆ. ದಂಡು-ವೈಟ್‌ಫೀಲ್ಡ್‌ ಮಾರ್ಗದಲ್ಲಿ ಈ ಸ್ವಯಂ ಚಾಲಿತ ಸಿಗ್ನಲ್ ವ್ಯವಸ್ಥೆಯ ದಂಡು ಬೆಂಗಳೂರು ಪೂರ್ವ, ಬೈಯಪ್ಪನಹಳ್ಳಿ, ಕೃಷ್ಣರಾಜಪುರಂ, ಹೂಡಿ, ವೈಟ್‌ಫೀಲ್ಡ್ ನಲ್ಲಿ ಕಾರ್ಯ ನಿರ್ವಹಿಸಲಿದೆ.

ಬೆಂಗಳೂರು-ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ಮಾರ್ಗವು ಪ್ರಮುಖ ರೈಲು ಮಾರ್ಗವಾಗಿದ್ದು, ನಿತ್ಯ 86 ರೈಲುಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಇದರ ಜತೆಗೆ 26 ಉಪನಗರ ರೈಲುಗಳು ಸಂಚರಿಸುತ್ತವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+