B-Khata to A-Khata: ಬಿ - ಖಾತಾದಿಂದ ಎ -ಖಾತಾ: ಈ ಆಸ್ತಿಗಳ ಮೌಲ್ಯ ಭರ್ಜರಿ ಹೆಚ್ಚಳ, ರಿಯಲ್ ಎಸ್ಟೇಟ್‌ಗೆ ಬೂಸ್ಟ್‌!

B-Khata to A-Khata: ಬಿ - ಖಾತ ದಿಂದ ಎ - ಖಾತಾ: ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಬಿ - ಖಾತಾದಿಂದ ಎ- ಖಾತಾಗೆ ಅವಕಾಶ ಮಾಡಿಕೊಟ್ಟಿರುವುದು ಲಕ್ಷಾಂತರ ಜನ ಆಸ್ತಿದಾರರಿಗೆ ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ದೇಶದಾದ್ಯಂತ ವಿಸ್ತರಿಸುವ ಸಾಧ್ಯತೆ ಇದೆ. ಬಿ - ಖಾತಾದಿಂದ ಎ - ಖಾತಾಗೆ ಆಸ್ತಿಗಳನ್ನು ಪರಿವರ್ತನೆ ಮಾಡಿಕೊಳ್ಳಬೇಕು ಎಂದು ಆಸ್ತಿದಾರರು ಹಲವು ವರ್ಷಗಳಿಂದ ಪ್ರಯತ್ನಿಸುತ್ತಿದ್ದರು. ಆದರೆ ಅದಕ್ಕೆ ಕಾಲ ಕೂಡಿ ಬಂದಿರಲಿಲ್ಲ. ಇದೀಗ ಖಾತಾ ಪರಿವರ್ತನೆಗೆ ಸುವರ್ಣ ಕಾಲ ಅದರ ಸಂಪೂರ್ಣ ವಿವರ ಇಲ್ಲಿದೆ.

ಕಳೆದ ಒಂದು ವರ್ಷದಿಂದಲೂ ಬಿ - ಖಾತಾ ಹಾಗೂ ಇ - ಖಾತಾ ವಿಚಾರದಲ್ಲಿ ಸಾಕಷ್ಟು ಗೊಂದಲ ಏರ್ಪಟ್ಟಿತ್ತು. ಅಲ್ಲದೇ ಬಿ - ಖಾತಾದಿಂದ ಎ - ಖಾತಾ ಪರಿವರ್ತನೆಗೆ ಅವಕಾಶ ನೀಡುವುದಾಗಿ ರಾಜ್ಯ ಸರ್ಕಾರ ಹೇಳಿದ ಮೇಲೂ ಕೆಲವೊಂದು ಗೊಂದಲಗಳು ನಿರ್ಮಾಣವಾಗಿತ್ತು. ಕಟ್ಟಡಗಳ ನಿರ್ಮಾಣ ಕಾರ್ಯಕ್ಕೆ ಕಟ್ಟಡ ನಿರ್ಮಾಣ ನಕ್ಷೆ, ನೀರು ಹಾಗೂ ವಿದ್ಯುತ್ ಸರಬರಾಜು ಪೂರೈಕೆ ಗೊಂದಲ ಹಾಗೂ ಮಾರಾಟ ಮತ್ತು ಖರೀದಿ ಪ್ರಕ್ರಿಯೆಯಲ್ಲಿ ಭಾರೀ ಗೊಂದಲಗಳು ಸೃಷ್ಟಿಯಾಗಿತ್ತು.

B-Khata to A-Khata A Game Changer for Property Values

ಈ ಎಲ್ಲಾ ಕಾರಣಗಳಿಂದ ಹಾಗೂ ಎಲ್ಲಾ ಆಸ್ತಿಗಳ ಖರೀದಿ ಹಾಗೂ ಮಾರಾಟ ಪ್ರಕ್ರಿಯೆಯ ಮೇಲೆ ಕಳೆದ ಒಂದು ವರ್ಷದಿಂದಲೂ ಭಾರೀ ಪರಿಣಾಮ ಬೀರಿತ್ತು. ಮುಖ್ಯವಾಗಿ ರಿಯಲ್‌ ಎಸ್ಟೇಟ್ ಮಂಕಾಗಿತ್ತು. ಬಿ - ಖಾತಾಗೆ ಕಾನೂನು ತೊಡಕುಗಳು ಸಹ ಎದುರಾಗಿತ್ತು. ಅಂತಿಮವಾಗಿ ಕರ್ನಾಟಕ ಸರ್ಕಾರವು ಬಿ - ಖಾತಾದಿಂದ ಎ ಖಾತಾ ಪರಿವರ್ತನೆಗೆ ನಿಯಮ ರೂಪಿಸಿದ್ದು, ಅಪ್ಲಿಕೇಶನ್ ಪರಿಚಯಿಸಿದೆ. ಇದರಿಂದ ಲಕ್ಷಾಂತರ ಜನ ಬಿ - ಖಾತಾ ಆಸ್ತಿದಾರರಿಗೆ ಗುಡ್‌ನ್ಯೂಸ್ ಸಿಕ್ಕಿದೆ.

ರಿಯಲ್ ಎಸ್ಟೇಟ್ ಬೂಸ್ಟ್‌: ಇನ್ನು ಬಿ - ಖಾತಾದಿಂದ ಎ - ಖಾತಾ ಪರಿವರ್ತನೆಗೆ ಅವಕಾಶ ಸಿಕ್ಕಿರುವುದರಿಂದ ರಿಯಲ್ ಎಸ್ಟೇಟ್‌ಗೆ ಬೂಸ್ಟ್‌ ಸಿಕ್ಕಂತಾಗಿದೆ. ರಿಯಲ್ ಎಸ್ಟೇಟ್‌ನಲ್ಲಿ ಹೊಸ ಅಲೆ ಸೃಷ್ಟಿಯಾಗಿದೆ. ಕಳೆದ ಒಂದು ವರ್ಷದಿಂದ ಬಿ - ಖಾತಾದಲ್ಲಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿದ್ದವು. ಅದೆಲ್ಲವೂ ಈಗ ತಾರ್ಕಿಕ ಅಂತ್ಯವನ್ನು ಕಂಡಿದೆ.

ಭೂಮಿ ಹಾಗೂ ಆಸ್ತಿ ಬೆಲೆ ಹೆಚ್ಚಳದ ನಿರೀಕ್ಷೆ: ಅಲ್ಲದೇ ಬಿ - ಖಾತಾದಿಂದ ಎ - ಖಾತಾ ಪರಿವರ್ತನೆಗೆ ಅವಕಾಶ ನೀಡಿರುವುದರಿಂದಾಗಿ ಬರೋಬ್ಬರಿ 30ರಿಂದ 40 ಲಕ್ಷ ಆಸ್ತಿಗಳಿಗೆ ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ಬಿ - ಖಾತಾದಿಂದ ಎ - ಖಾತಾ ಪರಿವರ್ತನೆಗೆ ಜನ ಕಾಯುತ್ತಿದ್ದರು. ಆಸ್ತಿಗೆ ಮೌಲ್ಯ ಬರದೆ, ಬ್ಯಾಂಕ್‌ಗಳಿಂದ ಸಾಲ ಸಿಗದೆ ಹಾಗೂ ಮುಖ್ಯವಾಗಿ ಕಟ್ಟಡ ನಿರ್ಮಾಣಗಳಲ್ಲಿನ ತೊಡಕುಗಳಿಂದಲೂ ಸಮಸ್ಯೆ ಆಗಿತ್ತು. ಇದೀಗ ಬಿ ಖಾತಾ ಆಸ್ತಿದಾರರಿಗೆ ಬಂಪರ್ ಸಿಕ್ಕಂತಾಗಿದೆ. ಇದರಿಂದ ಆಸ್ತಿಗಳ ಮೌಲ್ಯ ಭಾರೀ ಹೆಚ್ಚಳವಾಗುವ ನಿರೀಕ್ಷೆ ಮೂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+