ಬೆಂಗಳೂರಲ್ಲಿ ಅವರೆ ಮೇಳ ಆರಂಭ, ವಿ.ವಿ.ಪುರಂಗೆ ಬನ್ನಿ

ಬೆಂಗಳೂರು, ಡಿಸೆಂಬರ್ 31 : ಚಳಿಗಾಲ ಆರಂಭವಾಗಿದೆ. ವಿ.ವಿ.ಪುರಂನ ಫುಡ್ ಸ್ಟ್ರೀಟ್‌ನಲ್ಲಿ ಜ.4ರಿಂದ 15ರ ತನಕ ಅವರೆ ಮೇಳ ನಡೆಯಲಿದೆ.

ವಾಸವಿ ಕಾಂಡಿಮೆಂಟ್ಸ್‌ ಮಾಲೀಕರಾದ ಗೀತಾ ಶಿವಕುಮಾರ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. 'ಜನವರಿ 4ರ ಗುರುವಾರ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಮೇಳಕ್ಕೆ ಚಾಲನೆ ನೀಡಲಿದ್ದಾರೆ'.

ಅವರೆ ಮೇಳದ ಚಿತ್ರಗಳನ್ನು ನೋಡಿ

Avarekalu Mela

ಅವರೆ ಮೇಳದಲ್ಲಿ ಅವರೆಯಿಂದ ತಯಾರಿಸಿದ ಇಡ್ಲಿ, ದೋಸೆ, ಪಾಯಸ, ಚಕ್ಕುಲಿ, ನಿಪ್ಪಟ್ಟು ಸೇರಿದಂತೆ 100 ಬಗೆಯ ಖಾದ್ಯಗಳು ದೊರೆಯಲಿದ್ದು, ಜನರು ಚಳಿಯ ಜೊತೆ ವಿವಿಧ ಖಾದ್ಯಗಳ ಸವಿ ಸವಿಯಬಹುದು.

'ಬೆಳೆಗಾರರಿಗೆ ನೆರವಾಗುವ ನಿಟ್ಟಿನಲ್ಲಿ ಮೇಳ ಹಮ್ಮಿಕೊಳ್ಳಲಾಗಿದೆ. ರೈತರಿಂದ ನೇರವಾಗಿ ಅವರೆ ಕಾಯಿ ಖರೀದಿ ಮಾಡಲಾಗುತ್ತದೆ. ಮಾರುಕಟ್ಟೆಗಿಂತ ಹೆಚ್ಚಿನ ಬೆಲೆಯನ್ನು ನೀಡಲಾಗುತ್ತದೆ' ಎಂದು ಗೀತಾ ಶಿವಕುಮಾರ್ ಹೇಳಿದರು.

ಜನವರಿ 4ರಿಂದ 15ರ ತನಕ ವಿ.ವಿ.ಪುರಂನಲ್ಲಿ, ಜನವರಿ 19 ರಿಂದ 28ರ ತನಕ ಮಲ್ಲೇಶ್ವರಂ ವೃತ್ತದ ಸರ್ಕಾರಿ ಶಾಲಾ ಮೈದಾನದಲ್ಲೂ ಅವರೆ ಕಾಯಿ ಮೇಳ ನಡೆಯಲಿದೆ.

ಫೆ.2ರಿಂದ 11ರ ನತಕ ನಾಗರಬಾವಿಯ ಪೂರ್ಣಿಮಾ ಹಾಲ್‌ನಲ್ಲಿ ಅವರೆ ಮೇಳ ನಡೆಯಲಿದ್ದು, ವಸತಿ ಸಚಿವ ಕೃಷ್ಣಪ್ಪ ಮೇಳವನ್ನು ಉದ್ಘಾಟಿಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+