• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶೀಘ್ರ ಬೆಂಗಳೂರಿನಲ್ಲಿ ಆಟೋ ಪ್ರಯಾಣ ದುಬಾರಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 29: ಶೀಘ್ರ ಬೆಂಗಳೂರಿನಲ್ಲಿ ಆಟೋ ಪ್ರಯಾಣ ದುಬಾರಿಯಾಗಲಿದೆ.ಆಟೋ ರಿಕ್ಷಾ ಪ್ರಯಾಣ ದರವನ್ನು ಶೇ.20ರಷ್ಟು ಹೆಚ್ಚು ಮಾಡುವ ಕುರಿತು ಸಾರಿಗೆ ಇಲಾಖೆ ಚಿಂತನೆ ನಡೆಸಿದೆ.

ಚಾಲಕರ ಆಗ್ರಹದ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗುತ್ತಿದ್ದು, ಒಂದೊಮ್ಮೆ ಅನುಮೋದನೆ ದೊರೆತಲ್ಲಿ ಆಟೋ ರಿಕ್ಷಾ ಪ್ರಯಾಣದ ಕನಿಷ್ಠ ದರ 25 ರೂ. ನಿಂದ 30 ರೂ.ಗೆ ಹೆಚ್ಚಳವಾಗಲಿದೆ. ಕನಿಷ್ಠ ದರದ ಬಳಿಕ ಪ್ರತಿ ಕಿಲೋಮೀಟರ್‌ಗೆ ಈಗಿರುವ 13 ರೂ. ಬದಲಾಗಿ 16 ರೂ. ನೀಡಬೇಕಾಗುತ್ತದೆ.

ಅ.28: ಮತ್ತೆ ಏರಿಕೆಯಾದ ಇಂಧನ ದರ; ಪ್ರಮುಖ ನಗರಗಳಲ್ಲಿ ದರವೆಷ್ಟು?ಅ.28: ಮತ್ತೆ ಏರಿಕೆಯಾದ ಇಂಧನ ದರ; ಪ್ರಮುಖ ನಗರಗಳಲ್ಲಿ ದರವೆಷ್ಟು?

ಇಂಧನ ದರ ಏರಿಕೆ ಹಾಗೂ ನಿರ್ವಹಣಾ ವೆಚ್ಚ ಹೆಚ್ಚಿರುವ ಕಾರಣ ಪ್ರಯಾಣ ದರ ಹೆಚ್ಚಿಸಬೇಕು ಎಂದು ಆಟೋ ಚಾಲಕರು ಸರ್ಕಾರವನ್ನು ಒತ್ತಾಯಿಸಿದ್ದರು.
ಆಟೋ ರಿಕ್ಷಾ ಚಾಲಕರ ಒಕ್ಕೂಟಗಳ ಜತೆ ಮಾತುಕತೆ ನಡೆಸಿದ ಬಳಿಕ ಇಲಾಖೆಯು ದರ ಹೆಚ್ಚಳ ಪ್ರಸ್ತಾವವನ್ನು ಪರಿಷ್ಕರಿಸಿದೆ.

ಈ ಹೊಸ ಪ್ರಸ್ತಾವನೆಯಲ್ಲಿ ಇಲಾಖೆಯು ಕನಿಷ್ಠ ದರದಲ್ಲಿ ಪ್ರಯಾಣಿಸಬಹುದಾದ ದೂರವನ್ನು 1.8 ಕಿ.ಮೀ ಬದಲಾಗಿ 1.9 ಕಿ.ಮೀ ನಿಗದಿಪಡಿಸಿದೆ.

ಈ ಮೊದಲು ಬೆಂಗಳೂರಿನಲ್ಲಿ 2013ರ ಡಿಸೆಂಬರ್‌ನಲ್ಲಿ ಆಟೋ ರಿಕ್ಷಾ ದರ ನಿಗದಿ ಮಾಡಲಾಗಿದ್ದು, ಆಗ ಕನಿಷ್ಠ ದರವನ್ನು 20 ರಿಂದ 25 ರೂ.ಗೆ ಹೆಚ್ಚಿಸಲಾಗಿತ್ತು. ಪ್ರತಿ ಕಿ.ಮೀಗೆ ಪ್ರಯಾಣ ದರವನ್ನು 11 ರಿಂದ 13ರೂ.ಗೆ ಹೆಚ್ಚಿಸಲಾಗಿತ್ತು.

ಇತ್ತೀಚೆಗೆ ನಡೆದ ಸಭೆಯಲ್ಲಿ ಆಟೋ ಚಾಲಕರ ಸಂಘ ಹಾಗೂ ಸಾರಿಗೆ ಇಲಾಖೆ ಒಮ್ಮತಕ್ಕೆ ಬಂದಿದೆ. ಬೆಲೆ ಹೆಚ್ಚಳ ಪ್ರಸ್ತಾವದ ಕಡತವನ್ನು ಸಚಿವಾಲಯಕ್ಕೆ ಕಳುಹಿಸಿಕೊಡಲಾಗಿತ್ತು.

ಆಟೋ ರಿಕ್ಷಾ ಚಾಲಕರ ಅನೇಕ ಒಕ್ಕೂಟಗಳು ಪ್ರಯಾಣ ದರ ಹೆಚ್ಚಳಕ್ಕೆ ಆಗ್ರಹಿಸಿದ್ದವು. ಸಾಂಕ್ರಾಮಿಕದ ಈ ಸಮಯದಲ್ಲಿ ದರ ಹೆಚ್ಚಿಸುವುದರಿಂದ ಪ್ರಯಾಣಿಕರು ಪ್ರಯಾಣದಿಂದ ದೂರ ಉಳಿಯುವ ಸಾಧ್ಯತೆಯೂ ಇದೆ ಎಂಬ ಕಳವಳವೂ ಕೆಲವು ಒಕ್ಕೂಟಗಳ ಸದಸ್ಯರಲ್ಲಿ ಇವೆ ಎಂದು ಪ್ರಾದೇಶಿಕ ಸಾರಿಗೆ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

ದಿನೇ ದಿನೇ ಇಂಧನ ದರ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣ ದರ ಹೆಚ್ಚಿಸುವಂತೆ ಮೂರು ವರ್ಷಗಳಿಂದ ಆಟೋ ರಿಕ್ಷಾ ಚಾಲಕರು ಆಗ್ರಹಿಸುತ್ತಿದ್ದಾರೆ.

ಪ್ರಯಾಣ ದರ ಹೆಚ್ಚಳವನ್ನು ಆಟೋ ಚಾಲಕರ ಹೆಚ್ಚಿನ ಎಲ್ಲಾ ಒಕ್ಕೂಟಗಳೂ ಸ್ವಾಗತಿಸಿವೆ. ಕೆಲವೊಂದು ಒಕ್ಕೂಟಗಳು ಮಾತ್ರ ಸ್ವಲ್ಪ ನಿಧಾನವಾಗಿ ದರ ಹೆಚ್ಚಳ ಮಾಡಿದರೆ ಸಾಕು ಎಂದಿವೆ.

ಈ ಕುರಿತು ಸರ್ಕಾರ ಹಾಗೂ ಆಟೋ ಚಾಲಕರ ಒಕ್ಕೂಟ ನಡುವೆ ಹಲವು ಬಾರಿ ಮಾತುಕತೆಗಳು ನಡೆದಿತ್ತು ಆದರೆ ಯಾವುದೇ ನಿರ್ಧಾರಕ್ಕೆ ಬಂಧಿರಲಿಲ್ಲ.

ಅಕ್ಟೋಬರ್ 28 ರಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ಈಗಾಗಲೇ ದಿನನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದರಿಂದಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಮೇಲೆ ಜನರು ಹಿಡಿ ಶಾಪ ಹಾಕುತ್ತಿದ್ದಾರೆ.

ದೇಶದ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಮತ್ತೆ ಏರಿಕೆ ಮಾಡಿದ್ದು, ಸತತ ಎರಡು ದಿನಗಳ ಕಾಲ ಸ್ಥಿರತೆ ಕಾಯ್ದುಕೊಂಡಿದ್ದ ಪೆಟ್ರೋಲ್, ಡೀಸೆಲ್ ಬೆಲೆ ನಿನ್ನೆಯಿಂದ ಮತ್ತೆ ಏರಿಕೆಯಾಗಿದೆ.

ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ದಾಟಿ ಇಂಧನ ದರ ಏರಿಕೆಯಾಗಿದ್ದು, ಇಂದು (ಅ.28, ಗುರುವಾರ) ಕೂಡ ದೇಶದ ಎಲ್ಲಾ ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡಲಾಗಿದೆ.

ಲೀಟರ್ ಪೆಟ್ರೋಲ್ ದರ ಮತ್ತು ಲೀಟರ್ ಡೀಸೆಲ್ ದರದಲ್ಲಿ ಏರಿಕೆ ಬಳಿಕ ಇಂಧನ ದರ ಗರಿಷ್ಠ ಮಟ್ಟ ತಲುಪಿದೆ. ಈ ಹಬ್ಬದ ಋತುವಿನಲ್ಲಿ ಇಂಧನ ದರ ಏರುಗತಿಯಲ್ಲಿ ಸಾಗುತ್ತಿದೆ. ಈ ಮೂಲಕ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ದರವೊಂದೇ ಅಲ್ಲದೇ ಲೀಟರ್ ಡೀಸೆಲ್ ದರವೂ ಸಹ 100ರ ಗಡಿ ದಾಟಿ ಮುನ್ನುಗ್ಗುತ್ತಿದೆ.

English summary
The Transport Department has proposed a 20 per cent hike in fares of auto-rickshaws in Bengaluru following demand from auto drivers who cited snowballing fuel and operation costs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X