ಮಹಿಳೆ ಹೋಗಬೇಕಾಗಿದ್ದು ಹೊರಮಾವಿಗೆ, ಕುಡುಕ ಆಟೋಚಾಲಕ ಕರೆದೊಯ್ದಿದ್ದು ಹೆಬ್ಬಾಳಕ್ಕೆ; ಆಟೋದಿಂದ ಜಿಗಿದ ಮಹಿಳೆ ಮಾಡಿದ್ದೇನು?
ಬೆಂಗಳೂರು, ಜನವರಿ, 03: ಬೆಂಗಳೂರಿನಲ್ಲಿ ಆಟೋ ಚಾಲಕರು ಜಾಸ್ತಿ ದುಡ್ಡು ಕೇಳುತ್ತಾರೆ ಹಾಗೂ ಬರಬೇಕಾದ ಸ್ಥಳಕ್ಕೆ ಬರುವುದಿಲ್ಲ ಎನ್ನುವ ಆರೋಪ ಕೇಳಿಬಂದಿದ್ದವು. ಇದೀಗ ಇದು ಓಲಾ, ಊಬರ್ ಚಾಲಕರ ಮೇಲೆ ತಿರುಗಿದೆ. ಇದಕ್ಕೆ ಪರ್ಯಾಯ ಎಂಬಂತೆ ಮಹಿಳೆಯೊಬ್ಬರು ನಮ್ಮ ಯಾತ್ರಿ ಆಟೋ ಚಾಲಕಮ ಮೇಲೆ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೆಲ ಆಟೋ ಚಾಲಕರು ಪ್ರಯಾಣಿಕರ ಬಳಿ ಅನುಚಿತವಾಗಿ ನಡೆದುಕೊಳ್ಳುತ್ತಾರೆ ಎನ್ನುವ ಆರೋಪಗಳು ಮೊದಲನಿಂದಲೂ ಕೇಳಿಬರುತ್ತಿದ್ದವು. ಆದರೆ ಇದೀಗ ಮಹಿಳಾ ಪ್ರಯಾಣಿಕರೊಬ್ಬರು ನಮ್ಮ ಯಾತ್ರಿ ಆಟೋ ಚಾಲಕರು ಹೇಳಿದ ಕಡೆ ಬರುವುದಿಲ್ಲ. ಅಷ್ಟೇ ಅಲ್ಲದೆ, ಅನುಚಿತವಾಗಿ ನಡೆದುಕೊಳ್ಳುತ್ತಾರೆ ಎಂದು ಬೆಂಗಳೂರು ಸಿಟಿ ಪೋಲೀಸರ ಬಳಿ ದೂರು ದಾಖಲಿಸಿದ್ದಾರೆ.

ನಮ್ಮ ಯಾತ್ರಿ ಆಟೋದಲ್ಲಿ ಪ್ರಯಾಣ ವೇಳೆ ನನ್ನ ಹೆಂಡತಿ ಬಳಿ ಚಾಲಕ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಪತಿ ಆರೋಪ ಮಾಡಿದ್ದಾರೆ. ಈ ಪೋಸ್ಟರ್ ಭಾರೀ ವೈರಲ್ ಆಗುತ್ತಿದೆ.
"ನನ್ನ ಪತ್ನಿ ಹೊರಮಾವಿನಿಂದ ಬೆಂಗಳೂರಿನ ಥಣಿಸಂದ್ರಕ್ಕೆ ಆಟೋವನ್ನು ಬುಕ್ ಮಾಡಿದ್ದಾರೆ. ಆದರೆ ಪಾನಮತ್ತನಾಗಿದ್ದ ಆಟೋ ಚಾಲಕ ಹೆಬ್ಬಾಳದ ಕಡೆಗೆ ಕರೆದೊಯ್ದಿದ್ದಾನೆ. ಆಗ ಪದೇ ಪದೇ ನಿಲ್ಲಿಸುವಂತೆ ನನ್ನ ಪತ್ನಿ ಕೇಳಿಕೊಂಡಿದ್ದಾರೆ. ಆದರೆ, ಆತ ಮಾತ್ರ ಆಟೋ ಚಲಾಯಿಸಿಕೊಂಡೇ ಹೋಗಿದ್ದಾನೆ. ಕೊನೆಗೆ ನಿಮಗಿಷ್ಟ ಇಲ್ಲದಿದ್ದರೆ ಜಿಗಿಯಿರಿ. ಯಾವುದೇ ಕಾರಣಕ್ಕೂ ಆಟೋ ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾನೆ," ಅಂತಾ ಮಹಿಳೆ ಪತಿ ಗಂಭೀರ ಆರೋಪ ಮಾಡಿದ್ದಾರೆ.
ಇದೀಗ ಮಹಿಳೆ ಮಾಡಿದ ಆರೋಪ ಸಂಬಂಧ ಅಜರ್ ಖಾನ್ ಎಂಬುವವರು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅಲ್ಲದೆ, ನೆಟ್ಟಿಗರು ಕಾಮೆಂಟ್ ಬಾಕ್ಸ್‌ನಲ್ಲಿ ಆಟೋ ಚಾಲಕನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಆಟೋ ಚಾಲಕರು ಹೇಳಿದ ಜಾಗಕ್ಕೆ ಬರುವುದಿಲ್ಲ ಹೆಚ್ಚು ಹಣ ಕೇಳುತ್ತಾರೆ ಎನ್ನುವ ದೂರುಗಳು ಮೊದಲಿನಿಂದಲೂ ಕೇಳಿಬಂದಿದ್ದರು. ಆದರೆ, ಇದೀಗ ಈ ಆರೋಪ ಓಲಾ, ಉಬರ್, ನಮ್ಮ ಯಾತ್ರಿಯಂತಹ ಬುಕ್ಕಿಂಗ್ ಆ್ಯಪ್‌ಗಳ ಮೇಲೆ ತಿರುಗಿದೆ. ಈ ಆ್ಯಪ್‌ಗಳ ಮೂಲಕ ಆಟೋ ಬುಕ್ ಮಾಡುವುದರಿಂದ ಕಿಲೋ ಮೀಟರ್ ಲೆಕ್ಕದಲ್ಲಿ ಮೊದಲೇ ದರ ನಿಗದಿ ಮಾಡಿರುತ್ತಾರೆ.
ಈ ಹಿನ್ನೆಲೆ ಯಾವುದೇ ಯೋಚನೆಯಿಲ್ಲದೆ ಆಟೋ, ಕಾರ್ ಬುಕ್ ಮಾಡಿ ಪ್ರಯಾಣ ಮಾಡಬಹುದು. ಅಲ್ಲದೆ, ಆ್ಯಪ್ ಮೂಲಕ ಬುಕ್ ಮಾಡುವುದರಿಂದ ಪ್ರಯಾಣವೂ ಕೂಡ ಸುಖಕರವಾಗಿರುತ್ತದೆ ಎಂದುಕೊಳ್ಳುತ್ತೇವೆ. ಆದರೆ, ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ನಡೆಯುತ್ತಿರುವ ಘಟನೆ ನಮ್ಮ ಯಾತ್ರಿ ಆಟೋ ಪ್ರಯಾಣ ಮಹಿಳೆಯರಿಗೆ ಸುರಕ್ಷತೆ ಇಲ್ಲ ಎನ್ನುವ ಗುಮಾನಿಗೆ ಕಾರಣವಾಗಿದೆ.












Click it and Unblock the Notifications