ಕುಡಿಯಲು ನೀರು ಕೇಳಿದ್ದೇ ತಪ್ಪಾ- ಗುಟುಕು ಹನಿ ನೀರಿಗೆ ನಡೆಯಿತು ಭೀಕರ ಹತ್ಯೆ!

ಬೆಂಗಳೂರು, ಸೆಪ್ಟೆಂಬರ್ 12: ಮನುಷ್ಯ ಮನುಷ್ಯತ್ವವನ್ನು ಮರೆತರೆ ದಯೆ ಅನ್ನೋ ಪದಕ್ಕೆ ಅರ್ಥವೇ ಇರುವುದಿಲ್ಲ. ಹಸಿದವರಿಗೆ ಅನ್ನವನ್ನು ಕೊಡುವ ಮೂಲಕ ಹಸಿವನ್ನು ನೀಗಿಸಬೇಕು. ದಾಹ ಎಂದಾಗ ನೀರನ್ನು ಕೊಟ್ಟು ದಾಹವನ್ನು ಕಡಿಮೆ ಮಾಡಬೇಕು. ಆದರೆ ಇಲ್ಲೊಬ್ಬ ಆಟೋ ಚಾಲಕ ನೀರು ಕೇಳಿದವನ ಎದೆಯನ್ನು ಸೀಳಿ ರಕ್ತ ಹರಿಸಿ ಕೊಂದಿದ್ದಾನೆ.

ಹಸಿದವರಿಗೆ , ಭಿಕ್ಷುಕರಿಗೆ ಸಹಾಯ ಮಾಡಬೇಕಾದಾಗ ಅವರಿಗೆ ಗೊತ್ತಾಗದಂತೆ ನೆರವಾಗುವ ಗುಣ ಈ ಮಣ್ಣಿನ ಜನರಿಗೆ ಇದೆ. ಜನ ಸಂಕಷ್ಟದಲ್ಲಿ ಸಹಾಯ ಮಾಡುತ್ತಾರೆ ಎಂದು ತಿಳಿದು ಹಣವನ್ನಲ್ಲದೇ ಆಟೋ ಚಾಲಕ ಇನ್ನೊಬ್ಬ ಆಟೋ ಡ್ರೈವರ್ ಹತ್ತಿರ ನೀರು ಕೇಳಿದ್ದಾನೆ. ಇಷ್ಟಕ್ಕೆ ಆಟೋ ಚಾಲಕ ಚಾಕವಿನಿಂದ ಮತ್ತೊಬ್ಬ ಚಾಲಕನಿಗೆ ಇರಿದು ಕೊಲೆ ಮಾಡಿ ಬಿಟ್ಟಿದ್ದಾನೆ.

ಆಟೋ ಚಾಲಕರಲ್ಲಿ ಒಗ್ಗಟ್ಟು ಜಾಸ್ತಿಯಿರುತ್ತೆ. ರಸ್ತೆಯಲ್ಲಿ ಯಾವುದೇ ಆಟೋಗೆ ಸಮಸ್ಯೆಯಾಗಿದ್ದರೆ ತಮ್ಮ ಆಟೋವನ್ನು ಪಕ್ಕಕ್ಕ ನಿಲ್ಲಿಸಿ ಸಹಾಯಕ್ಕೆ ಬರುತ್ತಾರೆ. ಆಟೋ ಚಾಲಕರ ಬಳಿಯಲ್ಲಿ ಯಾರದರೂ ಜಗಳವನ್ನು ಆಡುತ್ತಿದ್ದರೆ, ಜಗಳವನ್ನು ಬಿಡಿಸಿ ಚಾಲಕನ ಪರವಾಗಿ ನಿಂತು ಬಿಡ್ತಾರೆ. ಆದರೆ ಈ ಕೇಸ್‌ ನಲ್ಲಿ ನಮ್ಮದೇ ವೃತ್ತಿ ಬಾಂಧವ ಎಂದು ನೀರನ್ನು ಕೇಳಲು ಹೋಗಿದ್ದಕ್ಕೆ ಕೊಲೆಯಾಗಿದ್ದಾನೆ.

 ಮಗಾ ನೀರು ಕೊಡು ಎಂದು ಕೇಳಿದ್ದೇ ತಪ್ಪಾಗಿತ್ತು

ಮಗಾ ನೀರು ಕೊಡು ಎಂದು ಕೇಳಿದ್ದೇ ತಪ್ಪಾಗಿತ್ತು

ಪೀಣ್ಯಾ ಪೊಲೀಸ್ ಠಾಣಾ ವ್ಯಾಪ್ತಿಯ ಜಾಲಹಳ್ಳಿ ಕ್ರಾಸ್‌ನ ಬಳಿ ಸಿದ್ದಿಕ್ ಎಂಬ 25 ವರ್ಷದ ಆಟೋ ಚಾಲಕ ಆಟೋ ಡ್ರೈವರ್ ಗಾಡಿ ಓಡಿಸಿ ಸುಸ್ತಾಗಿದ್ದರಿಂದ ರಾತ್ರಿ ಸರಿ ಸುಮಾರು 11.30ಕ್ಕೆ ಟೀ ಕುಡಿಯೋಣ ಅಂತ ಟೀ ಶಾಪ್ ಹತ್ತಿರ ಆಟೋ ಹಾಕಿದ್ದಾನೆ. ಆಟೋ ಇಳ್ದು ಅಲ್ಲೇ ಇದ್ದ ಇನ್ನೊಬ್ಬ ಅಜಯ್ ಸಿಂಗ್ ಅನ್ನೋ ಆಟೋ ಡ್ರೈವರ್ ನೋಡಿದ್ದಾನೆ. ನಮ್ಮ ಆಟೋ ಡ್ರೈವರ್‍‌ಗೆ ಅಲ್ವಾ ಅಂತ ಸಿದ್ದಿಕ್ ಮಗಾ ಸ್ವಲ್ಪ ನೀರು ಕೊಡೋ ಅಂತ ಅಜಯ್ ಗೆ ಕೇಳಿದ್ದಾನೆ. ಅಷ್ಟೇ ಅಜಯ್ ಕೋಪಗೊಂಡು ನನ್ನನ್ನೇ ಮಗಾ ನೀರು ಕೊಡೊ ಅಂತಿಯಾ ಅಂತ ಬೈದಿದ್ದಾನೆ. ಇದಕ್ಕೆ ಸಿದ್ದಿಕ್ ಅಲಾ ಗುರು ಜಸ್ಟ್ ನೀರು ತಾನೇ ಕೇಳಿದ್ದು ಅಂತ ಅಜಯ್ ಮಾತಿಗೆ ಎದುರು ಮಾತು ಕೊಟ್ಟಿದ್ದಾನೆ.

 ಹೃದಯಕ್ಕೆ ಚಾಕು ಹಾಕಿದ್ದಕ್ಕೆ ಪ್ರಾಣಬಿಟ್ಟ

ಹೃದಯಕ್ಕೆ ಚಾಕು ಹಾಕಿದ್ದಕ್ಕೆ ಪ್ರಾಣಬಿಟ್ಟ

ಆಟೋ ಚಾಲಕರು ಮಾತಿನ ಚಕಮಕಿ ನಡೆದು ಇದ್ದಕ್ಕೆ ಇದ್ದಂತೆ ಜಗಳ ಜೋರಾಗಿ ತಾರಕಕ್ಕೇರಿತ್ತು. ಅಜಯ್ ತನ್ನ ಆಟೋದಲ್ಲಿದ್ದ ಚಾಕು ತಂದು ಸಿದ್ದಿಕ್ ಎದೆಗೆ ಚುಚ್ಬಿಟ್ಟಿದ್ದಾನೆ. ತಕ್ಷಣ ರಕ್ತಸ್ರಾವ ಆಗಿ ಒದ್ದಾಡುತ್ತಿದ್ದ ಸಿದ್ದಿಕ್ ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಸಿದ್ದಿಕ್‌ಗೆ ಗಂಭೀರ ಗಾಯ ಆಗಿದ್ದ ಕಾರಣ ಚಿಕಿತ್ಸೆ ಫಲಕಾರಿ ಆಗದೇ ಸಿದ್ದಿಕ್ ಕೊನೆಯುಸಿರೆಳಿದ್ದಾನೆ.

 ಸ್ವಯಂ ಪ್ರತಿಷ್ಠೆಗೆ ಅಮೂಲ್ಯ ಜೀವ ಬಲಿ

ಸ್ವಯಂ ಪ್ರತಿಷ್ಠೆಗೆ ಅಮೂಲ್ಯ ಜೀವ ಬಲಿ

ಸಿದ್ದಿಕ್ ನನ್ನ ಕೊಲೆಗೈದ ಅಜಯ್ ಪೀಣ್ಯ ಪೊಲೀಸರು ಬಂಧಿಸಿದ್ದಾರೆ. ಒಟ್ಟಿನಲ್ಲಿ ಕೋಪದ ಕೈಗೆ ಬುದ್ದಿ ಕೊಟ್ಟು ಒಬ್ಬ ಜೈಲು ಸೇರಿದರೇ ಮತ್ತೊಬ್ಬ ಮಸಣ ಸೇರಿದ್ದಾನೆ. ಆದರೆ ಆಟೋ ಚಾಲಕರಾಗಿ ಸದಾ ಅನ್ಯೋನ್ಯತೆಯಿಂದ ಇರಬೇಕಾದವರು ಸ್ವಯಂ ಪ್ರತಿಷ್ಠೆಗೆ ಒಳಗಾಗಿದ್ದಾರೆ. ಸಣ್ಣ ಕಿರಿಕ್‌ನಿಂದ ಶುರುವಾಜ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

 ಕ್ಷುಲ್ಲಕ ಕಾರಣ್ಕೆ ನಡೆದ ಘಟನೆ

ಕ್ಷುಲ್ಲಕ ಕಾರಣ್ಕೆ ನಡೆದ ಘಟನೆ

ಪೀಣ್ಯ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 302 ಅಡಿ ಪ್ರಕರಣ ದಾಖಲಾಗಿದೆ. ರಾತ್ರಿ ಘಟನೆ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ನಡೆದಿರುವ ಘಟನೆಯಲ್ಲಿ ಆರೋಪಿ ಮೃತ ವ್ಯಕ್ತಿಯ ಎದೆಗೆ ಇರಿದಿದ್ದಾನೆ. ಈಗಗಾಲೇ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+