ನವೆಂಬರ್ 26ರಂದು ಆಟೋ, ಟ್ಯಾಕ್ಸಿ ಚಾಲಕರ ಮುಷ್ಕರ: ಬೇಡಿಕೆಗಳೇನು?
ಬೆಂಗಳೂರು,ನವೆಂಬರ್ 25: ನವೆಂಬರ್ 26 ರಂದು ಆಟೋ ಮತ್ತು ಟ್ಯಾಕ್ಸಿ ಚಾಲಕರು ಮುಷ್ಕರಕ್ಕೆ ಕರೆ ನೀಡಿದ್ದು, ಅವರ ಬೇಡಿಕೆಗಳೇನು ಎಂಬುದರ ಕುರಿತ ಮಾಹಿತಿ ಇಲ್ಲಿದೆ.
ಒಟ್ಟು 20 ಒಕ್ಕೂಟಗಳು ಸೇರಿ ವಾಹನಗಳ ಸಾಲಮನ್ನಾ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ನಡೆಸಲಿದ್ದಾರೆ.
"ವಾಟಾಳ್ ನಾಗರಾಜ್, ನಿನಗೆ ತಾಕತ್ತಿದ್ದರೇ ರಾಜ್ ಬಂದ್ ಮಾಡು''
ಆಟೋ, ಟ್ಯಾಕ್ಸಿ ಚಾಲಕರ ಬೇಡಿಕೆಗಳೇನು?:
ರಾಜ್ಯ ರಾಜಕಾರಣ ಅಲ್ಲೋಲ ಕಲ್ಲೋಲವಾಗಲಿದೆ ಎಂದ ಕೋಡಿ ಮಠದ ಶ್ರೀಗಳು | Oneindia Kannada
- ಓಲಾ ಮತ್ತು ಊಬರ್ ನಂತಹ ಆ್ಯಪ್ ಆಧಾರಿತ ಬೃಹತ್ ಕಂಪನಿಗಳ ಪೈಪೋಟಿಯನ್ನು ತಡೆಗಟ್ಟಬೇಕು.
- ವಾಹನಗಳಿಗೆ ಸರ್ಕಾರವು ನಿಗದಿ ಪಡಿಸಿರುವ ದರವನ್ನು ನೀಡಬೇಕು. ವಾಹನಗಳಿಗೆ ಮೀಟರ್ ಅಳವಡಿಕೆಯನ್ನು ಮಾಡಬೇಕು.
- ಕಮಿಷನ್ ವಸೂಲಿಗೆ ತಡೆಹಾಕಬೇಕು. ಜಿಎಸ್‍ಟಿ ಹೇರಿಕೆಯನ್ನು ಕೈಬಿಡಬೇಕು.
- ಓಲಾ ಮತ್ತು ಉಬರ್ ಸಂಸ್ಥೆಯ ಮಾದರಿಯಲ್ಲಿ ಸರ್ಕಾರವು ಆ್ಯಪ್ ಆಧಾರಿತ ಸಂಸ್ಥೆಯನ್ನು ಸ್ಥಾಪಿಸಬೇಕು.
- ಕೊರೊನಾ ವೈರಸ್ ಸಂಕಷ್ಟದಲ್ಲಿ ಇರುವ ಚಾಲಕರ ವಾಹನಗಳನ್ನು ಅನಧಿಕೃತವಾಗಿ ಮುಟ್ಟುಗೋಲು ಹಾಕಿಕೊಳ್ಳುವುದು ಹಾಗೂ ದುಬಾರಿ ಬಟ್ಟಿ ವಸೂಲಿ ಮಾಡುವುದನ್ನು ನಿಲ್ಲಿಸಬೇಕು.
- ವಾಹನಗಳ ಕಂತುಗಳ ಮೇಲಿನ ಹೆಚ್ಚುವರಿ ಬಡ್ಡಿಯನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು. ಬಡ್ಡಿ ವಜಾ ಮಾಡಲು ಸರ್ಕಾರ ಕ್ರಮಕೈಗೊಳ್ಳಬೇಕು.
- ಹೊಸ ಆಟೋರಿಕ್ಷಾ ಮಾರಾಟ ತೆರಿಗೆಯನ್ನು ಶೇ.17 ರಿಂದ ಶೇ.5ಕ್ಕೆ ಇಳಿಸಬೇಕು.
- ನಕಲಿ ಆಟೋ ಪರ್ಮಿಟ್‍ಗಳನ್ನು ತಡೆಗಟ್ಟಲು, ಹೊಸದಾಗಿ ತಂದಿರುವ ಇ-ಪರ್ಮಿಟ್‍ಗೆ ಆಧಾರ್ ಲಿಂಕ್ ಹಾಗೂ ಮಾಲೀಕನೇ ಖುದ್ದು ಹೆಬ್ಬೆಟ್ಟು ಗುರುತು ನೀಡುವುದನ್ನು ಕಡ್ಡಾಯಗೊಳಿಸಬೇಕು.
- ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಜಾತಿವಾರು ನಿಗಮಗಳಿಂದ ನೇರ ಸಾಲ ಯೋಜನೆ ಅಡಿಯಲ್ಲಿ ಆಟೋ ಚಾಲಕರಿಗೆ 1,00 ಲಕ್ಷ ರೂ ಮತ್ತು ಟ್ಯಾಕ್ಸಿ ಚಾಲಕರುಗಳಿಗೆ 2,00 ಲಕ್ಷ ಸಾಲವನ್ನು ನೀಡಬೇಕು.
- ಅಸಂಘಟಿತ ಚಾಲಕರ ನಿಗಮ ಸ್ಥಪನೆಯಾಗಬೇಕು.
- ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಬಿಡಿಎ ಅಥವಾ ಗೃಹ ಮಂಡಳಿಯಿಂದ ಮನೆಗಳನ್ನು ಕಟ್ಟಿಸಿಕೊಡಬೇಕು.
- 15 ವರ್ಷದ ಹಳೆಯ ವಾಹನಗಳ ಎಫ್‍ಸಿ ಗಳನ್ನು ಸಲ್ಲಿಸಿರುವುದನ್ನು ಕೂಡಲೇ ರದ್ದು ಮಾಡಬೇಕು.
- ಆಟೋ ಮತ್ತು ಟ್ಯಾಕ್ಸಿ ಚಾಲಕರು ಲಾಕ್‍ಡೌನ್ ಸಮಯದಲ್ಲಿ ಕೊರೊನಾ ಹಾಗೂ ಇತರೆ ಖಾಯಿಲೆಗಳಿಂದ ಸೂಕ್ತ ಚಿಕಿತ್ಸೆ ದೊರೆಯದೆ ಮೃತರಾಗಿದ್ದಾರೆ. ಅಂತಹ ಕುಟುಂಬಗಳಿಗೆ ಸರ್ಕಾರವು 25 ಲಕ್ಷ ರೂ ಪರಿಹಾರವನ್ನು ನೀಡಬೇಕು ಎಂಬುದು ಅವರ ಬೇಡಿಕೆಯಾಗಿದೆ.