ಎಟಿಎಂಗೆ ತುಂಬುವ 50 ಲಕ್ಷ ಕದ್ದವ ಪೊಲೀಸರಿಗೆ ಸಿಕ್ಕಿಬಿದ್ದ

ಬೆಂಗಳೂರು, ಅಕ್ಟೋಬರ್ 30 : ಬೆಂಗಳೂರಿನ ಎಂ.ಜಿ.ರಸ್ತೆಯ ಇಂಡಸ್ ಇಂಡ್ ಬ್ಯಾಂಕ್‌ ಎಟಿಎಂಗೆ ಹಣ ತುಂಬಲು ಬಂದಿದ್ದಾಗ 50 ಲಕ್ಷ ರೂ.ಗಳನ್ನು ಕದ್ದು ಪರಾರಿಯಾಗಿದ್ದ ಯುವಕನನ್ನು ಬಂಧಿಸಲಾಗಿದೆ. ಬಂಧಿತನಿಂದ 45 ಲಕ್ಷ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇಂಡಸ್ ಇಂಡ್ ಬ್ಯಾಂಕ್‌ ಎಟಿಎಂಗೆ ಹಣ ತುಂಬುವ ಗುತ್ತಿಗೆ ಪಡೆದಿದ್ದ ಬ್ರಿಂಕ್ಸ್‌ ಕಂಪನಿಯ ಉದ್ಯೋಗಿ ಜಗದೀಶ್ (23) ಅಕ್ಟೋಬರ್ 21ರಂದು 50 ಲಕ್ಷ ಹಣದೊಂದಿಗೆ ಪರಾರಿಯಾಗಿದ್ದ. ಅಕ್ಟೋಬರ್ 20ರಂದು ಕೆಲಸಕ್ಕೆ ಸೇರಿದ್ದ ಜಗದೀಶ್ ಮರುದಿನವೇ ಕಳ್ಳತನ ಮಾಡಿದ್ದ. [ಎಟಿಎಂಗೆ ತುಂಬುವ ಹಣದೊಂದಿಗೆ ಯುವಕ ಪರಾರಿ]

jagadeesh

ಹಲಸೂರು ಗೇಟ್ ಠಾಣೆ ಪೊಲೀಸರು ಮತ್ತು ಚಿಕ್ಕಬಳ್ಳಾಪುರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಚಿಕ್ಕಬಳ್ಳಾಪುರದಲ್ಲಿ ಜಗದೀಶ್‌ನನ್ನು ಬಂಧಿಸಿದ್ದಾರೆ. ಕದ್ದ ಹಣದಿಂದ ಪಲ್ಸರ್ ಬೈಕ್ ಖರೀದಿ ಮಾಡಿದ್ದ ಜಗದೀಶ್ ನಂದಿ ಬೆಟ್ಟ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಓಡಾಡಿಕೊಂಡಿದ್ದ. [ಮಿತಿ ಮೀರಿದ ಎಟಿಎಂ ಬಳಕೆ ಕೈ ಕಚ್ಚಲಿದೆ]

ಪ್ರಕರಣದ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಬಂದಿತ್ತು. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ಆರೋಪಿಯ ರೇಖಾ ಚಿತ್ರ ಬಿಡುಗಡೆ ಮಾಡಿದ್ದರು. ಇದನ್ನು ನೋಡಿದ ಸ್ಥಳೀಯರು ಜಗದೀಶ್ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಅಕ್ಟೋಬರ್ 21ರಂದು ಮಧ್ಯಾಹ್ನ 12.30ರ ಸುಮಾರಿಗೆ ಟಾಟಾ ಸುಮೋದಲ್ಲಿ ಜಗದೀಶ್, ಚಾಲಕ ಪ್ರಭು ಮತ್ತು ಭದ್ರತಾ ಸಿಬ್ಬಂದಿ ಮುತ್ತಣ್ಣ ಎಟಿಎಂಗೆ ಹಣ ತುಂಬಿಸಲು ಎಂ.ಜಿ.ರಸ್ತೆಯಲ್ಲಿರುವ ಎಟಿಎಂಗೆ ಹಣ ತುಂಬಿಸಲು ಬಂದಿದ್ದರು. ಈ ಸಮಯದಲ್ಲಿ ಜಗದೀಶ್ 50 ಲಕ್ಷ ಕದ್ದು ಪರಾರಿಯಾಗಿದ್ದ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+