ಮಾಧ್ಯಮವೆಂಬುದು ಬೆಂಕಿಯಂತೆ, ಸೂಕ್ತ ಅಂತರ ಇರಬೇಕು; ಮಂಜುನಾಥ್ ಪ್ರಸಾದ್
ಬೆಂಗಳೂರು, ಡಿಸೆಂಬರ್ 29: "ಮಾಧ್ಯಮ ಆಡಳಿತ ಅಭಿವೃದ್ಧಿ" ಕುರಿತಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮವನ್ನು ಇಂದು ಉದ್ಘಾಟಿಸಿ ಮಾತನಾಡಿದ ಕನ್ನಡ ಪ್ರಭ ಹಾಗೂ ಸುವರ್ಣ ಟಿವಿ ಸಂಪಾದಕ ರವಿ ಹೆಗಡೆ, ಇಂದು ಡಿಜಿಟಲ್ ಮಾಧ್ಯಮಗಳು ಎತ್ತರಕ್ಕೆ ಬೆಳೆಯುತ್ತಿವೆ. ಇಡೀ ಮಾಧ್ಯಮ ಡಿಜಿಟಲ್‌ನಲ್ಲಿ ಮುಂದುವರೆಯುವ ಕಾಲ ಬಂದಾಗಿದೆ ಎಂದು ಹೇಳಿದರು.
"ಪೇಜ್ ವ್ಯೂಸ್‌ಗಾಗಿ ಸುಳ್ಳು ಸುದ್ದಿಗಳನ್ನು ಹರಿಬಿಡುವ ಸಂಸ್ಥೆಗಳೂ ಹುಟ್ಟಿಕೊಂಡಿವೆ. ಅಂಥ ಕಳಂಕ ತೊಡೆದುಹಾಕಲು ಡಿಜಿಟಲ್ ಎಜುಕೇಷನ್ ಆರಂಭವಾಗಬೇಕು. ಆ ಕೆಲಸ ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದಲೇ ಆಗಲಿ, ಅದಕ್ಕೆ ಬೇಕಾದ ಆರ್ಥಿಕ ನೆರವು ಸರ್ಕಾರ ಕೊಡುವಂತಾಗಲಿ, ಅಕಾಡೆಮಿ ಆ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಲಿ," ಎಂದರು.
"ಕರ್ನಾಟಕ ಮಾಧ್ಯಮ ಅಕಾಡೆಮಿ ಕಳೆದ ಮೂರು ವರ್ಷಗಳ ಅವಧಿಯ ಅವಾರ್ಡ್‌ಗಳ ಕಾರ್ಯಕ್ರಮ ಮಾಡಲು ಆಗಿರಲಿಲ್ಲ. ಇದೀಗ ಕಾರ್ಯಕ್ರಮಕ್ಕೆ ಬೇಕಾದ ನೆರವನ್ನು ನೀಡಲು ವಾರ್ತಾ ಮತ್ತು ಸಾರ್ವಜನಿಕ ಇಲಾಖೆಗೆ ಈಗಾಗಲೇ ಸೂಚಿಸಿದ್ದೇನೆ. ಜೊತೆಗೆ ಡಿಜಿಟಲ್ ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಸೆಮಿನಾರ್, ತರಬೇತಿ ಕಾರ್ಯಕ್ರಮಗಳಿಗೆ ಬೇಕಾದ ಅನುದಾನವನ್ನು ನಮ್ಮ ಇತಿ ಮಿತಿಗಳಲ್ಲಿ ಕೊಡಲು ಬದ್ಧರಾಗಿದ್ದೇವೆ," ಎಂದು ಸಂವಾದದ ಪ್ರಧಾನ ಭಾಷಣಕಾರರಾದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ಹೇಳಿದರು.

ಮಂಜುನಾಥ್ ಪ್ರಸಾದ್ ಮಾತುಗಳು
"ಪಶ್ಚಿಮ ಬಂಗಾಳದಲ್ಲಿ ಕೆಲಸ ಮಾಡುವಾಗ ಕಲಿತ ಅಥವಾ ರೂಢಿಸಿಕೊಂಡ ಅಪಾರ ತಾಳ್ಮೆಯಿಂದ ನನಗೆ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಹೆಚ್ಚಿನ ಅವಧಿ ಕೆಲಸ ಮಾಡಲು ಸಾಧ್ಯವಾಯಿತು. ನಾವು ಜನಸಾಮಾನ್ಯರು ಬಂದಾಗ ಅವರ ಮಾತುಗಳನ್ನು ಆಸಕ್ತಿಯಿಂದ ಸಮಾಧಾನದಿಂದ ಕೇಳಬೇಕು. ಎಲ್ಲಾ ಸಮಸ್ಯೆಗಳನ್ನು ಪರಿಹಾರ ಮಾಡುವುದಕ್ಕೆ ಆಗುತ್ತದೋ, ಇಲ್ಲವೋ ಗೊತ್ತಿಲ್ಲ. ಆದರೆ ಒಬ್ಬ ಅಧಿಕಾರಿಯಾಗಿ ಜನರ ಸಮಸ್ಯೆಗಳನ್ನು ಆಲಿಸಬೇಕು," ಎಂದರು.
"ಆಡಳಿತ ವ್ಯವಸ್ಥೆ ಇರುವುದು ಯಾರಿಗೆ ಧ್ವನಿ ಇಲ್ಲ, ಯಾರಿಗೆ ಶಕ್ತಿ ಇಲ್ಲ ಅವರಿಗೋಸ್ಕರ. ಶ್ರೀಮಂತರು ಅವರ ಕೆಲಸಗಳನ್ನು ಮಾಡಿಕೊಳ್ಳುತ್ತಾರೆ, ಮಾಡಿಸಿಕೊಂಡು ಹೋಗುತ್ತಾರೆ. ಬಡವರಿಗೆ ನೆರವಾಗುವಾಗ ಕಾನೂನು ಉಲ್ಲಂಘನೆ ಮಾಡಿದರೂ ಯಾರೂ ಪ್ರಶ್ನೆ ಮಾಡುವುದಿಲ್ಲ. ಅದು ಬಿಟ್ಟು ಯಾರಿಗೋ ವೆಸ್ಟೆಡ್ ಇಂಟ್ರಸ್ಟ್‌ಗಳಿಗೆ ಸಹಾಯ ಮಾಡಬೇಕಾದರೆ ಪ್ರಶ್ನೆಗಳು ಬರುತ್ತವೆ," ಎಂದು ಅಭಿಪ್ರಾಯಪಟ್ಟರು.
ರಾಯಚೂರಿಗೆ ಚೀಫ್ ಎಕ್ಸಿಕ್ಯೂಟೀವ್ ಆಫೀಸರ್ ಆಗಿದ್ದಾಗ ಜಿಲ್ಲೆಯಲ್ಲಿ ಸಾಕ್ಷರತೆ ಹೆಚ್ಚು ಮಾಡುವುದಕ್ಕೆ ಮತ್ತು ಶುಚಿತ್ವ (ಮನೆ ಮನೆಗೆ ಶೌಚಾಲಯ)ಕ್ಕಾಗಿ ಕಾರ್ಯಕ್ರಮ, ಅದೇ ರೀತಿ ಆರೋಗ್ಯ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸಕ್ಕೆ ಚಾಲನೆ ಕೊಟ್ಟೆ. ಈ ಕೆಲಸಕ್ಕೆ ಯಾವ ಎಂಎಲ್ಎ, ಮಂತ್ರಿ ಈ ಕೆಲಸ ಮಾಡಬೇಡಿ ಅಂತಾರೆ. ಅಧಿಕಾರಿಯಾಗಿ ಆ ಕೆಲಸ ಮಾಡಿದರೆ ಅಭಿವೃದ್ಧಿ ಸಾಧ್ಯವೆಂದು ಎನ್. ಮಂಜುನಾಥ್ ಪ್ರಸಾದ್ ಅಭಿಪ್ರಾಯಪಟ್ಟರು.
ನಾವು ಯಾವ ಪರಿಸರದಲ್ಲಿ ಬೆಳೆಯುತ್ತೇವೆಯೋ ಅದೇ ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ. ಒಬ್ಬ ಬಡವ ಎದುರಾದರೆ ಅರೇ ನನಗೂ ಆ ಬಡತನ ಇತ್ತಲ್ಲ ಎಂದು ನೆನಪಿಗೆ ಬರುತ್ತೆ. ಅಂಥವರಿಗೆ ಸ್ಪಂದಿಸುವ ಕೆಲಸ ಇದೆಯಲ್ಲಾ ಅದೇ ಮುಖ್ಯ.

ಮಾಧ್ಯಮ ಅನ್ನುವುದು ಬೆಂಕಿ ಇದ್ದಹಾಗೆ. ಅದರ ಬಳಿ ಒಂದು ಅಪ್ರಾಪ್ರಿಯೇಟ್ ಡಿಸ್ಟೆನ್ಸ್ (ಸೂಕ್ತ ಅಂತರ) ಇಟ್ಕೊಂಡರೆ ಅಗತ್ಯವಾದ ಕಾವು ಸಿಗುತ್ತದೆ. ಆ ಬಗ್ಗೆ ಎಚ್ಚರವಿರಬೇಕು. ಆಹಾರದಷ್ಟೇ ಸಂವಹನ ಮುಖ್ಯವಾಗಿದೆ. ಒಮ್ಮೆ ತಡರಾತ್ರಿ ಮಾಧ್ಯಮದ ಪ್ರತಿನಿಧಿಯ ಫೋನ್ ತೆಗೆಯಲಾಗಲಿಲ್ಲ. ಅದನ್ನು ಮಾಧ್ಯಮ ಪ್ರತಿನಿಧಿಗಳು ತಮ್ಮ ಕರ್ತವ್ಯದ ಅನಿವಾರ್ಯ ಮತ್ತು ಆತಂಕಗಳ ಬಗ್ಗೆ ಹೇಳಿದಾಗ ಯಾವುದೇ ಸಂದರ್ಭದಲ್ಲಿ ಅವರ ಕಾಲ್‌ಗಳನ್ನು ಮಿಸ್ ಮಾಡಲಿಲ್ಲ. ಮಾಧ್ಯಮದವರೊಂದಿಗೆ ವೈಯಕ್ತಿಕ ಹಾಗೂ ವೃತ್ತಿಪರ (ಪರ್ಸನಲ್ ಮತ್ತು ಪ್ರೊಫೆಷನಲ್) ಸಂಬಂಧ ಬೇಕು ಎಂದು ಹೇಳಿದರು.
ಇಂಥದೊಂದು ಮಹತ್ವದ ವಿಷಯಕ್ಕೆ ಅಗತ್ಯ ಪ್ರಚಾರ ಸಿಗಲಿಲ್ಲ
50 ಕೋಟಿಗಿಂತ ಹೆಚ್ಚಿನ ಕಾಮಗಾರಿ ಇದ್ದಲ್ಲಿ ಟೆಂಡರ್ ಡಾಕ್ಯುಮೆಂಟ್ ಅನ್ನು ನಿವೃತ್ತ ನ್ಯಾಯಾಧೀಶರ ಸಮಿತಿಗೆ ಕೊಡಬೇಕು. ಆ ಸಮಿತಿಯು ಸಾರ್ವಜನಿಕ ಡೊಮೈನ್‌ನಲ್ಲಿ ಪ್ರಕಟಿಸಿ, ಎಲ್ಲವೂ ಸರಿ ಇದೆಯೇ ಎಂದು ಪರಿಶೀಲಿಸಿ ನಂತರ ಟೆಂಡರ್ ಕರೆಯಬೇಕೆಂಬ ತೀರ್ಮಾನ ಮಾನ್ಯ ಮುಖ್ಯಮಂತ್ರಿಗಳು ತೆಗೆದುಕೊಂಡಿದ್ದಾರೆ. ಅಂಥದೊಂದು ಮಹತ್ವದ ಸುದ್ದಿ ಬಿತ್ತರವಾಗಬೇಕು, ಹೆಚ್ಚು ಜನರಿಗೆ ತಲುಪಬೇಕು ಎಂದು ಅಭಿಪ್ರಾಯಪಟ್ಟರು.
ಜನರ ಅಭಿಪ್ರಾಯಗಳನ್ನು ನೋಡಿಕೊಂಡು ನೀತಿಗಳನ್ನು ರೂಪಿಸುವುದು ರೂಢಿ. ಅಗತ್ಯವಿರುವ ಬದಲಾವಣೆಗಳನ್ನು ತರಲು ಎಲ್ಲಾ ವಿಷಯಗಳನ್ನು ಸಾರ್ವಜನಿಕರೆದುರು ಇಡುವುದು ಮುಖ್ಯವಾಗುತ್ತದೆ. ಇದರಿಂದ ನೀತಿಗಳಲ್ಲಿ ಆಗುವ ಲೋಪಗಳನ್ನು ತಡೆಯಬಹುದು. ಮಾಧ್ಯಮದವರು ನೀತಿಗಳ ಬಗ್ಗೆ ಜನಸಾಮಾನ್ಯರಿಗೆ ಸರಿಯಾದ ವಿಷಯ ತಲುಪಿಸಬೇಕು. ಅಂತೆಯೇ ಮಾಧ್ಯಮ ಮತ್ತು ಆಡಳಿತ ಅವಿಭಾಜ್ಯ ಅಂಗ. ಜೊತೆ ಜೊತೆಯಾಗಿ ಸಾಗಬೇಕಿದೆ ಎಂದು ಆಶಿಸಿದರು.
ಕರ್ನಾಟಕ ರಾಜ್ಯಕ್ಕಿರುವ ಪೊಟೆನ್ಷಿಯಲ್ ಬೇರೆಲ್ಲೂ ಇಲ್ಲ. ೨೦೨೫ಕ್ಕೆ ೫೦೦ ಬಿಲಿಯನ್ ಡಾಲರ್ ಎಕಾನಮಿ ಆಗುವುದಕ್ಕೆ ಬೇಕಿರುವ ಬ್ಲೂ ಪ್ರಿಂಟ್ ತಯಾರಿಸಿದ್ದೇವೆ. ಮುಂದಿನ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಈ ಬಗ್ಗೆ ಹೆಚ್ಚಿನ ಒತ್ತು ಕೊಡುತ್ತಾರೆ. ಕೃಷಿಕರ ಆದಾಯ ಹೆಚ್ಚಿಸಲು ಬೇಕಾದ ಅಂಶಗಳೂ ಇವೆ ಎಂದರು.
ಮುಖ್ಯಮಂತ್ರಿಗಳ ನಿರಂತರ ಕೆಲಸದ ಒತ್ತಡ ಶ್ರಮ ಹಾಗೂ ಅವರ ಬದ್ಧತೆಯ ಕುರಿತು ಅತ್ಯಂತ ಹತ್ತಿರದಿಂದ ಬಲ್ಲ ಎನ್. ಮಂಜುನಾಥ್ ಪ್ರಸಾದ್, ತುಂಬು ಮನಸ್ಸಿನಿಂದ ಅವರಿಗೆ ಗೌರವ ಸಮರ್ಪಿಸಿ ಮಾತು ಮುಗಿಸಿದರು.
Recommended Video
-
ರಾಜ್ಯದ 5000ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕಲುಷಿತ ನೀರು: ಗ್ಯಾರಂಟಿ ಗುಂಗಿನಲ್ಲಿರುವ ಕಾಂಗ್ರೆಸ್ ವಿರುದ್ಧ ಆರ್. ಅಶೋಕ್ ಕಿಡಿ -
CRPF Recruitment 2026: 9,000ಕ್ಕೂ ಹೆಚ್ಚು ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ; ಕನ್ನಡಿಗರಿಗೂ ಇದೆ ಮೀಸಲಾತಿ -
ಏಪ್ರಿಲ್ 13ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
Railway Food: ರೈಲು ಪ್ರಯಾಣಿಕರ ಬಳಿ ಬರುತ್ತೆ ಆಹಾರ: ರೈಲ್ವೆ ಇಲಾಖೆಗೆ ಕಂಪನಿಗಳ ಸಾಥ್ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ












Click it and Unblock the Notifications