• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಾದಚಾರಿಗಳಿಗೆ ಯಮ ಪಾಶವಾದ ಬೆಂಗಳೂರು ರಸ್ತೆಗಳು ,ಪರಿಹಾರವೇನು?

|

ಬೆಂಗಳೂರು, ಸೆಪ್ಟೆಂಬರ್ 7: ಪಾದಚಾರಿಗಳ ಪಾಲಿಗೆ ಬೆಂಗಳೂರು ರಸ್ತೆಗಳು ಯಮ ಪಾಶವಾಗಿದೆ.

ಪಾದಚಾರಿ ಮಾರ್ಗವನ್ನು ಕಿರಿದಾಗಿರಿಸಿಕೊಂಡು ರಸ್ತೆ ನಿರ್ಮಿಸಲಾಗುತ್ತಿದ್ದು, ಎರಡು ದಿನಕ್ಕೊಬ್ಬರಂತೆ ಪಾದಚಾರಿಗಳು ಸಾವನ್ನಪ್ಪುತ್ತಿದ್ದಾರೆ.

ಪಾದಚಾರಿಗಳ ಸಾವಿನ ಸಂಖ್ಯೆಯಲ್ಲಿ ಬೆಂಗಳೂರು ಮೂರನೇ ಸ್ಥಾನದಲ್ಲಿದೆ. ಓಲ್ಡ್ ಮದ್ರಾಸ್ ರಸ್ತೆ,ಔಟರ್‌ ರಿಂಗ್ ರಸ್ತೆ, ಮೈಸೂರು ರಸ್ತೆ, ಹೊಸೂರು ರಸ್ತೆಯಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ.

ಬಿಬಿಎಂಪಿಯು 52 ಸ್ಕೈ ವಾಕ್‌ಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ. ಆದರೆ ಇದರಿಂದ ಪಾದಚಾರಿಗಳ ಸಾವನ್ನು ತಡೆಯಬಹುದೇ ಎನ್ನುವುದು ಪ್ರಶ್ನೆಯಾಗಿದೆ. ಪಾದಚಾರಿಗಳು ನಿಂತು ಸಾರ್ವಜನಿಕ ಸಾರಿಗೆಯನ್ನು ಹತ್ತುವುದು ಕೂಡ ಕಷ್ಟವಾಗಿದೆ.

ಮೃತ ಪಾದಚಾರಿಗಳೆಷ್ಟು?

ಮೃತ ಪಾದಚಾರಿಗಳೆಷ್ಟು?

2017ರ ಅಂಕಿ ಅಂಶಿ ಪ್ರಕಾರ ವರ್ಷದಲ್ಲಿ ಒಟ್ಟು 276 ಅಪಘಾತಗಳಾಗಿವೆ. ಒಟ್ಟು 282 ಮಂದಿ ಪಾದಚಾರಿಗಳು ಮೃತಪಟ್ಟಿದ್ದಾರೆ. ಆರ್ಟೀರಿಯಲ್ ರಸ್ತೆಗಳಲ್ಲಿ 186 ಮಂದಿ ಮೃತಪಟ್ಟಿದ್ದು, 1332 ಮಂದಿ ಪಾದಚಾರಿಗಳಿಗೆ ಗಂಭೀರ ಗಾಯಗಳಾಗಿವೆ.

ಔಟರ್ ರಿಂಗ್ ರಸ್ತೆಯಲ್ಲೇ ಅತಿ ಹೆಚ್ಚು ಅಪಘಾತ

ಔಟರ್ ರಿಂಗ್ ರಸ್ತೆಯಲ್ಲೇ ಅತಿ ಹೆಚ್ಚು ಅಪಘಾತ

ಬೆಂಗಳೂರಲ್ಲಿ 923 ಕಿ.ಮೀ ದೂರದಲ್ಲಿ ಒಟ್ಟು 80 ರಿಂಗ್ ರಸ್ತೆಗಳಿವೆ, ಈ ರಸ್ತೆಗಳು 50 ಮೀಟರ್ ಅಗಲವಾಗಿದೆ. ಅದರಲ್ಲಿ ವಾಹನಗಳು ಒಂದರ ಹಿಂದೆ ಒಂದರಂತೆ ಸಂಚರಿಸುತ್ತವೆ. ಈ ರಸ್ತೆಗಳಲ್ಲಿ ವಾಹನಗಳು ಅತಿ ಹೆಚ್ಚು ವೇಗದಲ್ಲಿ ಸಂಚರಿಸುತ್ತಿರುತ್ತವೆ. ವಾಹನ ಸವಾರರು ಪಾದಚಾರಿಗಳ ಸುರಕ್ಷತೆಯನ್ನು ಗಮದಲ್ಲಿಟ್ಟುಕೊಳ್ಳದೆ ವಾಹನ ಚಲಾಯಿಸುತ್ತಾರೆ.

ಯಾವ್ಯಾವ ರಸ್ತೆಗಳಿಂದ ಪಾದಚಾರಿಗಳಿಗೆ ಸಂಕಷ್ಟ

ಯಾವ್ಯಾವ ರಸ್ತೆಗಳಿಂದ ಪಾದಚಾರಿಗಳಿಗೆ ಸಂಕಷ್ಟ

ಹೊಸೂರು ರಸ್ತೆ, ಔಟರ್‌ ರಿಂಗ್ ರಸ್ತೆ, ಮೈಸೂರು ರಸ್ತೆ, ಬಳ್ಳಾರಿ ರಸ್ತೆ, ಓಲ್ಡ್ ಮದ್ರಾದ್ ರಸ್ತೆ ಪ್ರಮುಖ ರಸ್ತೆಗಳಲ್ಲಿ ಅಪಘಾತವೂ ಹೆಚ್ಚು ಅದರಲ್ಲೂ ಪಾದಚಾರಿಗಳ ಸಾವಿನ ಸಂಖ್ಯೆಯೂ ಈ ರಸ್ತೆಗಳಲ್ಲಿ ಹೆಚ್ಚಿದೆ.

ಯಾಕೆ ಈ ಆರ್ಟೀರಿಯಲ್ ರಸ್ತೆಗಳು ಹೆಚ್ಚು ಅಪಾಯಕಾರಿ

ಯಾಕೆ ಈ ಆರ್ಟೀರಿಯಲ್ ರಸ್ತೆಗಳು ಹೆಚ್ಚು ಅಪಾಯಕಾರಿ

ಯಾಕೆ ಈ ಆರ್ಟೀರಿಯಲ್ ರಸ್ತೆಗಳು ಹೆಚ್ಚು ಅಪಾಯಕಾರಿ ಎಂದರೆ ಸಾಮಾನ್ಯ ರಸ್ತೆಗಳಿಗಿಂತ ಈ ರಸ್ತೆ ಗುಂಡಿ ರಹಿತವಾಗಿದೆ. ಅಷ್ಟೇ ಅಲ್ಲದೆ ಸಿಗ್ನಲ್ ಫ್ರೀ ಆಗಿರುವುದರಿಂದ ಅಪಘಾತವೂ ಹೆಚ್ಚಾಗಿದೆ. ಹಾಗೆಯೇ ಪಾದಚಾರಿಗಳಿಗೆ ಸಂಚರಿಸಲು ಮಾರ್ಗಗಳನ್ನೂ ಕೂಡ ನಿರ್ಮಾಣ ಮಾಡಿಲ್ಲ. 2017 ರಲ್ಲಿ ಸಿಲ್ಕ್ ಬೋರ್ಡ್‌ ಹಾಗೂ ಎಲೆಕ್ಟ್ರಾನಿಕ್‌ಸಿಟಿ ನಡುವೆ 10 ಕಿ.ಮೀ ವ್ಯಾಪ್ತಿಯಲ್ಲಿ 20 ಅಪಘಾತಗಳಾಗಿವೆ.

ಅಪಘಾತ ಸಂಖ್ಯೆ ಕಡಿಮೆ ಮಾಡುವುದು ಹೇಗೆ?

ಅಪಘಾತ ಸಂಖ್ಯೆ ಕಡಿಮೆ ಮಾಡುವುದು ಹೇಗೆ?

-ಈ ಆರ್ಟೀರಿಯಲ್ ರಸ್ತೆಗಳಲ್ಲಿ 1.8 ಮೀಟರ್ ಅಗಲದ ಪಾದಚಾರಿ ಮಾರ್ಗವನ್ನು ನಿರ್ಮಿಸಬೇಕು.

-ಈ ರಸ್ತೆಗಳಲ್ಲಿ ಸಿಗ್ನಲ್‌ಗಳ ಅಳವಡಿಕೆ

-ವೇಗವನ್ನು ನಿಯಂತ್ರಿಸಲು ಮಾನದಂಡ ಬೇಕು

ಸಿಗ್ನಲ್ ಫ್ರೀ ಕಾರಿಡಾರ್ ನಿರ್ಮಾಣ ಮಾಡುವಾಗ ಪಾದಚಾರಿಗಳ ಬಗ್ಗೆಯೂ ಆಲೋಚಿಸಬೇಕು. ಇಲ್ಲವಾದಲ್ಲಿ ಸ್ಕೈ ವಾಕ್, ಫೂಟ್ ಓವರ್ ಬ್ರಿಡ್ಜ್ ನಿರ್ಮಾಣ ಮಾಡಲೇಬೇಕು.

English summary
Pedestrians crashes were especially severe in the arterial stretches in peripheral areas of the city,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X