Namma Metro: ಚೀನಾ ನಿರ್ಮಿತ ಮೊದಲ ಮೆಟ್ರೋ ಸ್ವೀಕರಿಸಿದ ನೇರಳೆ ಮಾರ್ಗ, ಟ್ರಾಫಿಕ್‌ಗೆ ಬೈ..ಬೈ..
ಬೆಂಗಳೂರು, ಜನವರಿ 14: ಚೀನಾ ಕಂಪನಿ ಜೊತೆಗಿನ ಒಪ್ಪಂದದಂತೆ ಬೆಂಗಳೂರಿಗೆ ಹೊಸ ಮೆಟ್ರೋ ರೈಲು ಆಗಮಿಸಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಬಹುದಿನಗಳ ಬಳಿಕ ನೇರಳೆ ಮಾರ್ಗಕ್ಕೆ ಮತ್ತೊಂದು ರೈಲು ಸ್ವೀಕರಿಸಿದಂತಾಗಿದೆ. ಈ ರೈಲು ಚೀನಾದಿಂದ ಪೀಣ್ಯ ಇಂಡಸ್ಟ್ರೀಯಲ್ಲಿನ ಡಿಪೋಗೆ ಬಂದು ತಲುಪಿದೆ. ಇತ್ತೀಚೆಗೆ ಮೆಟ್ರೋ ಹಳದಿ ಮಾರ್ಗಕ್ಕಾಗಿ ರೈಲು ಪೂರೈಕೆಗೆ ಚಾಲನೆ ನೀಡಲಾಗಿತ್ತು. ಆ ಡ್ರೈವರ್‌ಲೆಸ್ ರೈಲು ಈ ತಿಂಗಳಾಂತ್ಯಕ್ಕೆ ಬೆಂಗಳೂರು ವೈಟ್‌ಫಿಲ್ಡ್ ಡಿಪೋಗೆ ಬರಲಿದೆ.
ಬೆಂಗಳೂರಿನಲ್ಲಿ ಒಟ್ಟು 55ಕ್ಕೂ ಹೆಚ್ಚು ಮೆಟ್ರೋ ರೈಲುಗಳು ಕಾರ್ಯ ನಿರ್ವಹಿಸುತ್ತಿವೆ. ಈ ಪೈಕಿ ಬಹುತೇಕ ರೈಲುಗಳು ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಓಡಾಡುತ್ತಿವೆ. ಈ ಹೊಸ ರೈಲಿಂದ ಈ ಮಾರ್ಗಕ್ಕೆ ಮತ್ತಷ್ಟು ಬಲದ ಬರಲಿದೆ. ಮುಖ್ಯವಾಗಿ ನೇರಳೆ ಮಾರ್ಗದಲ್ಲಿ ಪೀಕ್ ಹವರ್‌ನಲ್ಲಿ ಉಂಟಾಗುತ್ತಿದ್ದ ಸಂಚಾರ ದಟ್ಟಣೆ ಕಡಿಮೆ ಆಗುವ, ಟ್ರಾಫಿಕ್ ಸಮಸ್ಯೆಗೆ ಕೊಂಚ ಪರಿಹಾರ ನಿರೀಕ್ಷಿಸಬಹುದಾಗಿದೆ.

ನಮ್ಮ ಮೆಟ್ರೋ ಪರ್ಪಲ್ ಲೈನ್‌ನಲ್ಲಿ ಓಡಲಿರುವ ಮೊದಲ ಚೀನಾ ಮೆಟ್ರೋ ರೈಲು ಸೆಟ್ ಇದಾಗಿದೆ. ಒಟ್ಟು ಆರು ಬೋಗಿಗಳನ್ನು ಈ ರೈಲು ಹೊಂದಿದೆ. ಮುಂದಿನ ತಿಂಗಳು ಫೆಬ್ರವರಿಯಲ್ಲಿ ವಿವಿಧ ತಪಾಸಣೆ ಪೂರ್ಣಗೊಳಿಸಿ ನೇರಳೆ ಮಾರ್ಗದಲ್ಲಿ ಓಡಾಡುವ ನಿರೀಕ್ಷೆ ಇದೆ ಎಂದು 'ಡಿಎಚ್' ವರದಿ ಮಾಡಿದೆ.
ಬೆಂಗಳೂರಿನ ಪೀಣ್ಯ ಡಿಪೋಗೆ 6 ಬೋಗಿಗಳ ಮೆಟ್ರೋ ಒಳಗೊಂಡಿದೆ. ಮೂಲಮಾದರಿ ರೈಲು ಇದಾಗಿದ್ದು, ಜನವರಿ 12 ರಂದು ಪೀಣ್ಯ ಡಿಪೋಗೆ ಆಗಮಿಸಿದ್ದು, ಮೆಟ್ರೋ ಬೋಗಿ ನಿರಂತರ ಒಂದು ತಿಂಗಳು ಪ್ರಯಾಣ ಅಂತ್ಯಗೊಂಡಿದೆ. ಲಾರಿ ಮೂಲಕ ಬೆಂಗೂರಿಗೆ ಬಂದಿಳಿದಿದೆ.
37 ಪರೀಕ್ಷೆಗಳ ಬಳಿಕ ಸೇವೆ ನಿಯೋಜನೆ
ಸದ್ಯ ರೈಲು ಬೋಗಿಗಳನ್ನು ಜೋಡಿಸುವ ಕಾರ್ಯವಾಗುತ್ತಿದೆ. ವಿದ್ಯುತ್ ಸರ್ಕ್ಯೂಟ್ ಪರೀಕ್ಷೆ ನಡೆಯಲಿದೆ. ಜೋಡಿಸಿ ಹಳಿಗೆ ಇಳಿಸಿ ಮುಖ್ಯ ಮಾರ್ಗದಲ್ಲಿಯೇ ನಿಯಮಗಳಂತೆ ವಿವಿಧ 37 ಶಾಸನಬದ್ಧ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಇನ್ನೊಂದು ತಿಂಗಳಲ್ಲಿ ಈ ಹೊಸ ಚೀನಾ ನಿರ್ಮಿತ ರೈಲು ಪ್ರಯಾಣಿಕರ ಸೇವೆ ಆರಂಭಿಸಲಿದೆ.
ನಿರೀಕ್ಷೆಯಂತೆ ಮುಂದಿನ ದಿನಗಳು ಈ ಹೊಸ ರೈಲು ಸಂಚಾರ ನಡೆಸುವ ಸಾಧ್ಯತೆ ಇದೆ. ಪರೀಕ್ಷೆಗಳು ವಿಳಂಬವಾದರೆ ಇದೇ ರೈಲುನ ಕಾರ್ಯಯೋಜನೆ ಸುಮಾರು ಆರು ತಿಂಗಳು ತಡವಾಗಬಹುದು ಎಂದು BMRCL ಸಾರ್ವಜನಿಕ ಸಂಪರ್ಕಾಧಿಕಾರಿಗಳು ತಿಳಿಸಿದ್ದಾರೆ.
ನೇರಳೆ ಮಾರ್ಗದಲ್ಲಿ ರಾತ್ರಿ ವೇಳೆ ಮೆಟ್ರೋ ಪರೀಕ್ಷೆ
ಹೊಸ ರೋಲಿಂಗ್ ಸ್ಟಾಕ್ ಬಂದಾಗ ಶಾಸನಬದ್ದವಾಗಿ ಸಂಶೋಧನಾ ವಿನ್ಯಾಸ ಮತ್ತು ಮಾನದಂಡಗಳ ಸಂಸ್ಥೆ (RDSO) ವತಿಯಿಂದ ವಿವಿಧ ಪರೀಕ್ಷೆ ಪೂರೈಸಬೇಕು. ಇದು ಕನಿಷ್ಠ ಆರು ತಿಂಗಳುಗಳನ್ನು ತೆಗೆದುಕೊಳ್ಳಲಿದೆ. ಅದೆಲ್ಲ ಪೂರ್ಣಗೊಂ ಬಳಿಕವೇ ಸೇವೆಗೆ ನಿಯೋಜಿಸಲಾಗುವುದು ಎಂದರು.
ಇಷ್ಟು ಪರೀಕ್ಷೆಗಳನ್ನು ಹಾಲಿ ನೇರಳೆ ಮಾರ್ಗದಲ್ಲಿ ನಡೆಸಲು ಸಾಧ್ಯವಿಲ್ಲ. ಕಾರಣ ಈ ಮಾರ್ಗದಲ್ಲಿ ನಿತ್ಯ ರೈಲು ಸಂಚಾರ ಇರುತ್ತದೆ. ಹೀಗಾಗಿ ರಾತ್ರಿ ವೇಳೆ ವಿವಿಧ ಪರೀಕ್ಷೆಗಳು ನಡೆಸಲಾಗುವುದು. ಮುಖ್ಯ ಮಾರ್ಗದಲ್ಲಿಯೇ ಪರೀಕ್ಷೆ ನಡೆಸಬೇಕಾದ್ದರಿಂದ ಹಗಲು ರೈಲು ಸಂಚಾರ ನಿರ್ಬಂಧಿಸಿ ಪರೀಕ್ಷೆ ಮಾಡದೇ, ರಾತ್ರಿ ವೇಳೆ ಪರೀಕ್ಷೆ ಮಾಡಲಾಗುವುದು.
ಬೆಂಗಳೂರು ಮೆಟ್ರೋದೊಂದಿಗೆ ಮಾಡಿಕೊಂಡ ಒಪ್ಪಂದಂತೆ ಚೀನಾದ ಕಂಪನಿಯು ಈ ರೈಲು ತಯಾರಿಸಿದೆ. ನಮ್ಮ ಮೆಟ್ರೋ ನೇರಳೆ ಮಾರ್ಗಕ್ಕೆ ಚೀನಾದಿಂದ ಬಂದ ಮೊದಲ ರೈಲು ಇದಾಗಿದೆ. ಒಟ್ಟಾರೆ ಮೆಟ್ರೋಗಾಗಿ 2019ರಲ್ಲಿ ನಡೆದ ಒಪ್ಪಂದದ ಪ್ರಕಾರ, ಚೀನಾರ 216 ಕೋಚ್‌ಗಳನ್ನು ಅಂದರೆ ಆರು ಬೋಗಿ ಒಂದು ರೈಲಿನಂತೆ 36 ರೈಲುಗಳನ್ನು ಪೂರೈಸಬೇಕಿದೆ.
ಚೀನಾದ 216 ಕೋಚ್ಗಳು ಬೆಂಗಳೂರಿಗೆ ಬಂದಲ್ಲಿ, ಅದರಲ್ಲಿ ಹದಿನೈದು ರೈಲುಗಳು ಹಳದಿ ಮಾರ್ಗಕ್ಕೆ ನಿಯೋಜಿಸಲಾಗುವುದು. 21 ರೈಲುಗಳನ್ನು ನೇರಳೆ ಮಾರ್ಗ ಮತ್ತು ಹಸಿರು ಮಾರ್ಗದಲ್ಲಿ ಸಂಚರಿಸಲಿವೆ. ಹಳದಿ ಮಾರ್ಗಕ್ಕೆ ಎರಡು ಪ್ರೋಟೋಟೈಪ್ ರೈಲುಗಳು ಕಳೆದ ವರ್ಷ ಫೆಬ್ರವರಿ 2024ರಂದು ಹೆಬ್ಬಗೋಡಿ ಡಿಪೋಗೆ ಆಗಮಿಸಿದವು. ಅವುಗಳ ಪ್ರಾಯೋಗಿಕ ಪರಿಶೀಲನೆ, ತಪಾಸಣೆ ಎಲ್ಲ ಮುಗಿದಿವೆ.
ಜನವರಿ 06ರಂದು ಕೊಲ್ಕತ್ತಾದಲ್ಲಿ ಚೀನಾ ಮೂಲಕ ಮೆಟ್ರೋ ಮಾರ್ಗದ ಪೂರೈಕೆಗೆ ಚಾಲನೆ ನೀಡಲಾಗಿದೆ. ಬಿಎಂಆರ್‌ಸಿಎಲ್ ಅಧಿಕಾರಿಗಳು, ಸಂಸದರ ಸಮ್ಮುಖದಲ್ಲಿ ಕೇಂದ್ರ ಸಚಿವರು ಬೆಂಗಳೂರಿಗೆ ರೈಲು ರವಾನೆಗೆ ಚಾಲನೆ ನೀಡಿದರು.












Click it and Unblock the Notifications