ಮಿಲಿಟರಿಯಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚನೆ: ಇಬ್ಬರ ಬಂಧನ
ಬೆಂಗಳೂರು, ಆಗಸ್ಟ್ 11: ಸೇನೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಆಮಿಷವೊಡ್ಡಿ ಲಕ್ಷಾಂತರ ಹಣ ಪಡೆದು ನಕಲಿ ಅಪಾಯಿಂಟ್‌ಮೆಂಟ್ ಆರ್ಡರ್ ನೀಡುತ್ತಿದ್ದ ವಂಚಕರನ್ನು ಬೆಂಗಳೂರು ಪೊಲೀಸರು ಸೆರೆ ಹಿಡಿದಿದ್ದಾರೆ.
ಭಾರತೀಯ ಸೇನೆಯಲ್ಲಿ ಉದ್ಯೋಗ ಕೊಡಿಸುತ್ತೇವೆ ಎಂದು ಯಾರಾದರೂ ಹೇಳಿದರೆ ಖಂಡಿತ ಅದು ಸುಳ್ಳು ನಂಬಬೇಡಿ, ನಿಮ್ಮ ಸ್ವಂತ ಬಲವನ್ನು ಪ್ರದರ್ಶಿಸಿ ಸೇನೆಗೆ ಸೇರಿಕೊಳ್ಳಿ.
ಇಂತಹ ಒಂದು ತಂಡವನ್ನು ಬೆಂಗಳೂರು ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೇನೆಯಲ್ಲಿ ಉದ್ಯೋಗ ಕೊಡಿಸುತ್ತೇವೆ ಎಂದು ಹೇಳಿ ವಂಚನೆ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.ಪ್ರತಿ ಅಭ್ಯರ್ಥಿಯಿಂದ ಎರಡು ಲಕ್ಷ ಬೇಡಿಕೆ ಇಡುತ್ತಿದ್ದ ವಂಚಕರು ಮೊದಲ ಹಂತದಲ್ಲಿ 40 ಸಾವಿರ ರೂ ಪಡೆದು ನಕಲಿ ಅಪಾಯಿಂಟ್‌ಮೆಂಟ್ ಆರ್ಡರ್ ನೀಡುತ್ತಿದ್ದರು.

ಆರೋಪಿಗಳಾದ ಕೃಷ್ಣರಾಜನ್, ಜ್ಯೋತಿಲಕ್ಷ್ಮಿ, ಸುಜಾತ, ಮೆಹಬೂಬ್‌ಬಾಷ ವಿರುದ್ಧ ಪ್ರಕರಣ ದಾಖಲಾಗಿತ್ತು. ಇವರಲ್ಲಿ ಕೃಷ್ಣರಾಜನ್ ಮತ್ತು ಸುಜಾತರನ್ನು ಬಂಧಿಸಲಾಗಿದ್ದು, ಉಳಿದವರಿಗಾಗಿ ಶೋಧ ನಡೆಸಲಾಗುತ್ತಿದೆ. ಊಟಿ ಇನ್ನಿತರೆ ಪ್ರದೇಶಗಳಿಗೆ ಕರೆದೊಯ್ದು ವೈದ್ಯಕೀಯ ತಪಾಸಣೆ ನಡೆಸುತ್ತಿದ್ದರು ಎಂದು ದೀಪು ಶಂಕರ ಅವರು ಹೆಬ್ಬಾಳ ಪೊಲೀಸರಿಗೆ ದೂರು ನೀಡಿದ್ದರು.
ವಂಚಕರು ಹಲವರಿಗೆ ಈ ರೀತಿ ಮೋಸ ಮಾಡಿರುವುದಾಗಿ ಅವರು ತಿಳಿಸಿದ್ದರು. ಸುಜಾತ ಎಂಬಾಕೆ ಈ ಹಿಂದೆಯೂ ಕೆಲಸ ಕೊಡಿಸುವುದಾಗಿ ವಂಚಿಸಿರುವ ಸಂಬಂಧ ಹೆಬ್ಬಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಇಬ್ಬರು ವಂಚಕರನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.












Click it and Unblock the Notifications