'ಅರಿವು' ಸಾಲ ಯೋಜನೆ: ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸರ್ಕಾರದ ಕೊಡುಗೆ

ಬೆಂಗಳೂರು, ಜುಲೈ 8: ರಾಜ್ಯದಲ್ಲಿರುವ ಅಲ್ಪಸಂಖ್ಯಾತ ವರ್ಗಗಳಾದ ಕ್ರೈಸ್ತ, ಮುಸ್ಲಿಂ, ಜೈನ, ಬೌದ್ಧ, ಸಿಖ್, ಫಾರ್ಸಿ ಮತಗಳ ವಿದ್ಯಾರ್ಥಿಗಳಿಗೆ ಸಾಲ ನೀಡುವ 'ಅರಿವು' ಎಂಬ ಯೋಜನೆಯನ್ನು ಸರ್ಕಾರ ರೂಪಿಸಿದೆ.

ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವ ಈ ಯೋಜನೆ ಬಡತನ ರೇಖೆಗಿಂತ ಕೆಳಗಿರುವ ಮಕ್ಕಳ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ನೆರವಾಗಲಿದೆ.

Arivi scheme for Minority classes in Karnataka state

ಈ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳು ತಮ್ಮ ವ್ಯಾಸಂಗ ಮುಗಿಯುವವರೆಗೆ ವಾರ್ಷಿಕ 5000 ರೂ. ಯಿಂದ 50000 ರೂ.ವರೆಗೆ ಸಾಲ ಪಡೆಯಬಹುದು. ವ್ಯಾಸಂಗ ಮುಗಿಸಿದ ಒಂದು ವರ್ಷದ ನಂತರ ಶೇ. 2 ರ ಬಡ್ಡಿದರದಲ್ಲಿಸಾಲ ಮರುಪಾವತಿ ಮಾಡಬೇಕು. ಅರ್ಜಿ ಸಲ್ಲಿಸಿದ ಅರ್ಹ ವಿದ್ಯಾರ್ಥಿಗಳಿಗೆ ಸಾಲ ಸೌಲಭ್ಯ ನೀಡಲಾಗುತ್ತದೆ.

ವೈದ್ಯಕೀಯ, ಎಂಜಿನಿಯರಿಂಗ್, ದಂತ ವೈದ್ಯಕೀಯ, ನರ್ಸಿಂಗ್, ಬಿಇಡಿ, ಬಿಬಿಎಂ, ಬಿಸಿಎ, ಡಿಇಡಿ, ಐಟಿಐ ಸೇರಿದಂತೆ ಇನ್ನಿತರ ಕೋರ್ಸ್ ಗಳಿಗೆ ಈ ಯೋಜನೆ ಅನ್ವಯಿಸುತ್ತದೆ. (ಚಿತ್ರ-ಮಾಹಿತಿ: ಕರ್ನಾಟಕ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+