ಬೆಳೆಗಾರರಿಗೆ ಹೊಸ ತಾಜಾತನ ನೀಡಲಿದೆಯೇ ಅಡಿಕೆ ಟೀ ?
ಬೆಂಗಳೂರು, ಜನವರಿ, 20: ಗುಟ್ಕಾ ನಿಷೇಧಧ ಗುಮ್ಮದಿಂದ ತತ್ತರಿಸಿ ಹೋಗಿದ್ದ ಅಡಿಕೆ ಬೆಳೆಗಾರರಿಗೆ ಶುಭ ಸುದ್ದಿ ನೀಡಿ ತಿಂಗಳುಗಳೆ ಕಳೆದಿದ್ದವು. ಆದರೆ ಇದೀಗ ಅಧಿಕೃತವಾಗಿ ಅರೇಕಾ ಟೀ ಮಾರುಕಟ್ಟೆಗೆ ಕಾಲಿಡಲಿದೆ.
ಅಡಿಕೆ ಯಿಂದ ಚಹಾ ತಯಾರಿಸಿದ್ದ ತೀರ್ಥಹಳ್ಳಿ ಮೂಲದ ನಿವೇದನ್ ನೆಂಪೆ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೀಗ ಕೊಂಚ ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಮಾಡಿಕೊಂಡು ಮಾರುಕಟ್ಟೆಗೆ ಬಿಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜನವರಿ 22 ರಂದು ಮಧ್ಯಾಹ್ನ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಿದ್ದಾರೆ.[ಅಡಿಕೆ ಬೆಳೆಗಾರರ ನಿಜ ಸಮಸ್ಯೆಗಳೇನು?]
ಕಾರ್ಯಕ್ರಮದಲ್ಲಿ ವಿಜ್ಞಾನಿಗಳು, ರಾಜಕಾರಣಿಗಳು ಪಾಲ್ಗೊಳ್ಳಲಿದ್ದಾರೆ. ಇನ್ನು ಮುಂದೆ ನೀವು ಕೂಡಾ ಅರೇಕಾ ಟೀ ಯನ್ನು ಒಮ್ಮೆ ಮನೆಯಲ್ಲಿ ಪ್ರಯೋಗಿಸಬಹುದಾಗಿದೆ. ರುಚಿ ಮೆಚ್ಚಿದರೆ ಕಾಯಂ ಸದಸ್ಯರನ್ನಾಗಿ ಮಾಡಿಕೊಳ್ಳಿ.

ಮೇಕ್ ಇನ್ ಇಂಡಿಯಾ ಪ್ರಶಸ್ತಿ
ಆಸ್ಟ್ರೇಲಿಯಾದಲ್ಲಿ ವ್ಯಾಸಂಗ ಮಾಡಿ ಹಿಂದಿರುಗಿದ್ದ ನಿವೇದನ್ ಅವರಿಗೆ ಮೇಕ್ ಇನ್ ಇಂಡಿಯಾ ಯೋಜನೆಯ ಅಡಿ ಪ್ರಶಸ್ತಿಯೂ ಸಿಕ್ಕಿತ್ತು. ಇನ್ನೋವೇಟಿವ್ ಪ್ರಾಡೆಕ್ಟ್ ಆಫ್ ದಿ ಈಯರ್ ಪ್ರಶಸ್ತಿಯೂ ನಿವೇದನ್ ಅವರಿಗೆ ದೊರೆತಿತ್ತು.

ಸಿಎನ್ ಆರ್ ರಾವ್ ಮೆಚ್ಚುಗೆ
ನಿವೇದನ್ ಆಳ್ವಾ ಅವರು ಖ್ಯಾತ ವಿಜ್ಞಾನಿ ಭಾರತರತ್ನ ಸಿಎನ್ ಆರ್ ರಾವ್ ಅವರನ್ನು ಭೇಟಿ ಮಾಡಿ ಮಾರ್ಗದರ್ಶನ ಪಡೆದುಕೊಂಡಿದ್ದರು. ರಾವ್ ಸಹ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಆರು ಲಕ್ಷ ಜನರಿಗೆ ಅನುಕೂಲ
ಓಟ್ಟು ಅಡಿಕೆ ಬೆಳೆಗಾರರ ಕುಟುಂಬ 6 ಲಕ್ಷ ಮತ್ತು ಅದಕ್ಕೆ ಹೊಂದಿಕೊಂಡವರು 50 ಲಕ್ಷ ಜನ. ಗುಟ್ಕಾ ನಿಷೇಧದಿಂದ ಬೆಳೆಗಾರರು ಭೀತಿ ಅನುಭವಿಸುತ್ತಿದ್ದರು. ಆದರೆ ಇದೀಗ ಅಡಿಕೆ ಚಹಾವನ್ನು ಜನ ಮೆಚ್ಚಿಕೊಂಡರೆ ಅರ್ಧ ಸಮಸ್ಯೆ ಬಗೆ ಹರಿದಂತೆಯೇ.

ಮಲೆನಾಡಲ್ಲಿ ಹೊಸ ಕಿರಣ
ಮಲೆನಾಡಿನ ಶಿವಮೊಗ್ಗ, ಶಿರಸಿ, ತೀರ್ಥಹಳ್ಳಿ, ಹೊಸನಗರ, ಸಾಗರ, ಯಲ್ಲಾಪುರ, ಸಿದ್ದಾಪುರ, ಕುಮಟಾದ ಭಾಗದ ಜನರಲ್ಲಿ ಅರೇಕಾ ಟೀ ಹೊಸ ಸಂಚಲನ ಮೂಡಿಸಿರುವುದು ಸುಳ್ಳಲ್ಲ. ನಮ್ಮದೇ ಹುಡುಗನ ಸಾಧನೆಯನ್ನು ಪ್ರೋತ್ಸಾಹಿಸುವುದರೊಂದಿಗೆ ಅರೇಕಾ ಟೀ ಒಪ್ಪಿಕೊಳ್ಳಬೇಕಿದೆ.












Click it and Unblock the Notifications