Appu Agarbatti: 'ಅಪ್ಪು ಗಂಧದಗುಡಿ ಅಗರಬತ್ತಿ' ಉದ್ಯಮದ ಅಪ್ಡೇಟ್
ಬೆಂಗಳೂರು, ಏಪ್ರಿಲ್ 29: ಇದೇ ಏಪ್ರಿಲ್ 24ರಂದು ವರನಟ ಡಾ.ರಾಜಕುಮಾರ್ ಹುಟ್ಟು ಹಬ್ಬದ ದಿನವೇ ಹೊಸ ಉದ್ಯಮಕ್ಕೆ ಕಾಲಿಟ್ಟ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಸೋಮವಾರ 'ಅಪ್ಪು ಗಂಧದಗುಡಿ ಅಗರಬತ್ತಿ' ಮತ್ತಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ನಿಮ್ಮ ಮನೆಗೆ ಅಪ್ಪು ಅಗರಬತ್ತಿಗಳು ಈ ಪ್ಯಾಕೇಟ್‌ನಲ್ಲಿ ಬರಲಿವೆ ಎಂದು ಮಾಹಿತಿ ನೀಡಿದ್ದಾರೆ.
ಹೌದು, ಅಪ್ಪು ಗಂಧದಗುಡಿ ಅಗರಬತ್ತಿ ಕುರಿತು ಸೋಮವಾರ ಅಶ್ವಿನಿ ಪುನೀತ್ ರಾಜ್‌ಕುಮಾರ್ ಟ್ವೀಟ್ ಮಾಡಿದ್ದಾರೆ. ಇದರಲ್ಲಿ ''ಪ್ರಸ್ತುತಪಡಿಸುತ್ತಿದ್ದೇವೆ ಅಪ್ಪು ಗಂಧದಗುಡಿ ಅಗರಬತ್ತಿ, ಇದು ಸುಗಂಧದ ಪರಂಪರೆ'' ಎಂದು ಬರೆದುಕೊಂಡಿದ್ದಾರೆ.

ಅಪ್ಪು ಅಗರಬತ್ತಿ ಜೊತೆಗೆ ಕಡ್ಡಿಪೊಟ್ಟಣ ಉಚಿತ ಎಂಬ ಮಾಹಿತಿ ಈ ಪೋಸ್ಟ್‌ನಲ್ಲಿದೆ. ಅಶ್ವಿನಿ ಅಪ್ಪು ಅವರ ಈ ಪೋಸ್ಟ್ ಅನ್ನು ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದಾರೆ. ಶೇರ್ ಲೈಕ್ ಕೊಟ್ಟು ಬೆಂಬಲಿಸುತ್ತಿದ್ದಾರೆ. ಹಬ್ಬದ ಸಂಭ್ರಮದಲ್ಲಿ ಬಿಳಿ ಶರ್ಟು ಪಂಚೆ ತೊಟ್ಟ ಅಪ್ಪು ಫೋಟೋ ಇರುವ ಅರಬತ್ತಿ ಪ್ಯಾಕೇಟ್ ಇದಾಗಿದೆ.
ಪೂಜೆಯಲ್ಲಿ ಸುಗಂಧ ಭರಿತ ಸ್ನೇಹ
ಈ ಅಗರಬತ್ತಿ ಬಳಸುವ ಮುಖೇನ ನೀವು ದಿನನಿತ್ಯ ಪೂಜೆಯಲ್ಲಿ ಸುಗಂಧ ಭರಿತ ಸ್ನೇಹ ಇರಲಿದೆ ಎಂದು ಪ್ಯಾಕೇಟ್ ಮೇಲೆ ಬರೆಯಲಾಗಿದೆ. ಅಪ್ಪು ಅವರು ಬದುಕಿರುವಾಗಲೇ ಈ ಕುರಿತು ಒಂದಷ್ಟು ಮಾತುಕತೆಗಳು ನಡೆದಿದ್ದವು. ಆದರೆ ಯಾವುದು ಅಂತಿಮವಾಗಿರಲಿಲ್ಲ.
ಇದೀಗ ಅಗರಬತ್ತಿ ಉದ್ಯಮದ ರಾಜೇಶ್ ಎಂಬುವವರು ಅಶ್ವಿನಿ ಅವರ ಬಳಿ ಮಾತನಾಡಿ ಒಪ್ಪಂದದ ಮೂಲಕ ಉದ್ಯಮ ಆರಂಭಿಸಲು ಮುಂದಾಗಿದ್ದಾರೆ. ಈ ಕುರಿತು ವರನಟ ಡಾ.ರಾಜಕುಮಾರ್ ಅವರ ಹುಟ್ಟುಹಬ್ಬದ ದಿನವೇ ಹೊಸ ಉದ್ಯಮ ಲೋಕಾರ್ಪಣೆ ಮಾಡಲಾಗಿತ್ತು.

ಅಪ್ಪಾಜಿ ಹುಟ್ಟು ಹಬ್ಬ ಹಾಗೂ ಗಂಧದಗುಡಿ ಸಿನಿಮಾ ಐವತ್ತು ವರ್ಷದ ಸ್ಮರಣೀಯ ಇಂದಿನ ನೆನಪಿನಲ್ಲಿ ಅಪ್ಪು ಗಂಧದಗುಡಿ ಅಗರಬತ್ತಿಯೊಂದಿಗೆ ಮಹತ್ವದ ದಿನಗಳನ್ನು ಸ್ಮರಿಸೋಣ ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಬರೆದುಕೊಂಡಿದ್ದಾರೆ. ಇದೀಗ ಹೊಸ ಪ್ಯಾಕೇಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ.
ಆದಷ್ಟು ಶೀಘ್ರವೇ ನಾಡಿನ ಪ್ರತಿ ಮನೆ ಮನೆಯಲ್ಲೂ, ಅಪ್ಪು ಅಭಿಮಾನಿಗಳ ಮನೆಯಲ್ಲೂ ಅಪ್ಪು ಹೆಸರಿನ ಗಂಧದಗುಡಿ ಅಗರಬತ್ತಿಗಳು ಬೆಳಗಲಿವೆ.












Click it and Unblock the Notifications