• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಸ್ ಚಾಲಕನ ಪರಿಸರ ಪ್ರೇಮ, ಜನರಿಗೆ ಹಸಿರು ಬಳ್ಳಿಯ ಸ್ವಾಗತ

|

ಬೆಂಗಳೂರು, ಏಪ್ರಿಲ್ 12 : ಪರಿಸರ ಪ್ರೇಮವಿದ್ದರೆ ಸಾಕು ನಮ್ಮ ಚಿಕ್ಕ ಪ್ರಯತ್ನದಿಂದ ಸಹ ನಾವು ಪರಿಸರವನ್ನು ಕಾಪಾಡಬಹುದು ಎಂಬುದನ್ನು ಚಾಲಕರೊಬ್ಬರು ತಿಳಿಸಿಕೊಟ್ಟಿದ್ದಾರೆ. ಬಿಎಂಟಿಸಿ ಬಸ್ ಚಾಲಕನ ಕಾರ್ಯವನ್ನು ಎಲ್ಲರೂ ಶ್ಲಾಘಿಸುತ್ತಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಚಾಲಕರೊಬ್ಬರ ಪರಿಸರ ಕಾಳಜಿಯನ್ನು ಬಿಎಂಟಿಸಿ ಶ್ಲಾಘನೆ ಮಾಡಿದೆ. ಸಮೂಹ ಸಾರಿಗೆ ಬಳಸಿ, ಪರಿಸರ ಉಳಿಸಿ ಎಂದು ಕರೆ ಕೊಟ್ಟಿರುವ ಸಂಸ್ಥೆ ಚಾಲಕನ ಕಾರ್ಯವನ್ನು ಫೇಸ್‌ಬುಕ್ ಮೂಲಕ ಜನರಿಗೆ ತಿಳಿಸಿದೆ.

ಬಿಎಂಟಿಸಿಯಲ್ಲಿ ಇಟಿಎಸ್ ಬದಲು ಆಂಡ್ರಾಯ್ಡ್ ಟಿಕೆಟ್ ಯಂತ್ರ

ಚಾಲಕ ವೃತ್ತಿಯ ಕರ್ತವ್ಯ ನಿರ್ವಹಣೆ ಜೊತೆಗೆ ಪರಿಸರದ ಬಗ್ಗೆ ತಮಗಿರುವ ಕಾಳಜಿಯನ್ನು ಪ್ರದರ್ಶಿಸಿದ್ದಾರೆ ನಾರಾಯಣಪ್ಪ. ಇತರರಿಗೂ ಮಾದರಿಯಾಗುವಂತೆ ನಾರಾಯಣಪ್ಪ ಅವರು ಬಸ್ಸಿನಲ್ಲಿ ಗಿಡ, ಬಳ್ಳಿಯನ್ನು ಬೆಳೆಸಿದ್ದಾರೆ.

ಬಿಎಂಟಿಸಿ ಬಸ್‌, ಟಿಕೆಟ್ ಮೂಲಕ ಮತದಾನ ಜಾಗೃತಿ

ಪರಿಸರ ಸ್ನೇಹಿ ಕೆಲಸ ನಿರ್ವಹಿಸುತ್ತಿರುವ ನಾರಾಯಣಪ್ಪ ಅವರು ಘಟಕ 6ರ ಇಂದಿರಾನಗರ ಡಿಪೋ ಸಿಬ್ಬಂದಿ. ಬಸ್ಸಿನಲ್ಲಿರುವ ಚಿಕ್ಕ ಜಾಗದಲ್ಲಿಯೇ ಅವರು ಸಸಿಗಳನ್ನು ಬೆಳೆಸಿದ್ದಾರೆ. ಬಸ್ಸಿನೊಳಗೆ ಕಾಲಿಟ್ಟರೆ ಹಸಿರು ಬಳ್ಳಿ ನಿನ್ನನ್ನು ಸ್ವಾಗತ ಮಾಡುತ್ತದೆ.

ನಾರಾಯಣಪ್ಪ ಅವರ ಕೆಲಸವನ್ನು ಕಣ್ತುಂಬಿಕೊಳ್ಳಲು ನೀವು ಮಾರ್ಗ ಸಂಖ್ಯೆ 201/14, ವಾಹನ ಸಂಖ್ಯೆ ಕೆಎ-57 ಎಫ್-0838 ರಲ್ಲಿ ಪ್ರಯಾಣ ಮಾಡಬಹುದು.

English summary
Bangalore Metropolitan Transport Corporation (BMTC) appreciated driver Narayanappa environmental concern. Narayanappa working as driver at depot 6, Indiranagar. He has shown his love towards nature creating a Eco-friendly environment while on duty by cultivating saplings in his bus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X