ಬೆಂಗಳೂರು; 1 ಬಿಎಚ್‌ಕೆ ಮನೆ/ ಫ್ಲ್ಯಾಟ್‌ ಹಂಚಿಕೆ, ಅರ್ಹತೆಗಳು

ಬೆಂಗಳೂರು, ಆಗಸ್ಟ್ 22; ಬೆಂಗಳೂರು ನಗರದ ಜನರಿಗೆ ಕರ್ನಾಟಕ ಸರ್ಕಾರ ಸಿಹಿಸುದ್ದಿ ನೀಡಿದೆ. ವಸತಿ ಇಲಾಖೆಯಿಂದ 'ಮುಖ್ಯಮಂತ್ರಿಗಳ ಬಹುಮಹಡಿ ಬೆಂಗಳೂರು ವಸತಿ ಯೋಜನೆ' ಯಡಿಯಲ್ಲಿ 1 ಬಿಎಚ್‌ಕೆ ಮನೆ/ ಫ್ಲ್ಯಾಟ್‌ಗಳ ಹಂಚಿಕೆಗಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಮನೆಗಳನ್ನು ಪಡೆಯಲು ಆಸಕ್ತರು, ಅರ್ಹರು ದಿನಾಂಕ 23/8/2021 ರಿಂದ ದಿನಾಂಕ 21/9/2021ರವರೆಗೆ ಅರ್ಜಿಗಳನ್ನು ಸಲ್ಲಿಸಬಹುದು. ಈ ಸದಾವಕಾಶವನ್ನು ಉಪಯೋಗಿಸಿಕೊಂಡು ಅರ್ಜಿ ಸಲ್ಲಿಕೆ ಮಾಡಿ ಎಂದು ಜನರಲ್ಲಿ ಮನವಿ ಮಾಡಲಾಗಿದೆ. ಫಲಾನುಭವಿಗಳು ಇಚ್ಚಿಸಿದಲ್ಲಿ ರೂ. 5,00,000ದ ತನಕ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯದ ನೆರವನ್ನು ಸಹ ನೀಡಲಾಗುತ್ತದೆ.

ಒಂದು ಕುಟುಂಬದಿಂದ ಒಂದು ಅರ್ಜಿಯನ್ನು ಮಾತ್ರ ಸಲ್ಲಿಕೆ ಮಾಡಲು ಅವಕಾಶವಿದೆ. ಅರ್ಜಿ ಸಲ್ಲಿಸುವವರು ಕನಿಷ್ಠ 5 ವರ್ಷಗಳಿಗೆ ಮೇಲ್ಪಟ್ಟು ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ವಾಸವಾಗಿರಬೇಕು. ಚುನಾವಣಾ ಆಯೋಗದಿಂದ ನೀಡಲಾಗುವ ಗುರುತಿನ ಚೀಟಿಯನ್ನು ಹೊಂದಿರಬೇಕು. ವಸತಿ ರಹಿತರಾಗಿರಬೇಕು, ಸರ್ಕಾರದ ಯಾವುದೇ ವಸತಿ ಯೋಜನೆಯ ಫಲಾನುಭವಿ ಆಗಿರಬಾರದು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ರೂ. 3 ಲಕ್ಷದ ಮಿತಿಯೊಳಗೆ ಇರಬೇಕು.

ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿಯವರಿಗೆ ಶೇ 30ರಷ್ಟು. ಪರಿಶಿಷ್ಟ ಪಂಗಡದವರಿಗೆ ಶೇ 10ರಷ್ಟು, ಅಲ್ಪ ಸಂಖ್ಯಾತರಿಗೆ ಶೇ 10ರಷ್ಟು ಹಾಗೂ ಸಾಮಾನ್ಯ ವರ್ಗಕ್ಕೆ ಶೇ 50ರಷ್ಟು ಮೀಸಲಾತಿ ನೀಡಲಾಗುತ್ತದೆ. ಯೋಜನೆಯ ಒಟ್ಟು ಶೇ 2ರಷ್ಟು ಮನೆಗಳನ್ನು ವಿಕಲಚೇತನರಿಗೆ ನೆಲಮಹಡಿಯಲ್ಲಿ ಮೀಸಲಿಡಲಾಗಿದೆ. ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಮಿಸುತ್ತಿರುವ ಮನೆಗಳ ಪೈಕಿ ಶೇ 50ರಷ್ಟು ಮನೆಗಳನ್ನು ಯೋಜನಾ ಪ್ರದೇಶದ ಸ್ಥಳೀಯರಿಗೆ ಹಂಚಿಕೆ ಮಾಡಲಾಗುತ್ತದೆ.

ಯಾವ ಯೋಜನೆಯಡಿ ಮನೆ ಹಂಚಿಕೆ

ಯಾವ ಯೋಜನೆಯಡಿ ಮನೆ ಹಂಚಿಕೆ

ಬೆಂಗಳೂರು ನಗರದಲ್ಲಿ ವಸತಿ ರಹಿತರಿಗೆ ಮನೆಗಳನ್ನು 'ಮುಖ್ಯಮಂತ್ರಿಗಳ ಬಹುಮಹಡಿ ಬೆಂಗಳೂರು ವಸತಿ ಯೋಜನೆ' ಯಡಿಯಲ್ಲಿ 1 ಬಿಎಚ್‌ಕೆ ಮನೆ/ ಫ್ಲ್ಯಾಟ್‌ಗಳ ಹಂಚಿಕೆ ಮಾಡಲಾಗುತ್ತಿದೆ. ಅರ್ಹ ಫಲಾನುಭವಿಗಳು ಆಗಸ್ಟ್ 23ರಿಂದ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದಾಗಿದೆ. ಬೆಂಗಳೂರು ನಗರ ಜಿಲ್ಲೆಯ 5 ತಾಲೂಕುಗಳ ವ್ಯಾಪ್ತಿಯಲ್ಲಿನ 1014 ಎಕರೆ 10 ಗುಂಟೆ ಸರ್ಕಾರಿ ಜಮೀನುಗಳಲ್ಲಿ ಸಮಗ್ರ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಮೊದಲನೇ ಹಂತದಲ್ಲಿ 46,499 ಬಹುಮಹಡಿ ಮನೆಗಳ ನಿರ್ಮಾಣ ಕಾಮಗಾರಿಯನ್ನು (G+ ಯಿಂದ S+14 ವರೆಗೆ) 313 ಎಕರೆ ಸರ್ಕಾರಿ ಜಮೀನಿನಲ್ಲಿ ಕೈಗೆತ್ತಿಕೊಳ್ಳಲಾಗಿದೆ.

ಯಾವ ಹಂತದಲ್ಲಿ ಎಷ್ಟು ಮನೆಗಳು?

ಯಾವ ಹಂತದಲ್ಲಿ ಎಷ್ಟು ಮನೆಗಳು?

ತಳಪಾಯದಲ್ಲಿರುವ ಮನೆಗಳ ಸಂಖ್ಯೆ 6952. ಮಣ್ಣು ಅಗೆತ ಹಂತದಲ್ಲಿರುವ ಮನೆಗಳ ಸಂಖ್ಯೆ 9476. ಪ್ಲಿಂತ್ ಮಟ್ಟದಲ್ಲಿರುವ ಮನೆಗಳ ಸಂಖ್ಯೆ 11,561. ಮೇಲ್ಛಾವಣಿ ಪೂರ್ಣಗೊಂಡಿರುವ ಮನೆಗಳು 1826. ಜಮೀನು ಸಮತಟ್ಟು ಹಂತದಲ್ಲಿರುವ ಮನೆಗಳ ಸಂಖ್ಯೆ 12,546.

ಎರಡನೇ ಹಂತದಲ್ಲಿ 53,501 ಮನೆಗಳನ್ನು G+3 ಮಾದರಿಯಲ್ಲಿ ನಿರ್ಮಿಸಲು ಈಗಾಗಲೇ 464 ಎಕರೆ ವಾಸಯೋಗ್ಯ ಜಮೀನನ್ನು ಗುರುತಿಸಿದ್ದು, ಈ ಪೈಕಿ 100 ಎಕರೆ ಜಮೀನಿನಲ್ಲಿ 10,000 ಮನೆಗಳನ್ನು ನಿರ್ಮಿಸಲು ಯೋಜನಾ ವರದಿಯನ್ನು ತಯಾರಿಸಲಾಗುತ್ತಿದೆ.

ಸಹಾಯಧನಗಳು ಲಭ್ಯ

ಸಹಾಯಧನಗಳು ಲಭ್ಯ

ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ರೂ.3.50 ಲಕ್ಷ, ಸಾಮಾನ್ಯ ವರ್ಗ ರೂ. 2.70 ಲಕ್ಷಗಳ ಸಹಾಯಧನ ದೊರೆಯಲಿದೆ. 46,499 ಬಹುಮಹಡಿ ಮನೆಗಳ (G+3 ಯಿಂದ S+14 ವರೆಗೆ) ಪ್ರತಿಘಟಕದ (1ಬಿಎಚ್‌ಕೆ) ನಿರ್ಮಾಣ ವೆಚ್ಚ ರೂ. 10.60 ಲಕ್ಷ (ಮೂಲಭೂತ ಸೌಕರ್ಯ ವೆಚ್ಚ ಸೇರಿದಂತೆ) ಸಹಾಯಧನವನ್ನು ಹೊರತುಪಡಿಸಿ ಘಟಕ ವೆಚ್ಚದ ಬಾಕಿ ಮೊತ್ತವನ್ನು (ಪ.ಜಾ/ ಪ.ಪಂ ರೂ. 7.10 ಲಕ್ಷ, ಸಾಮಾನ್ಯ ವರ್ಗ ರೂ. 7.90 ಲಕ್ಷ). ಅರ್ಜಿದಾರರು ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತಿ ಸೂಚಿಸಿದ ಸಂದರ್ಭದಲ್ಲಿ ರೂ. 1,00,000 ಗಳನ್ನು ಪ್ರಾರಂಭಿಕ ಠೇವಣಿಯಾಗಿ ಪಾವತಿಸಬೇಕು.

ಯಾವ ದಾಖಲೆಗಳು ಬೇಕು?

ಯಾವ ದಾಖಲೆಗಳು ಬೇಕು?

ಅರ್ಜಿಗಳನ್ನು ಸಲ್ಲಿಕೆ ಮಾಡುವಾಗ ಆದಾಯ ಪ್ರಮಾಣ ಪತ್ರ (ಕಂದಾಯ ಇಲಾಖೆಯಿಂದ ನೀಡಲಾಗುವ ಪ್ರಮಾಣ ಪತ್ರದ ಸಂಖ್ಯೆಯನ್ನು ಮಾತ್ರ ನಮೂದಿಸುವುದು). ಜಾತಿ ಪ್ರಮಾಣ ಪತ್ರ (ಕಂದಾಯ ಇಲಾಖೆಯಿಂದ ನೀಡಲಾಗುವ ಪ್ರಮಾಣ ಪತ್ರದ ಸಂಖ್ಯೆಯನ್ನು ಮಾತ್ರ ನಮೂದಿಸುವುದು). ವಿಕಲ ಚೇತನ ಪ್ರಮಾಣ ಪತ್ರ (ವೈದ್ಯಕೀಯ ಇಲಾಖೆಯಿಂದ ನೀಡಲಾಗುವ ಪ್ರಮಾಣ ಪತ್ರದ ಸಂಖ್ಯೆಯನ್ನು ಮಾತ್ರ ನಮೂದಿಸುವುದು). ಆಧಾರ್ ಸಂಖ್ಯೆ, ಬ್ಯಾಂಕ್ ಅಕೌಂಟ್ ಸಂಖ್ಯೆ, ಚುನಾವಣಾ ಆಯೋಗದಿಂದ ನೀಡಲಾದ ಗುರುತಿನ ಚೀಟಿ ಹೊಂದಿರಬೇಕು. ಪಡಿತರ ಚೀಟಿ, ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಕನಿಷ್ಠ 5 ವರ್ಷ ಮೇಲ್ಪಟ್ಟು ವಾಸದ ದೃಢೀಕರಣ ಪ್ರಮಾಣ ಪತ್ರ (ಕಂದಾಯ ಇಲಾಖೆಯಿಂದ ನೀಡಲಾಗುವ ಪ್ರಮಾಣ ಪತ್ರದ ಸಂಖ್ಯೆಯನ್ನು ಮಾತ್ರ ನಮೂದಿಸುವುದು).

ಅರ್ಜಿದಾರರ ಅರ್ಹತೆಗಳು

ಅರ್ಜಿದಾರರ ಅರ್ಹತೆಗಳು

ಈ ಹಿಂದೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರೂ ಸಹ ಮತ್ತೊಮ್ಮೆ ಹೊಸದಾಗಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ರೂ. 3 ಲಕ್ಷಗಳ ಮಿತಿಯೊಳಗಿರಬೇಕು. ಪ್ರತಿ ಕುಟುಂಬಕ್ಕೆ ಒಂದು ಅರ್ಜಿಯನ್ನು ಮಾತ್ರ ಸಲ್ಲಿಸಲು ಅವಕಾಶವಿದೆ. ಕಾರ್ಮಿಕ ಇಲಾಖೆಯ ನೋಂದಣಿ ಸಂಖ್ಯೆ (ಕಟ್ಟಡ ನಿರ್ಮಾಣ ಕಾರ್ಮಿಕರಾಗಿದ್ದಲ್ಲಿ). ವಸತಿ ರಹಿತರಾಗಿರಬೇಕು. ಸರ್ಕಾರದ ಯಾವುದೇ ವಸತಿ ಯೋಜನೆಯ ಫಲಾನುಭವಿಯಾಗಿರಬಾರದು.

Recommended Video

    Devaraj Urs 106ನೇ ಜನ್ಮ ದಿನಾಚರಣೆ- ಮೂವರಿಗೆ ದೇವರಾಜ ಅರಸ್‌ ಪ್ರಶಸ್ತಿ ಪ್ರದಾನ ಮಾಡಿದ CM Basavaraj Bommai

    ಹೆಚ್ಚಿನ ವಿವರಗಳು ಲಭ್ಯವಿದೆ

    'ಮುಖ್ಯಮಂತ್ರಿಗಳ ಬಹುಮಹಡಿ ಬೆಂಗಳೂರು ವಸತಿ ಯೋಜನೆ' ಯಡಿಯಲ್ಲಿ 1 ಬಿಎಚ್‌ಕೆ ಮನೆ/ ಫ್ಲ್ಯಾಟ್‌ಗಳ ಹಂಚಿಕೆಗಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಿರುವ ಕುರಿತು ಸಚಿವರ ಫೇಸ್ ಬುಕ್ ಪೇಜ್‌ನಲ್ಲಿ ವಿವರಗಳಿವೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+