ಯೋಗಿ ಬಿಟ್ಟರೆ ಎನ್ಕೌಂಟರ್ ಮಾಡಿಸುವ ತಾಕತ್ತು ಬೇರೆ ಲೀಡರ್‌ಗೆ ಇಲ್ಲ: ಪ್ರತಾಪ್ ಸಿಂಹ
ದೇಶದಲ್ಲಿ ಉತ್ತರ ಪ್ರದೇಶದ ಸಿ.ಎಂ ಯೋಗಿ ಆದಿತ್ಯನಾಥ ಅವರಂತೆ ಮತ್ತೊಬ್ಬ ಲೀಡರ್ ಇಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಕಾನೂನು ಸುವ್ಯವಸ್ಥೆಗಾಗಿ 350ಕ್ಕೂ ಹೆಚ್ಚು ಜನ ಕ್ರಿಮಿನಲ್‌ಗಳನ್ನು ಉತ್ತರ ಪ್ರದೇಶದಲ್ಲಿ ಎನ್ಕೌಂಟರ್ ಮಾಡಲಾಗಿದೆ. ದೇಶದಲ್ಲಿ ಈ ರೀತಿಯ ಮತ್ತೊಬ್ಬ ಲೀಡರ್ ಇಲ್ಲ. ಉತ್ತರ ಪ್ರದೇಶದಂತಹ ರಾಜ್ಯದಲ್ಲಿ ಕಳೆದ ಏಳು ವರ್ಷಗಳಿಂದ ಕಾನೂನು ಸುವ್ಯವಸ್ಥೆಗೆ ಮಾದರಿಯಾಗಿದೆ.

ಉತ್ತರ ಪ್ರದೇಶದಲ್ಲಿ ಮುಸ್ಲಿಂ ಪ್ರಭಾವ ಇರುವ ಇದೆ. ರೌಡಿಗಳ ಹಾವಳಿ ಇದೆ. ಈ ರೀತಿಯ ಹಲವು ಸಮಸ್ಯೆಗಳಿರುವ ರಾಜ್ಯದಲ್ಲಿ ಅಧಿಕಾರ ನಡೆಸುವುದು ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವುದು ಅಷ್ಟು ಸುಲಭದ ವಿಚಾರವಲ್ಲ. ಆದರೆ, ಯೋಗಿ ಆದಿತ್ಯನಾಥ ಅವರು ರೌಡಿಗಳು ಹಾಗೂ ಗುಂಡಾಹಿಸಂನನ್ನು ಮಟ್ಟವಾಕಿದ್ದಾರೆ ಎಂದಿದ್ದಾರೆ.
ಉತ್ತರ ಪ್ರದೇಶದಂತಹ ದೊಡ್ಡ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವುದು ಸಣ್ಣ ವಿಚಾರವಲ್ಲ. ಯೋಗಿ ಆದಿತ್ಯ ಅವರು ಅದನ್ನು ಸಾಬೀತು ಮಾಡಿದ್ದಾರೆ. ಆ ರೀತಿ ಧೈರ್ಯ ತೋರಿಸುವ ಮತ್ತೊಬ್ಬ ಲೀಡರ್ ಎಲ್ಲಿದ್ದಾರೆ ತೋರಿಸಿ. ಮುನ್ನೂರಕ್ಕೂಹೆಚ್ಚು ಎನ್ಕೌಂಟರ್ ಎಂದರೆ ಸುಮ್ನೆನಾ ಎಂದು ಪ್ರತಾಪ್ ಸಿಂಹ ಕೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ನಡೆದಿತ್ತು ಸರಣಿ ಎನ್ಕೌಂಟರ್
ಉತ್ತರ ಪ್ರದೇಶದಲ್ಲಿ ದೇಶದ ಯಾವುದೇ ರಾಜ್ಯಗಳಲ್ಲಿ ನಡೆಯದಷ್ಟು ಎನ್ಕೌಂಟರ್ ನಡೆದಿವೆ. ಕೆಲವೇ ವರ್ಷಗಳಲ್ಲಿ ಈ ರಾಜ್ಯದಲ್ಲಿ ಮುನ್ನೂರಕ್ಕೂ ಹೆಚ್ಚು ಎನ್ಕೌಂಟರ್ ಆಗಿವೆ. ಛತ್ತೀಸ್ಗಡದಲ್ಲೂ ಎನ್ಕೌಂಟರ್ ಗಳು ನಡೆದಿವೆಯಾದರೂ, ಅದಕ್ಕೆ ನಕ್ಸಲ್ ಚಟುವಟಿಕೆಗಳು ಮಾತ್ರ ಕಾರಣವಾಗಿತ್ತು. ಆದರೆ, ಉತ್ತರ ಪ್ರದೇಶದಲ್ಲಿ ಅಪರಾಧಿಗಳು ಹಾಗೂ ಕ್ರಿಮಿನಲ್‌ಗಳನ್ನು ಮುಲಾಜಿಲ್ಲದೆ ಗುಂಡಿಕ್ಕಿ ಕೊಲ್ಲಲಾಗಿದೆ.
ಈ ರೀತಿ ದೇಶದಲ್ಲಿ ಗುಂಡು ಹಾರಿಸಿ ಕೊಂದಿರುವ ಪ್ರಕರಣಗಳು ದೇಶದ ಯಾವುದೇ ರಾಜ್ಯದಲ್ಲೂ ನಡೆದಿಲ್ಲ. ಈ ರೀತಿ ಸತತವಾಗಿ ಗುಂಡು ಹಾರಿಸುವುದು ನಡೆದಿದ್ದರೂ, ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯಲ್ಲಿ ಹೇಳಿಕೊಳ್ಳವಂತಹ ಬದಲಾವಣೆ ಆಗಿಲ್ಲ. ರಾಜ್ಯದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿಲ್ಲ ಎಂದು ಉತ್ತರ ಪ್ರದೇಶದ ಪೊಲೀಸರೇ ಹೇಳಿದ್ದಾರೆ.
ಇನ್ನೂ ನಿಂತಿಲ್ಲ ಗ್ಯಾಂಗ್ ವಾರ್
ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಆದಿತ್ಯನಾಥ ಅವರು ಮುಲಾಜಿಲ್ಲದೆ ಎನ್ಕೌಂಟರ್ ಮಾಡುವುದಕ್ಕೆ ಉತ್ತರ ಪ್ರದೇಶದ ಪೊಲೀಸರಿಗೆ ಸ್ವಾತಂತ್ರ್ಯ ನೀಡಿದ್ದಾರೆ. ಇಷ್ಟಾದರೂ ಅಲ್ಲಿ ರೌಡಿಗಳ ನಡುವೆ ಗ್ಯಾಂಗ್ ವಾರ್ ನಿಂತಿಲ್ಲ. ಕೆಲವೇ ದಿನಗಳ ಅಂತರದಲ್ಲಿ ಆರು ಜನ ರೌಡಿ ಶೀಟರ್ (ಗ್ಯಾಂಗ್ ಗಳ ನಡುವೆ ಗ್ಯಾಂಗ್ ವಾರ್) ನಡೆದಿದೆ.
ಬುಲ್ಡೋಜರ್ ಸಂಸ್ಕೃತಿ ಪ್ರಾರಂಭಿಸಿದ್ದೇ ಯೋಗಿ
ದೇಶದ ಬೇರೆ ಯಾವ ರಾಜ್ಯದಲ್ಲೂ ನಡೆಯದಂತಹ ಕ್ರಮಗಳನ್ನು ಉತ್ತರ ಪ್ರದೇಶದಲ್ಲಿ ಕೈಗೊಳ್ಳಲಾಗಿತ್ತು. ಅದರಲ್ಲಿ ಉತ್ತರ ಪ್ರದೇಶದ ಬುಲ್ಡೋಜರ್ ಸಂಸ್ಕೃತಿಯೂ ಒಂದು. ಉತ್ತರ ಪ್ರದೇಶದಲ್ಲಿ ಅಪರಾಧಿಗಳ ಮನೆಗಳನ್ನು ಯಾವುದೇ ಮುಲಾಜಿಗೆ ಒಳಗಾಗದೆ ತೆರವು ಮಾಡಲಾಗಿತ್ತು.
ಉತ್ತರ ಪ್ರದೇಶದ ಈ ಕ್ರಮಕ್ಕೆ ದೇಶದಾದ್ಯಂತ ವಿರೋಧವೂ ಸಹ ಕೇಳಿಬಂದಿತ್ತು. ನಮ್ಮಲ್ಲಿ ಅಪರಾಧಿಗಳನ್ನು ಶಿಕ್ಷಿಸುವುದಕ್ಕೆಂದೇ ಕಾನೂನು, ಸಂವಿಧಾನ ಇದೆ. ಉತ್ತರ ಪ್ರದೇಶದ ಸರ್ಕಾರ ಮನಸೋಇಚ್ಛೆ ಎನ್ಕೌಂಟರ್ ಮಾಡುವುದರಲ್ಲಿ ಅರ್ಥವಿಲ್ಲ. ಈ ಮಾದರಿಗಳನ್ನು ಕೂಡಲೇ ನಿಲ್ಲಿಸಬೇಕು ಎನ್ನುವ ಆಗ್ರಹಗಳು ಕೇಳಿಬಂದಿದ್ದವು.












Click it and Unblock the Notifications