ಬೆಂಗಳೂರಿನಲ್ಲಿ ರಸ್ತೆಗೆ ಇಳಿಯಲಿವೆ 100 ಎಲೆಕ್ಟ್ರಿಕ್ ಬಸ್‌ಗಳು
ಬೆಂಗಳೂರು, ಅ.09: ಬೆಂಗಳೂರಿನಲ್ಲಿ ಮತ್ತೆ 100 ಎಲೆಕ್ಟ್ರಿಕ್ ಬಸ್‌ಗಳು ರಸ್ತೆಗಿಳಿಯಲಿದ್ದು, ಸಂಚಾರ ದಟ್ಟಣೆ ಮತ್ತು ವಾಯು ಮಾಲಿನ್ಯ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಬೆಂಗಳೂರು ಮೆಟ್ರೋ ಎಲೆಕ್ಟ್ರಿಕ್ ವಾಹನ ಕಂಪನಿ ಸ್ವಿಚ್ ಮೊಬಿಲಿಟಿಯಿಂದ 100 ಎಲೆಕ್ಟ್ರಿಕ್ ಬಸ್‌ಗಳನ್ನು ಸ್ವೀಕರಿಸಿದೆ.
ಸ್ವಿಚ್ ಮೊಬಿಲಿಟಿ ಕಂಪನಿಯ ಪ್ರಕಾರ, ಈ ಎಲೆಕ್ಟ್ರಿಕ್ ಬಸ್‌ಗಳು ನಗರದಲ್ಲಿ ಕಾರ್ಬನ್ ಫುಟ್‌ಪ್ರಿಂಟ್ ಅನ್ನು ಕಡಿಮೆ ಮಾಡುತ್ತದೆ. "ಬಸ್‌ಗಳು ನಗರದಲ್ಲಿ ವರ್ಷಕ್ಕೆ 14,500 ಟನ್‌ಗಳಷ್ಟು CO2 ಬಿಡುಗಡೆಯನ್ನು ಕಡಿಮೆ ಮಾಡುತ್ತವೆ. ಇದು 87, 000 ಮರಗಳನ್ನು ನೆಡುವುದಕ್ಕೆ ಸಮಾನ" ಎಂದು ಹೇಳಿದೆ.

ಪ್ರತಿ ಎಲೆಕ್ಟ್ರಿಕ್ ಬಸ್‌ಗೆ ಭಾರತ ಸರ್ಕಾರ 55 ಲಕ್ಷ ರೂಪಾಯಿ ಮತ್ತು ರಾಜ್ಯ ಸರ್ಕಾರ 33.33 ಲಕ್ಷ ರೂಪಾಯಿ ಹಣವನ್ನು ನೀಡಿದೆ. ಬಸ್‌ಗಳು ನಾನ್ ಎಸಿ ಆಗಿವೆ 12 ಮೀಟರ್ ಉದ್ದವಿವೆ. ಚಾಲಕನನ್ನು ಹೊರತುಪಡಿಸಿ ಬಸ್ 40 ಜನರು ಕುಳಿತುಕೊಳ್ಳುವ ಸಾಮರ್ಥ್ಯ ಹೊಂದಿದೆ.
ಈ ಬಸ್‌ಗಳು ವೀಲ್-ಚೇರ್ ಕಾರ್ಯವಿಧಾನದ ಸೌಲಭ್ಯವನ್ನು ಸಹ ಹೊಂದಿದ್ದು, ಇದು ವಿದ್ಯುತ್ ಚಾಲಿತವಾಗಿದೆ. ಈ ಸೌಲಭ್ಯವು ಬೆಂಗಳೂರಿನ ದೈಹಿಕ ವಿಕಲಚೇತನ ಪ್ರಯಾಣಿಕರು ಅರಾಮವಾಗಿ ಬಸ್‌ಗಳನ್ನು ಹತ್ತಲು ಮತ್ತು ಇಳಿಯಲು ಸಹಾಯ ಮಾಡುತ್ತದೆ.
ಈ ಎಲೆಕ್ಟ್ರಿಕ್ ಬಸ್‌ಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಸಿಸಿಟಿವಿ ಕ್ಯಾಮೆರಾಗಳು, ಎಲ್‌ಇಡಿ ದೀಪಗಳು ಮತ್ತು ತುರ್ತು ಪ್ಯಾನಿಕ್ ಬಟನ್‌ಗಳು ಇರಲಿವೆ. ಇವುಗಳನ್ನು ಒಮ್ಮೆ ಚಾರ್ಜ್ ಮಾಡಿದರೇ 150 ಕಿ. ಮೀ. ಕಾರ್ಯನಿರ್ವಹಿಸುತ್ತವೆ ಮತ್ತು ಇತರ 75 ಕಿಲೋಮೀಟರ್‌ಗಳನ್ನು ಕೂಡ ಆರಾಮಾವಾಗಿ ಕ್ರಮಿಸಬಹುದು.

ಬಿಎಂಟಿಸಿ ಈ ಹಿಂದೆ 300 ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗೆ ಇಳಿಸುವುದಾಗಿ ಘೋಷಿಸಿತ್ತು. ನಗರದಲ್ಲಿ ಈಗಾಗಲೇ ಎಪ್ಪತ್ತೈದು ಎಲೆಕ್ಟ್ರಿಕ್ ಬಸ್‌ಗಳನ್ನು ಪರಿಚಯಿಸಲಾಗಿದೆ.
ಈ ಬಸ್‌ಗಳು ಬಿಡದಿ ಘಟಕ-49 ಮತ್ತು ಚಂದಾಪುರ (ಸೂರ್ಯಸಿಟಿ), ಘಟಕ-32 ರಿಂದ ಸಂಚಾರ ನಡೆಸಲಿವೆ. ಪುಟ್ಟೇನಹಳ್ಳಿಯ ಘಟಕ-30 ರಲ್ಲಿ 120 ಎಲೆಕ್ಟ್ರಿಕ್ ಬಸ್ಸುಗಳ ನಿರ್ವಹಣೆ, ಚಾರ್ಚಿಂಗ್ 3300 ಕಿಲೋವಾಟ್ ವಿದ್ಯುಚ್ಛಕ್ತಿ ಹಾಗೂ 14 ಚಾರ್ಚಿಂಗ್ ಘಟಕಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.












Click it and Unblock the Notifications