ಆನೇಕಲ್ ನಲ್ಲಿರೌಡಿ ಪಟಾಲಂಗೆ ಡಿವೈಎಸ್ಪಿ ಖಡಕ್ ವಾರ್ನಿಂಗ್ !
ಬೆಂಗಳೂರು, ಡಿಸೆಂಬರ್ 11: ನೀವೇನ್ ಸ್ವತಂತ್ರ್ಯ ಹೋರಾಟಗಾರರೇ ? ಯಾರಿಂದಲೋ ಪೋನ್ ಮಾಡಿಸೋದು ಬಿಟ್ಟು ಬಿಡಿ. ಸಿಂಗಲ್ ಕೇಸ್ ಆದ್ರೂ ಮನೆಗೆ ನುಗ್ಗಿ ಹೊಡೀತೀನಿ, ಇದೇ ನನ್ನ ಕೊನೆ ವಾರ್ನಿಗ್ . ಕಣ್ಣು ಮುಚ್ಚಿ ಬೆಕ್ಕು ಹಾಲು ಕುಡಿದ್ರೆ ಪ್ರಪಂಚಕ್ಕೆ ಗೊತ್ತಾಗಲ್ಲ ಅಂತ ಟೂಲ್ಸ್ ಮುಟ್ರಿದ್ರೆ ಉಳಿಗಾಲ ಇರಲ್ಲ ಹುಷಾರ್ !
Recommended Video
ಆನೇಕಲ್ ವ್ಯಾಪ್ತಿಯ ರೌಡಿಗಳಿಗೆ ಡಿವೈಎಸ್ಪಿ ಮಹದೇವಪ್ಪ ಅವರು ರೌಡಿ ಪಟಾಲಂಗೆ ಕೊಟ್ಟಿರುವ ವಾರ್ನಿಂಗ್ ಇದು. ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ನೂರಕ್ಕೂ ಹೆಚ್ಚು ರೌಡಿಗಳನ್ನು ಕರೆಸಿ ಎಚ್ಚರಿಕೆ ನೀಡಿದರು. ಆನೇಕಲ್ ಸದ್ಯದಲ್ಲಿ ಭೂ ವಿವಾದಗಳ ಅಗ್ರಗಣ್ಯ ಪ್ರದೇಶ. ಹೀಗಾಗಿ ರೌಡಿ ಪಟಾಲಂ ಕೂಡ ಅಷ್ಟೇ ದೊಟ್ಟ ಮಟ್ಟದಲ್ಲಿ ಬೆಳೆದು ನಿಂತಿದೆ. ಇತ್ತೀಚೆಗೆ ಆನೇಕಲ್ ವಿಭಾಗದ ಡಿವೈಎಸ್ಪಿಯಾಗಿ ವರ್ಗಾವಣೆಯಾಗಿರುವ ಮಹದೇವಪ್ಪ ರೌಡಿ ಪಟಾಲಂಗೆ ಖಡಕ್ ವಾರ್ನಿಂಗ್ ರವಾನಿದ್ದಾರೆ.
ರೌಡಿಗಳು ಕಾಲಾಹರಣ ಮಾಡುಕ್ಕಿಂತಲೂ ಒಳ್ಳೆ ತನದಿಂದ ಬದಕಲು ಪ್ರಯತ್ನಿಸಿ. ಎಸ್ಪಿ ಸಹೇಬ್ರ ಮಾತಿನಂತೆ ಒಳ್ಳೆಯ ಪ್ರಜೆಗಳಾಗಲು ಪ್ರಯತ್ನಿಸಿ. ನನಗೆ ತಹಸೀಲ್ದಾರ್ ಮುಚ್ಚಳಿಕೆ ಕೊಟ್ಟಿದ್ದಾರೆ. ನನ್ನದು ಮುಗಿಯತು ಎಂದು ಏನಾದ್ರೂ ಮಾಡಿದ್ರೆ ಕತೆ ಮುಗಿಸಬೇಕಾಗುತ್ತೆ. ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದ್ರೆ ಪ್ರಪಂಚಕ್ಕೆ ಗೊತ್ತಾಗಲ್ಲ ಎಂದು ಬಾಲ ಬಿಚ್ಚಿದರೆ ಕಥೆ ಬೇರೆಯದ್ದ ಆಗುತ್ತದೆ. ಗ್ರಾಮ ಪಂಚಾಯಿತಿ ಚುನಾವಣೆ ವೇಳೆ ಕೂಡ ಅಷ್ಟೇ ಯಾವುದೇ ಸಣ್ಣ ದೂರು ನಿಮ್ಮ ಬಗ್ಗೆ ಬರಬಾರದು. ಪಂಚಾಯಿತಿ ಚುನಾವಣೆ ಮುಗಿದ ಮೇಲು ಕೂಡ ಅಷ್ಟೇ ಒಳ್ಳೆಯವರಾಗಿ ಬದುಕಲು ಪ್ರಯತ್ನಿಸಿ. ಒಂದು ಅಪರಾಧದಲ್ಲಿ ನಿಮ್ಮ ಹೆಸರು ಕೇಳಿ ಬಂದರೂ ಪೊಲೀಸರನ್ನು ಮನೆಗೆ ನುಗ್ಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಒಳ್ಳೆಯವರಾಗಿ ಬದುಕಿ. ಈ ಬಗ್ಗೆ ನೇರವಾಗಿ ತಮ್ಮ ಠಾಣೆಯ ಅಧಿಕಾರಿಗಳನ್ನು ಭೇಟಿ ಮಾಡಿ. ಅದು ಬಿಟ್ಟು ಬೇರೆಯವರಿಂದ ಒತ್ತಡ ಹಾಕಿಸಿದ್ರೆ, ಪೋನ್ ಮಾಡಿಸಿದ್ರೆ ಅದು ನನ್ನ ಬಳಿ ನಡೆಯಲ್ಲ. ನಿಮ್ಮದೇನಿದ್ದರೂ ಅಹವಾಲು ಇದ್ದರೆ ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ಸಲ್ಲಿಸಿ. ನಿಜವಾಗಿಯೂ ಒಳ್ಳೆಯವರಾಗಿರುವುದು ಕಂಡು ಬಂದರೆ ನಾನೇ ಎಸ್ಪಿಯವರಿಗೆ ಶಿಫಾರಸು ಮಾಡುತ್ತೇನೆ. ಅದು ಬಿಟ್ಟು ಏನಾದ್ರೂ ಅಪರಾಧ ಚಟುವಟಿಕೆಯಲ್ಲಿ ಹೆಸರು ಕೇಳಿ ಬಂದರೆ ಸುಮ್ಮನೆ ಬಿಡಲ್ಲ. ರೌಡಿಗಳು ನೀವು, ಸ್ವಾತಂತ್ರ್ಯ ಹೋರಾಟಗಾರರಂತೆ ಯಾರಿಂದಲೋ ಪೋನ್ ಮಾಡಿ ಶಿಫಾರಸು ಮಾಡುವುದನ್ನು ಮೊದಲು ಬಿಡಿ. ರೌಡಿ ಎಂಬ ಪಟ್ಟ ಕಟ್ಟಿಕೊಂಡು ಬದುಕೋದನ್ನು ಬಿಟ್ಟು ಸಮಾಜದ ಸಜ್ಜನ ವ್ಯಕ್ತಿಗಳಾಗಿ ಬದುಕಿ. ಪ್ರತಿ ರೌಡಿ ಪೆರೇಡ್ ನಲ್ಲೂ ತಪ್ಪದೇ ಪಾಲ್ಗೊಳ್ಳಬೇಕು ಎಂಬ ಸಂದೇಶವನ್ನು ರವಾನಿಸಿದ್ದಾರೆ. ಡಿವೈಎಸ್ಪಿ ರವಾನಿಸಿರುವ ವಾರ್ನಿಂಗ್ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗುತ್ತಿದೆ.












Click it and Unblock the Notifications