ಕರ್ನಾಟಕಕ್ಕೆ "ಖಾರ"ವಾಗಿರಬೇಕು ಎಂದು ಆಂಧ್ರ ಸಚಿವ ಟ್ವೀಟ್: ಕನ್ನಡಿಗರು ಹೇಳಿದ್ದೇನು ?

ಆಂಧ್ರ ಪ್ರದೇಶ ಹಾಗೂ ಕರ್ನಾಟಕದ ನಡುವೆ ವಾಕ್ಸಮರ ಮುಂದುವರಿದಿದೆ. ಇದೀಗ ಎಐ ಹಬ್ ಕರ್ನಾಟಕದ ಬೆಂಗಳೂರಿನಿಂದ ಆಂಧ್ರಪ್ರದೇಶದ ವಿಶಾಖಪಟ್ಟಣಂಗೆ ಹೋದ ಮೇಲೆ ಈ ವಾಕ್ಸಮರ ಜೋರಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಬೆಂಗಳೂರಿನ ವಿಚಾರವಾಗಿ ಹಾಗೂ ಉದ್ಯಮ, ಹೂಡಿಕೆ ವಿಚಾರವಾಗಿ ಆಂಧ್ರ ಪ್ರದೇಶ ಹಾಗೂ ಕರ್ನಾಟಕದ ರಾಜಕಾರಣಿಗಳ ನಡುವೆ ವಾಕ್ಸಮರ ನಡೆದಿದೆ. ಇದೀಗ ನೆರೆಯ ರಾಜ್ಯದವರಿಗೆ ಖಾರವಾಗಿರಬೇಕು ಎಂದು ಆಂಧ್ರಪ್ರದೇಶದ ಸಚಿವ ನಾರಾ ಲೋಕೇಶ್ ಅವರು ಟ್ವೀಟ್ ಮಾಡಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಆಂಧ್ರಪ್ರದೇಶದ ಸಚಿವ ನಾರಾ ಲೋಕೇಶ್ ಅವರ ಟ್ವೀಟ್‌ಗೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಸಹ ಸಪೋರ್ಟ್ ಮಾಡಿದ್ದಾರೆ. ಆಂಧ್ರಪ್ರದೇಶವು ದೇಶದ ಯುವ ರಾಜ್ಯ (#YoungestState) ಆಗಿದೆ. ಹೀಗಾಗಿ ನಾವು ಯಾವ ಅವಕಾಶಗಳನ್ನು ಬಿಟ್ಟುಕೊಡುವುದಿಲ್ಲ. ಹೂಡಿಕೆಗೆ ಪೂರಕವಾಗಿರುವ ಅವಕಾಶಗಳನ್ನು ಕೈಬಿಡಲ್ಲ ಎಂದು ಆಂಧ್ರಪ್ರದೇಶ ಹೇಳಿತ್ತು. ಆದರೆ ಬೆಂಗಳೂರಿಗೆ ಬರಬೇಕಾದ ಬಹುದೊಡ್ಡ ಯೋಜನೆಯೊಂದು ಇದೀಗ ಆಂಧ್ರದ ಪಾಲಾಗಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

Andhra Minister Nara Lokesh tweets that Karnataka should be spicy What did Kannadigas say

ಬೆಂಗಳೂರಿನ ಅವ್ಯವಸ್ಥೆ ಹಾಗೂ ಮೂಲಸೌಕರ್ಯ ಕೊರತೆಯ ಬಗ್ಗೆ ಉದ್ಯಮಿಗಳು ಧ್ವನಿ ಎತ್ತುತ್ತಿರುವಾಗ ಇದು ಇನ್ನಷ್ಟು ಚರ್ಚೆಗೆ ಕಾರಣವಾಗಿದೆ. ಈ ರೀತಿ ಇರುವಾಗ ನಾರಾ ಲೋಕೇಶ್ ಮಾಡಿರುವ ಟ್ವೀಟ್ ಮಾಡಿದ್ದಾರೆ. ಆಂಧ್ರದ ಆಹಾರ ಖಾರವಾಗಿದೆ ಎಂದು ಕೆಲವರು ಹೇಳುತ್ತಾರೆ. ನಮ್ಮ ಕೆಲವು ಹೂಡಿಕೆಗಳು ಕೂಡ ಖಾರವಾಗಿವೆ ಎಂದು ತೋರುತ್ತದೆ. ಕೆಲವು ನೆರೆಹೊರೆಯವರು ಈಗಾಗಲೇ ಖಾರದಿಂದ ಬೇಸತ್ತಿದ್ದಾರೆ! 🌶️🔥 ಎಂದು ಕರ್ನಾಟಕವನ್ನು ಗುರಿಯಾಗಿಸಿಕೊಂಡು, ಕರ್ನಾಟಕದ ಹೆಸರು ಉಲ್ಲೇಖ ಮಾಡದೆ ಅವರು ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್‌ಗೆ ರಿಯಾಕ್ಟ್‌ ಮಾಡಿರುವ ನಿಖಿಲ್ ಕುಮಾರ್ ಸ್ವಾಮಿ ಅವರು, ಆಂಧ್ರ ಹೂಡಿಕೆಯಲ್ಲಿ ಮುಂಚೂಣಿಯಲ್ಲಿದೆ. ಆದರೆ ಕರ್ನಾಟಕದ ಸಚಿವರು ನೆಪಗಳನ್ನು ಹುಡುಕುವುದರಲ್ಲಿ ನಿರತರಾಗಿದ್ದಾರೆ. ಆಂಧ್ರ ಗೂಗಲ್ ಅನ್ನು ಆಕರ್ಷಿಸುತ್ತಿದ್ದರೆ, ಕರ್ನಾಟಕದ ಸಚಿವರು ಅದನ್ನು ಬಳಸುವ ಜನರನ್ನು ಬೆದರಿಸುತ್ತಿದ್ದಾರೆ. ಉತ್ತಮ ರಸ್ತೆಗಳಿಲ್ಲ, ಅನುದಾನವಿಲ್ಲ, ಉದ್ಯೋಗ ಸೃಷ್ಟಿ ಇಲ್ಲ, ಆದರೆ ರೀಲ್‌ಗಳು, ರಿಯಲ್ ಎಸ್ಟೇಟ್ ಮತ್ತು ವಾಕ್ಚಾತುರ್ಯ ಮಾತ್ರ ಇದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಆಂಧ್ರದ ಮಸಾಲೆ ಬೆಂಗಳೂರಿನ ಡಾಂಬರಿಗಿಂತ ಬಿಸಿಯಾಗಿ ಉರಿಯುತ್ತಿರುವಂತೆ ಕಾಣುತ್ತಿದೆ. ನಾರಾ ಲೋಕೇಶ್‌ ಬ್ರದರ್ NDA ಅಡಿಯಲ್ಲಿ, ನಾಯಕತ್ವವು ರಾಜ್ಯವನ್ನು ಹೇಗೆ ರೀಬೂಟ್ ಮಾಡಬಹುದು ಎಂಬುದನ್ನು ನೀವು ತೋರಿಸಿದ್ದೀರಿ. ನಾವು ಕರ್ನಾಟಕದಲ್ಲಿಯೂ ಅದೇ ರೀತಿ ಮಾಡುತ್ತೇವೆ, 2028 ನಮ್ಮ ರೀಬೂಟ್ ವರ್ಷವಾಗಿರುತ್ತದೆ ಎಂದು ಅವರು ಹೇಳಿದ್ದಾರೆ.

ಕನ್ನಡಿಗರ ವಿರೋಧ: ಇನ್ನು ಸಚಿವ ನಾರಾ ಲೋಕೇಶ್ ಅವರು ಈ ಟ್ವೀಟ್‌ಗೆ ಕನ್ನಡಿಗರು ತಿರುಗೇಟು ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+