Bengaluru: ಉಪದೇಶ ಆ ಮೇಲೆ ಮೊದಲು ಬೆಂಗಳೂರು ರಸ್ತೆಗುಂಡಿ ಮುಚ್ಚಿ: ಆಂಧ್ರ ಸಚಿವ ನಾರಾ ಲೋಕೇಶ್!
Bengaluru: ಬೆಂಗಳೂರಿನ ಮೂಲಸೌಕರ್ಯ ವಿಚಾರವು ಅಂತರರಾಜ್ಯದ ಮಟ್ಟದಲ್ಲಿ ನಗೆಪಾಟಲಿಗೆ ಗುರಿಯಾಗಿದೆ. ಬೆಂಗಳೂರಿನ ಟ್ರಾಫಿಕ್ ಜಾಮ್ ಸಮಸ್ಯೆ, ರಸ್ತೆಗುಂಡಿಗಳು ಹಾಗೂ ಕಸದ ಸಮಸ್ಯೆಯ ಬಗ್ಗೆ ಇದೀಗ ವಿವಿಧ ರಾಜ್ಯಗಳ ಸಚಿವರು ಟೀಕೆ ಮಾಡುವಂತೆ ಆಗಿದೆ. ಅಭಿವೃದ್ಧಿ ವಿಚಾರವಾಗಿ ಕರ್ನಾಟಕದ ಬೆಂಗಳೂರು ಮತ್ತು ಆಂಧ್ರಪ್ರದೇಶದ ಅನಂತಪುರ ವಾದ - ವಿವಾದ ಮುಂದುವರಿದಿದೆ. ಬೆಂಗಳೂರಿನ ಉದ್ಯಮಗಳು ಹಾಗೂ ಹೂಡಿಕೆದಾರರನ್ನು ಆಕರ್ಷಿಸುವುದಕ್ಕೆ ಆಂಧ್ರಪ್ರದೇಶದ ಸರ್ಕಾರವು ಸರ್ಕಸ್ ಮಾಡುತ್ತಿದ್ದು. ಆಂಧ್ರಪ್ರದೇಶದ ಸಚಿವ ನಾರಾ ಲೋಕೇಶ್ ಅವರ ಟ್ವೀಟ್ ಮಾಡಿ ಕೆಣಕುತ್ತಿದ್ದಾರೆ, ಅಲ್ಲದೇ ಮೊದಲು ರಸ್ತೆಗುಂಡಿ ಮುಚ್ಚಿ ಎಂದಿದ್ದಾರೆ.
ಬೆಂಗಳೂರಿನ ರಸ್ತೆಗುಂಡಿ ಸಮಸ್ಯೆಯಿಂದಾಗಿ ಬೆಂಗಳೂರಿನ ವಾಹನ ಸವಾರರು ಹಾಗೂ ಸಾರ್ವಜನಿಕರು ಸಂಕಷ್ಟ ಅನುಭವಿಸುವಂತೆ ಆಗಿದೆ. ಈ ರೀತಿ ಇರುವಾಗಲೇ ಆಂಧ್ರ ಪ್ರದೇಶದ ಸಚಿವ ನಾರಾ ಲೋಕೇಶ್ ಅವರು ಬೆಂಗಳೂರಿನ ಮೂಲಸೌಕರ್ಯದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವ್ಯಂಗ್ಯವಾಡಿದ್ದು ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಬೆಂಗಳೂರು ಅಭಿವೃದ್ಧಿ ಮೊದಲು ಮಾಡಿ, ಬೆಂಗಳೂರಿನ ರಸ್ತೆಗುಂಡಿಗಳನ್ನು ಮುಚ್ಚಿ ಎಂದು ಹೇಳಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಇಷ್ಟಕ್ಕೂ ಸಚಿವ ನಾರಾ ಲೋಕೇಶ್ ಅವರು ಮಾಡಿರುವ ಟ್ವೀಟ್ ಏನು ಇದಕ್ಕೆ ಜನರ ರಿಯಾಕ್ಷನ್ ಏನು ಎನ್ನುವುದು ನೋಡೋಣ.

ಬೆಂಗಳೂರಿನ ಮೂಲಸೌಕರ್ಯದ ಬಗ್ಗೆ ಬೆಂಗಳೂರಿಗರು ಅಸಮಾಧಾನ ವ್ಯಕ್ತಪಡಿಸುತ್ತಿರುವುದರ ನಡುವೆಯೇ ಆಂಧ್ರ ಪ್ರದೇಶದ ಸಚಿವ ನಾರಾ ಲೋಕೇಶ್ ಅವರು ಮಾಡಿರುವ ಟ್ವೀಟ್ ವಾಕ್ಸಮರಕ್ಕೆ ಕಾರಣವಾಗಿದೆ. ಬೆಂಗಳೂರಿನ ಹೊರ ವಲಯದಿಂದ ಕಂಪನಿಗಳು ಹೊರಗೆ ಹೋಗುತ್ತಿವೆ ಎನ್ನುವ ವರದಿಗೆ ಸಚಿವ ನಾರಾ ಲೋಕೇಶ್ ಅವರು ಬೆಂಗಳೂರಿನಿಂದ ಕೆಲವೇ ಕಿ.ಮೀ ದೂರದಲ್ಲಿರುವ ಆಂಧ್ರಪ್ರದೇಶದ ಅನಂತಪುರಗೆ ಬನ್ನಿ ಎಂದ ಆಹ್ವಾನ ನೀಡಿದ್ದರು. ಇದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ನೀಡಿದ್ದರು. ಇದಕ್ಕೆ ರಿಯಾಕ್ಟ್ ಮತ್ತೆ ರಿಯಾಕ್ಟ್ ಮಾಡಿರುವ ನಾರಾ ಲೋಕೇಶ್ ಅವರು, ಮೊದಲು ಬೆಂಗಳೂರಿನ ರಸ್ತೆಗುಂಡಿಯನ್ನು ಮುಚ್ಚಿ ಎಂದು ಪಾಠ ಮಾಡಿದ್ದಾರೆ.
ನಾರಾ ಲೋಕೇಶ್ ಮಾಡಿರುವ ಟ್ವೀಟ್‌ನಲ್ಲಿ ಏನಿದೆ ?
ಇನ್ನು ಈ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ರಿಯಾಕ್ಟ್ ಮಾಡುವ ವಿಚಾರವಾಗಿ ಟ್ವೀಟ್ ಮಾಡಿರುವ ಸಚಿವ ನಾರಾ ಲೋಕೇಶ್ ಅವರು, ಭಾರತದ ಅತ್ಯಂತ ಕಿರಿಯ ರಾಜ್ಯವಾಗಿ, ನಾವು ಬೆಳೆಯಲು ಮತ್ತು ಉದ್ಯೋಗಗಳನ್ನು ಸೃಷ್ಟಿಸಲು ಪ್ರತಿಯೊಂದು ಅವಕಾಶವನ್ನು ಹುಡುಕುತ್ತಿದ್ದೇವೆ. ರಾಜ್ಯಗಳು ಹೂಡಿಕೆ ಮತ್ತು ಉದ್ಯೋಗಗಳಿಗಾಗಿ ಸ್ಪರ್ಧಿಸಿದಾಗ, ಭಾರತವು ಅಭಿವೃದ್ಧಿ ಹೊಂದುತ್ತದೆ ಎಂದು ನಾನು ನಿಜವಾಗಿಯೂ ನಂಬುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೇ ಮುಂದುವರಿದು ನನ್ನ ವಿನಮ್ರ ಸಲಹೆ - ರಸ್ತೆಗಳಲ್ಲಿನ ರಸ್ತೆ ಗುಂಡಿಗಳನ್ನು ಮೊದಲು ಸರಿಪಡಿಸಿ, ಇಲ್ಲದಿದ್ದರೆ ವ್ಯವಸ್ಥೆ ಮುಗ್ಗರಿಸಲಿದೆ ಅಥವಾ ಪರಿಸ್ಥಿತಿ ಕೆಡಲಿದೆ ಎಂಬರ್ಥದಲ್ಲಿ ನಾರಾ ಲೋಕೇಶ್ ಟ್ವೀಟ್ ಮಾಡಿದ್ದಾರೆ.
As India’s youngest state, we are looking for every opportunity to grow and generate jobs. I truly believe that as states compete for investments and jobs, India will prosper.
— Lokesh Nara (@naralokesh) October 2, 2025
My humble suggestion - Arrogance, like potholes on roads, should be fixed first before the journey… https://t.co/niVlB5ke7Z
ಈ ಟ್ವೀಟ್‌ಗೆ ಕನ್ನಡಿಗರಿಂದ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅತ್ಯಂತ ಕಿರಿಯ ರಾಜ್ಯವಾಗಿ, ದಯವಿಟ್ಟು ತತ್ವಗಳ ಬಗ್ಗೆ ಚಿಂತಿಸಿ. ಪ್ರಾಮಾಣಿಕತೆ, ಕಠಿಣ ಪರಿಶ್ರಮ, ಸತ್ಯತೆ ಮತ್ತು ಸಂಪೂರ್ಣ ಪ್ರತಿಭೆಯ ಆಧಾರದ ಮೇಲೆ ಬೆಳೆಯಿರಿ. ಅಂತಹ ಬೆಳವಣಿಗೆ ಒಂದು ಉದಾಹರಣೆಯನ್ನು ನೀಡುತ್ತದೆ ಮತ್ತು ಉಳಿಯುತ್ತದೆ. ಬೇಟೆಯಾಡುವ ತಜ್ಞರಾಗಲು ಪ್ರಯತ್ನಿಸಬೇಡಿ ಎಂದು ಕನ್ನಡಿಗರು ಕಿವಿ ಮಾತು ಹೇಳಿದ್ದಾರೆ.












Click it and Unblock the Notifications