• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯಜಮಾನನಿಲ್ಲದೆ ಭಣಗುಡುತ್ತಿದೆ ಅನಂತ್‌ಕುಮಾರ್ ಕಚೇರಿ

|

ಬೆಂಗಳೂರು, ನವೆಂಬರ್ 12: ಸದಾ ಜನಗಳಿಂದ ಗಿಜಿಗುಡುತ್ತಿದ್ದ ನಗರದ ಸೌತ್‌ ಎಂಡ್‌ ವೃತ್ತದಲ್ಲಿ ಅನಂತ್‌ಕುಮಾರ್‌ ಕಚೇರಿ ಇಂದು ಖಾಲಿ ಹೊಡೆಯುತ್ತಿದೆ.

ಸೌತ್‌ ಎಂಡ್ ವೃತ್ತದ ಕಚೇರಿಯಲ್ಲಿ ಅನಂತ್‌ಕುಮಾರ್ ಅವರ ಕಚೇರಿಯಿದೆ. ಅವರು ನಗರದಲ್ಲಿಲ್ಲದಾಗ ನಿಯಮಿತವಾಗಿ ಕಚೇರಿಗೆ ಬಂದು ಹೋಗುತ್ತಿದ್ದರು. ಅವರು ಇರಲಿ ಇಲ್ಲದಿರಲಿ ಜನಗಳಂತೂ ಇಲ್ಲಿ ಇದ್ದೇ ಇರುತ್ತಿದ್ದರು. ಆದರೆ ಇಂದು ಇಲ್ಲಿನ ದೃಶ್ಯವೇ ಬದಲಾಗಿದೆ.

ತಂದೆ ತಾಯಿಯಂತೆ 'ಕ್ಯಾನ್ಸರ್' ಮಹಾಮಾರಿಗೆ ಬಲಿಯಾದ ಅನಂತ್ ಕುಮಾರ್

ಹಾರ ಹೊತ್ತ ಅನಂತ್‌ಕುಮಾರ್ ಅವರ ಭಾವಚಿತ್ರವೊಂದು ಕಚೇರಿ ಮುಂದೆ ಇಡಲಾಗಿದೆ. ಎಂದಿನಂತೆ ಕಚೇರಿ ಬಾಗಿಲು ತೆರೆದಿದೆ ಆದರೂ ಜನಗಳೇ ಇಲ್ಲ. ಕಚೇರಿಯಿಂದ ಸ್ವಲ್ಪ ದೂರದಲ್ಲಿರುವ ಅವರ ನಿವಾಸದಲ್ಲಿ ಅನಂತ್‌ಕುಮಾರ್ ಅವರು ನಿರ್ಜೀವರಾಗಿ ಮಲಗಿದ್ದಾರೆ.

ಕಾರ್ಯಕರ್ತರ ಕಣ್ಣಲ್ಲಿ ಅಮರನಾದ ಅನಂತ ಕುಮಾರ್

ಅನಂತ್‌ಕುಮಾರ್ ಅವರು ಕ್ಯಾನ್ಸರ್‌ ಮಹಾಮರಿಗೆ ಆಹುತಿ ಆಗಿದ್ದಾರೆ. ಲಂಡನ್‌ನಲ್ಲಿ ಚಿಕಿತ್ಸೆ ಪಡೆದ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿಲ್ಲ. ನಗರದ ಶಂಕರ್ ಆಸ್ಪತ್ರಗೆ ದಾಖಲಾಗಿದ್ದ ಅವರ ಆರೋಗ್ಯದಲ್ಲಿ ಚೇತರಿಗೆ ಉಂಟಾಗದೆ ಅಲ್ಲಿಯೇ ಅವರು ಜೀವತ್ಯಾಗ ಮಾಡಿದ್ದಾರೆ.

ಅನಂತ ಕುಮಾರ್ ಮಾಡಿದ ಮಹತ್ವದ ಸಾಧನೆಗಳೇನು? ವಿವರ ಇಲ್ಲಿದೆ...

ಇಂದು ಅನಂತ್‌ಕುಮಾರ್ ಅವರ ನಿವಾಸದಲ್ಲಿ ಪಾರ್ಥಿವ ಶರೀರವನ್ನು ಗಣ್ಯರ ದರ್ಶನಕ್ಕಾಗಿ ಇಡಲಾಗಿದೆ. ನಾಳೆ ಮಲ್ಲೇಶ್ವರದ ಬಿಜೆಪಿ ಪಕ್ಷದ ಕಚೇರಿಯಲ್ಲಿ ದರ್ಶನಕ್ಕೆ ಇಡಲಾಗುತ್ತದೆ. ನಂತರ ಸಂಜೆ ವೇಳೆಗೆ ಚಾಮರಾಜಪೇಟೆಯ ಚಿತಾಗರದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.

English summary
Ananth Kumar funeral will be held tomorrow at Chamarajpete. He died today at Shankara cancer hospital. He is minister in Narendra Modi cabinet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X