ಪರಮೇಶ್ವರ ಪಾಲಿಗೆ ಅಣ್ಣನ ಮಗ ಆನಂದ್ ವಿಲನ್?
ಬೆಂಗಳೂರು, ಅಕ್ಟೋಬರ್ 12: ಪರಮೇಶ್ವರ ಒಡೆತನದ ಮೆಡಿಕಲ್ ಕಾಲೇಜಿನ ಉಸ್ತುವಾರಿಯನ್ನು ಅವರ ಅಣ್ಣನ ಮಗ ಆನಂದ್ ವಹಿಸಿಕೊಂಡಿರುವುದರಿಂದ ಆನಂದ್ ಅವರೇ ವಿಲನ್ ಆಗಿದ್ದಾರೆ.
ಕಾಂಗ್ರೆಸ್‌ನ ಪ್ರಭಾವಿ ರಾಜಕಾರಣಿಗಳ ಪೈಕಿ ಒಬ್ಬರಾದ ಪರಮೇಶ್ವರ ಮೇಲೆ ಐಟಿ ಇಲಾಖೆ ಕಣ್ಣು ಬೀಳಲು ಆನಂದ್ ನಡೆಸುತ್ತಿದ್ದ ಮೆಡಿಕಲ್ ಸೀಟು ಬ್ಲಾಕಿಂಗ್ ದಂಧೆಯೇ ಕಾರಣ ಎನ್ನಲಾಗಿದೆ.
ಪರಮೇಶ್ವರ ಒಡೆತನದ ಕಾಲೇಜುಗಳಲ್ಲಿ ಮೆಡಿಕಲ್ ಮ್ಯಾನೇಜ್ ಮೆಂಟ್ ಸೀಟುಗಳಾಗಿ ಪರಿವರ್ತಿಸಿ ಲಕ್ಷಾಂತರ ರೂಗೆ ಮಾರಾಟ ಮಾಡುತ್ತಿರುವ ಬಗ್ಗೆ ಐಟಿ ಇಲಾಖೆಗೆ ಅನುಮಾನ ಬಂದಿದ್ದೇ ಐಟಿ ದಾಳಿಗೆ ಕಾರಣ ಹಾಗೂ ಈ ಬ್ಲಾಕಿಂಗ್ ದಂಧೆಯ ಉಸ್ತುವಾರಿ ಆನಂದ್ ನೋಡಿಕೊಳ್ಳುತ್ತಿದ್ದ ಎನ್ನಲಾಗಿದೆ.

ಏನಿದು ಸೀಟು ದಂಧೆ
ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಎರಡು ರೀತಿಯಲ್ಲಿ ಸೀಟುಗಳು ವಿದ್ಯಾರ್ಥಿಗಳಿಗೆ ಲಭ್ಯವಿರುತ್ತದೆ. ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ಸರ್ಕಾರಿ ಅಥವಾ ಮೆರಿಟ್ ಸೀಟ್ ಲಭ್ಯವಾಗುತ್ತದೆ. ಈ ಸೀಟುಗಳಿಗೆ ಶುಲ್ಕ ಕಡಿಮೆ ಇರುವುದರಿಂದ ವಿದ್ಯಾರ್ಥಿಗಳು ಈ ಸೀಟು ಪಡೆಯಲು ಕಷ್ಟಪಡುತ್ತಾರೆ. ಮತ್ತೊಂದು ಕಡೆ ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದವರು ಅಥವಾ ಪರೀಕ್ಷೆ ಬರೆಯದ ವಿದ್ಯಾರ್ಥಿಗಳು ಮ್ಯಾನೇಜ್‌ಮೆಂಟ್ ಕೋಟಾದ ಅಡಿ ಪ್ರವೇಶ ಪಡೆಯುತ್ತಾರೆ. ಈ ಮ್ಯಾನೇಜ್‌ಮೆಂಟ್ ಸೀಟುಗಳಿಗೆ ಲಕ್ಷಾಂತರ ಹಣ ಪಡೆಯಲಾಗುತ್ತದೆ. ಅದಕ್ಕೆ ಡೊನೇಷನ್ ಸೀಟು ಎಂದು ಕರೆಯುತ್ತಾರೆ.

ಸೀಟು ಬ್ಲಾಕ್ ದೊಡ್ಡ ಅವ್ಯವಹಾರ
ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ವಿದ್ಯಾರ್ಥಿಗಳನ್ನು ಖಾಸಗಿ ಕಾಲೇಜುಗಳಲ್ಲಿ ಈ ಸೀಟು ಬ್ಲಾಕ್ ಅವ್ಯವಹಾರಕ್ಕೆ ಬಳಸಲಾಗುತ್ತದೆ. ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ರಾಜ್ಯದ ಖಾಸಗಿಕಾಲೇಜಿನಲ್ಲಿ ಸರ್ಕಾರಿ ಸೀಟು ಸಿಗುತ್ತದೆ. ಆದರೆ ಆತ ಬೇರೆ ರಾಜ್ಯದ ಕಾಲೇಜು ಸೇರಲು ಬಯಸುತ್ತಾನೆ. ಸರ್ಕಾರದ ಆಯ್ಕೆ ಪ್ರಕ್ರಿಯೆ ಮುಗಿದ ಬಳಿಕ ವಿದ್ಯಾರ್ಥಿ ಯಾವುದೋ ಒಂದು ಕಾರಣ ಮುಂದಿಟ್ಟು ಸೀಟು ರದ್ದುಪಡಿಸುವುದಾಗಿ ಮಾಹಿತಿ ನೀಡುತ್ತಾನೆ.

ಸರ್ಕಾರಿ ಕೋಟಾದ ಸೀಟು ಮ್ಯಾನೇಜ್‌ಮೆಂಟ್ ಪಾಲು
ಈ ಹಂತದಲ್ಲಿ ಸರ್ಕಾರಕ್ಕೆ ಕೌನ್ಸೆಲಿಂಗ್ ನಡೆಸಿ ಮತ್ತೆ ಈ ಸೀಟು ಹಂಚಿಕೆ ಮಾಡುವುದು ಕಷ್ಟ, ಹಾಗಾಗಿ ಸರ್ಕಾರಿ ಕೋಟಾದ ಈ ಸೀಟು ಮ್ಯಾನೇಜ್‌ಮೆಂಟ್ ಪಾಲಾಗುತ್ತದೆ. ಈ ವೇಳೆ ಆ ಸೀಟನ್ನುಒಂದು ಕೋಟಿ ರೂ ವರೆಗೂ ಹಣ ಪಡೆದು ಬೇರೆ ವಿದ್ಯಾರ್ಥಿಗಳಿಗೆ ಮಾರಾಟ ಮಾಡಲಾಗುತ್ತದೆ.ಈ ಸೀಟು ಬ್ಲಾಕ್ ವ್ಯವಹಾರ ಪೂರ್ವ ನಿಗದಿಯಂತೆ ನಡೆಯುತ್ತೆ.

ಸಿನಿಮಾ ನಟ ಆನಂದ್
ಪರಮೇಶ್ವರ ಅವರ ಅಣ್ಣ ಶಿವಪ್ರಸಾದ್ ಅವರ ಪುತ್ರ ಆನಂದ್, ಇವರು ಕನ್ನಡ ಸಿನಿಮಾ ಎಕೆ-56 ಸಿನಿಮಾದಲ್ಲಿ ನಾಯಕ ನಟರಾಗಿಯೂ ನಟಿಸಿದ್ದರು. ಆನಂದ್ ಅವರ ತಂದೆ ಡಾ. ಶಿವಪ್ರಸಾದ್ ಅವರು ಪರಮೇಶ್ವರ ಕೇವಲ ಅಣ್ಣನಾಗದೇ ಗುರುವೂ ಆಗಿದ್ದರು.ಪರಮೇಶ್ವರ ಎಲ್ಲಾ ಏಳುಬೀಳುಗಳಲ್ಲಿ ಜತೆಗಿದ್ದು ಪ್ರೋತ್ಸಾಹ ನೀಡುತ್ತಿದ್ದರು. ರಾಜಕೀಯದಲ್ಲಿ ದೊಡ್ಡ ಮಟ್ಟದ ಹೆಸರು ಮಾಡದಿದ್ದರೂ ಸ್ಥಳೀಯ ಕಾಂಗ್ರೆಸ್ ಮುಖಂಡರಾಗಿದ್ದರು.












Click it and Unblock the Notifications