• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತಳ್ಳೋಗಾಡಿಯವನು ಈರುಳ್ಳಿ ಬೋರ್ಡ್ ಕೆಳಗೆ ಇಂಟರೆಸ್ಟಿಂಗ್ ಒಕ್ಕಣೆ ಬರೆದುಕೊಂಡಿದ್ದ

|

ವಾಟ್ಸಾಪ್ ನಲ್ಲಿ ಒಂದು ಜೋಕ್ ಹರಿದಾಡುತ್ತಿತ್ತು. "ಆಫೀಸ್ ಕೆಲಸ ಮುಗಿಸಿಕೊಂಡು, ರಾತ್ರಿ ಮನೆಗೆ ಬರುವಾಗ ಸಣ್ಣದಾಗಿ ಮಳೆ ಶುರುವಾಗಿತ್ತು ರಸ್ತೆಯಲ್ಲಿ ಯಾವೊಬ್ಬ ನರಪಿಳ್ಳೆಯೂ ಇರಲಿಲ್ಲ, ಭಯ ಶುರುವಾಯ್ತು. ಜೋರಾಗಿ ಕೂಗಿದೆ "ಈರುಳ್ಳಿ ಕೆಜಿಗೆ ಇಪ್ಪತ್ತು ರೂಪಾಯಿ" ಅಂತ .. ಆಗ.. ಎಲ್ಲಾ ಹೆಂಗಸರು ಮನೆ ಬಾಗಿಲು ತೆಗೆದರು.. ನಾನ್ ಮಾತ್ರ ಸೈಲೆಂಟ್ ಆಗಿ ನಡ್ಕೊಂಡ್ ಹೋದೆ".

ಇದೇ ರೀತಿಯ ಹಲವು ಜೋಕ್ಸುಗಳು ಈರುಳ್ಳಿಯ ಬಗ್ಗೆ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ. ಈರುಳ್ಳಿಗೆ ಅದೆಷ್ಟು ಶಕ್ತಿಯಿದೆ ಅಂದರೆ, ಹಿಂದೊಮ್ಮೆ, ದೆಹಲಿಯಲ್ಲಿ, ಮದನ್ ಲಾಲ್ ಖುರಾನಾ ಸರಕಾರವನ್ನೇ ಬುಡಮೇಲು ಮಾಡಿತ್ತು.

ಬೆಂಗಳೂರಲ್ಲಿ ಈಜಿಪ್ಟ್‌ ಈರುಳ್ಳಿ; ಕೆಜಿಗೆ ಎರಡು ಮಾತ್ರ, ದರ ಎಷ್ಟು?ಬೆಂಗಳೂರಲ್ಲಿ ಈಜಿಪ್ಟ್‌ ಈರುಳ್ಳಿ; ಕೆಜಿಗೆ ಎರಡು ಮಾತ್ರ, ದರ ಎಷ್ಟು?

ರಾಜಧಾನಿ ಬೆಂಗಳೂರಿನಲ್ಲಿ ಕೆಜಿಯೊಂದರ ಬೆಲೆ 150 ರೂಪಾಯಿಯನ್ನು ದಾಟಿದೆ. ಇನ್ನೂ, ಜಾಸ್ತಿಯಾಗುವ ಎಲ್ಲಾ ಸಾಧ್ಯತೆಯಿದೆ. ಆದರೆ, ಈರುಳ್ಳಿ ಮನೆಯಲ್ಲಿ ಇಲ್ಲದಿದ್ದರೆ ನಡೆಯುತ್ತದೆಯೇ? ಹೀಗಿರುವಾಗ, ಈರುಳ್ಳಿ ಖರೀದಿಸಲೂ ಹೋದಾಗ, ತಳ್ಳೋಗಾಡಿಯಲ್ಲಿನ ಒಂದು ಬೋರ್ಡ್ ಇಂಟರೆಸ್ಟಿಂಗ್ ಆಗಿತ್ತು.

ಸಾಮಾನ್ಯವಾಗಿ ತರಕಾರಿಯ ಹೆಸರು ಬರೆದು, ಅದರೆ ಕೆಳಗೆ ಬೆಲೆಯನ್ನು ಬರೆಯಲಾಗುತ್ತದೆ. ಆದರೆ, ಇಲ್ಲೊಬ್ಬ ವ್ಯಾಪಾರಿ 'ನಾಟಿ ಬೆಳ್ಳುಳ್ಳಿ available.. ಈರುಳ್ಳಿ' ಎಂದು ಬರೆದು ಅದರ ಕೆಳಗೆ 'Bro' ಎಂದು ಬರೆದಿದ್ದ.

ಬೆಂಗಳೂರು ನಗರದ ಮಾರುಕಟ್ಟೆಯಲ್ಲಿ ದಾಖಲೆ ಬರೆದ ಉಳ್ಳಾಗಡ್ಡಿ ಬೆಂಗಳೂರು ನಗರದ ಮಾರುಕಟ್ಟೆಯಲ್ಲಿ ದಾಖಲೆ ಬರೆದ ಉಳ್ಳಾಗಡ್ಡಿ

ಬ್ರೋ ಎಂದರೆ ಏನು ಎಂದು ಕುತೂಹಲದಿಂದ ಕೇಳಿದಾಗ, ಅದು ನನ್ನ ಹೆಸರು ಎಂದ. 'ಬ್ರೋ' ಅನ್ನೋದು ಹೆಸರೇ... ಏನೋ ವಿಚಿತ್ರವಾಗಿದೆಯಲ್ಲಾ ಎಂದಾಗ, ಆತ ಹೇಳಿದಿಷ್ಟು...

 ಹುಬ್ಬಳ್ಳಿಯಲ್ಲಿ ಬಿಸಿ ತುಪ್ಪದಂತೆ ಮಾರಾಟವಾಯ್ತು ಈಜಿಪ್ಟ್ ಈರುಳ್ಳಿ ಹುಬ್ಬಳ್ಳಿಯಲ್ಲಿ ಬಿಸಿ ತುಪ್ಪದಂತೆ ಮಾರಾಟವಾಯ್ತು ಈಜಿಪ್ಟ್ ಈರುಳ್ಳಿ

'ಇಂಗ್ಲಿಷ್ ನಲ್ಲಿ ಬ್ರದರ್ ಗೆ ಸ್ಟೈಲಾಗಿ ಬ್ರೋ ಎನ್ನುತ್ತಾರೆ, ನನ್ನನ್ನು ನಿಮ್ಮ ಬ್ರೋ ಎಂದು ತಿಳಿದುಕೊಂಡು, ಈರಳ್ಳಿ ಬೆಲೆಯಲ್ಲಿ ಚೌಕಾಸಿ ಮಾಡದೇ ವ್ಯಾಪಾರ ಮಾಡಿ. ನಮಗೂ, ಒಂದು ನಾಕು ಕಾಸು ಸಂಪಾದನೆಯಾಗಲಿ' ಎಂದು ಹೇಳಿಬಿಡುವುದೇ..

ಕೆಲವೇ ದಿನಗಳಲ್ಲಿ, ಬೆಂಗಳೂರಿನಲ್ಲಿ ಈರುಳ್ಳಿ ಬೆಲೆ ಇನ್ನೂರು ರೂಪಾಯಿ ದಾಟಲಿದೆ ಎನ್ನುವ ಶಾಕಿಂಗ್ ನ್ಯೂಸ್ ಅನ್ನು ಈ ವ್ಯಾಪಾರಿ ಕೊಟ್ಟ. ಇನ್ನೂರಾಗಲಿ.. ಮುನ್ನಾರಾಗಲೀ.. ಗೊಣಗಿಕೊಂಡಾದರೂ ಈರುಳ್ಳಿ ಖರೀದಿಸದೇ ಇರಲು ಸಾಧ್ಯವೇ? ಹಾಗೆ ಮಾಡಲು, ಎಲ್ಲರೂ ವಿತ್ತಸಚಿವರ ಸಂಬಂಧಿಕರಾಗಲು ಆಗುತ್ತಾ?

English summary
An Interesting Board In Onion Selling Vehicle In Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X