ಬೆಂಗಳೂರು: 150 ದಿನಗಳಲ್ಲಿ 200 ಕೋಟಿ ಹಣ ಸೈಬರ್ ವಂಚನೆ!
ಬೆಂಗಳೂರು, ಜೂ.3: ರಾಜಧಾನಿ ಬೆಂಗಳೂರು ಎಷ್ಟು ಹೈಟೆಕ್ ಸಿಟಿಯಾಗಿದೆಯೋ ಗೊತ್ತಿರುವಂತದ್ದೆ. ಡಿಜಿಟಲ್ ಮನಿ ಟ್ರಾನ್ಸಕ್ಷನ್ ಹೆಚ್ಚಾಗಿದೆ, ಸಾಮಾಜಿಕ ಜಾಲತಾಣಗಳ ಬಳಕೆಯೂ ವಿಪರೀತವಾಗಿದೆ. ಇದೇ ನೋಡಿ ಈಕ ಸೈಬರ್ ವಂಚಕರಿಗೆ ವರವಾಗಿರುವುದು. ಸಿಲಿಕಾನ್ ಸಿಟಿಯಲ್ಲಿ ನಿತ್ಯ ನಡೆಯುತ್ತಿರು ಕಣ್ಣಿಗೆ ಕಾಣದ ದೊಡ್ಡ ವಂಚನೆ ಜಾಲವಿದು.
ಹೈಟೆಕ್ ಸಿಟಿಯಲ್ಲಿ ನಡೆಯತ್ತಿರುವ ಈ ಸೈಬರ್ ವಂಚನೆಯ ಮಹಾಜಾಲವನ್ನು ಬೇಧಿಸಲು ಸಾಧ್ಯವಾಗುತ್ತಿಲ್ಲ. ಕಳೆದ 150 ದಿನಗಳಲ್ಲಿ ನಗರದಲ್ಲಿ ಸೈಬರ್ ಪ್ರಕರಣಗಳ ಸಂಖ್ಯೆ ವಿಪರೀತ ಏರಿಕೆಯನ್ನು ಕಂಡಿದೆ. ಈ ಸಮಯದ ಸೈಬರ್ ಜಾಲಕ್ಕೆೆ ಸಿಲುಕಿ ಜನಸಾಮನ್ಯರು ಕೋಟ್ಯಂತರ ರೂಪಾಯಿಯನ್ನು ಕಳೆದುಕೊಂಡಿದ್ದಾರೆ.
ರಾಜಧಾನಿ ಬೆಂಗಳೂರು ಒಂದರಲ್ಲೆ ಬರೋಬ್ಬರಿ 3,684 ಪ್ರಕರಣ ದಾಖಲಾಗಿದೆ. ಪ್ರತಿ ದಿನ ಸರಾಸರಿ 26 ಸೈಬರ್ ಕ್ರೈಂ ಪ್ರಕರಣ ನಗರದಲ್ಲಿ ದಾಖಲಾಗುತ್ತಿವೆ. ಒಂದಿಲ್ಲೊಂದು ರೀತಿ ಸಾರ್ವಜನಿಕರ ಹಣ ದೋಚುತ್ತಿರುವ ಸೈಬರ್ ಖದೀಮರ ವಿರುದ್ದ ಪ್ರಕರಣಗಳು ನೆಪಮಾತ್ರಕ್ಕೆ ದಾಖಲಾಗಿದ್ದು ಸೈಬರ್ ವಂಚಕರು ಸುಲಭಕ್ಕೆ ಬಲೆಗೆ ಬೀಳುತ್ತಿಲ್ಲ. ಸೈಬರ್ ಖದೀಮರು ಅಮಾಯಕ ಆಧಾರ್ ಕಾರ್ಡ್ ದುರ್ಬಳಕೆ ಮಾಡಿಕೊಂಡು ಹೊಸ ಅಕೌಂಟ್‌ಗಳನ್ನು ತೆರೆಯುವ ಮೂಲಕ ಅಕ್ರಮವಾಗಿ ಲಪಟಾಯಿಸೋ ಹಣವನ್ನು ಈ ಅಕೌಂಟಿಗೆ ಹಾಕಿಕೊಳ್ಳುವ ಮುೂಲಕ ಅದನ್ನು ಎಟಿಎಂನಲ್ಲಿ ವಿಥ್ ಡ್ರಾ ಮಾಡಿಕೊಂಡು ಮಜಾ ಮಾಡುತ್ತಾರೆ.

ಬೆಂಗಳೂರಿನ CEN ಪೊಲೀಸ್ ಠಾಣೆಯಲ್ಲೇ ಇಷ್ಟು
ಬೆಂಗಳೂರು ಐಟಿ ಹಬ್ ಆಗಿದೆ. ಇದೊಂದು ತಾಂತ್ರಿಕ ಮತ್ತು ಯಾಂತ್ರಿಕ ಜೀವನವಾಗಿಬಿಟ್ಟಿದೆ. ಜನರಿಗೆ ತುಂಬಾ ವೇಗವಾಗಿ ಹಣವನ್ನು ಮಾಡಬೇಕು ಅನ್ನೋ ಹಂಬಲವಿದೆಯೇ ವಿನಃ ಆ ಹಣವನ್ನು ಹೇಗೆ ಉಳಿಸಿಕೊಳ್ಳಬೇಕು ಅನ್ನೋ ಕಾಳಜಿ ಕಡಿಮೆಯೇ. ಆದರೇ ಹಣದ ದುರಾಸೆಯಿಂದ ಹಣವನ್ನು ದುಪ್ಪಟ್ಟು ಮಾಡಿಕೊಳ್ಳಲೋ ಅಥವಾ ಯಾವುದೋ ಲಾಭದ ನಿರೀಕ್ಷೆಯಲ್ಲೋ ಸೈಬರ್ ವಂಚಕ ಜಾಲಕ್ಕೆ ಸಿಲುಕಿ ಬಿಡ್ತಾರೆ. ಬೆೆಂಗಳೂರಿನ 9 ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಗಮನಿಸಿದಾಗ ಜನರು ಕಳೆದುಕೊಂಡಿರುವ ಮೊತ್ತವೇ 200 ಕೋಟಿ ರೂಪಾಯಿ ಅಧಿಕವಾಗಿದೆ.

ಸೈಬರ್ ವಂಚನೆಯಲ್ಲಿ 20% ವಿಲೇವಾರಿ
ಸೈಬರ್ ವಂಚಕರು ಬೇರೆ ಬೇರೆ ಸ್ಕೀಮ್‌ಗಳನ್ನು ಹೇಳಿ, ಲಾಟರಿ ಹೊಡೆದಿದೆ, ಕಾರು ಗಿಫ್ಟ್ ಸಿಗುತ್ತೆ, ನಿಮ್ಮ ಮೊಬೈಲ್‌ಗೆ ಬಂಪರ್ ಆಫರ್ ಸಿಕ್ಕಿದೆ ಹೀಗೆಲ್ಲಾ ಹೇಳಿ ಯಾಮಾರಿಸೋ ಗ್ಯಾಂಗ್ ಬಹುತೇಕ ಹೊರರಾಜ್ಯದವರೇ. ಕಳೆದುಕೊಂಡ ಹತ್ತಿಪ್ಪತ್ತು ಸಾವಿರಕ್ಕೆ ಹೊರರಾಜ್ಯಕ್ಕೆ ಹೋಗಿ ಆರೋಪಿಗಳನ್ನು ಹುಡುಕಿ ಎಳೆತರಲು ಕಳೆದುಕೊಂಡಿದಕ್ಕಿಂತಲೂ ಹೆಚ್ಚು ಹಣ ಖರ್ಜಾಗುತ್ತದೆ. ಸೈಬರ್ ಪ್ರಕರಣಗಳಲ್ಲಿ ಬ್ಯಾಂಕ್‌ನಿಂದ ವಂಚನೆಯೋ, ಡೆಬಿಟ್ , ಕ್ರೆಡಿಟ್ , ಎಟಎಂ ಸಮಸ್ಯೆಯಿಂದಾಗುವ ಪ್ರಕರಣಗಳು ಬಹುಬೇಗ ಇತ್ಯರ್ಥವಾಗಿ ಬಿಡುತ್ತದೆ. ಅದನ್ನು ಶೇಕಡವಾರು ಲೆಕ್ಕಚಾರದಲ್ಲಿ ನೋಡುವುದಾದರೇ 20% ಮಾತ್ರವೇ ಎನ್ನಬಹುದು.

ಉಪವಿಭಾಗಕ್ಕೊಂದು ಪೊಲೀಸ್ ಠಾಣೆ ಅವಶ್ಯ..
ಬೆಂಗಳೂರಿನ ಜನಸಂಖ್ಯೆ ಕೋಟಿಗೂ ಅಧಿಕ. ಜನರು ಜೀವನ ಜಂಜಾಟದಲ್ಲಿ ಸೈಬರ್ ವಂಚನೆಗೆ ಒಳಗಾಗಿ ಉಳಿಸಿದ್ದ ಹಣವನ್ನೆಲ್ಲಾ ಕಳೆದುಕೊಂಡು ಕಂಗಾಲಾಗಿ ಬಿಡ್ತಾರೆ. ಆದರೂ ಸೈಬರ್ ಕ್ರೈಂ ತಡೆಯಲು ಕಡಿಮೆ ಪೊಲೀಸ್ ಠಾಣೆಯ ಇರುವುದು, ಪೊಲೀಸರಲ್ಲಿ ಸಿಬ್ಬಂದಿಯ ಕೊರತೆಯ ಜೊತೆಗೆ ಟೆಕ್ನಿಕಲ್ ಟೀಮ್ ಕೊರತೆಯಾಗಿರುವುದು ಮುಖ್ಯವಾಗಿದೆ. ಬೆಂಗಳೂರಿನ ಎಸಿಪಿ ಉಪ ವಿಭಾಗದಲ್ಲಿ ಸೈಬರ್ ಠಾಣೆಗಳ ಅವಶ್ಯಕ ಬೆಂಗಳೂರಿಗೆ ಇದೆ.

ಯಾವ ವಿಭಾಗದಲ್ಲಿ ಎಷ್ಟು ಪ್ರಕರಣ
ಬೆಂಗಳೂರು ಕೇಂದ್ರ ವಿಭಾಗದಲ್ಲಿ 357 ಕೇಸ್, ದಕ್ಷಿಣದಲ್ಲಿ 456 ಪ್ರಕರಣ, ಪಶ್ಚಿಮ ವಿಭಾಗದಲ್ಲಿ 875, ಪೂರ್ವ ವಿಭಾಗದಲ್ಲಿ 305, ಉತ್ತರ ವಿಭಾಗದಲ್ಲಿ 333, ಈಶಾನ್ಯ ವಿಭಾಗದಲ್ಲಿ 626, ಆಗ್ನೇಯ ವಿಭಾಗದಲ್ಲಿ 366, ವೈಟ್‌ಫೀಲ್ಡ್ ವಿಭಾಗದಲ್ಲಿ341, ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ 25 ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನಲ್ಲಿ ಆರೇ ತಿಂಗಳಿಗೆ 3684 ದಾಖಲಾಗಿದೆ. ಅಂದರೇ ಬರೋಬ್ಬರಿ ದಿನಕ್ಕೆ ಕನಿಷ್ಠ ಆರು ಜನ ವಂಚನೆಗೆ ಒಳಗಾಗಿದ್ದಾರೆ. ಇನ್ನು ಒಂದೆರಡು ಸಾವಿರ ಕಳೆದುಕೊಂಡು ಪೊಲೀಸರಿಗೆ ದೂರು ಕೊಡದ ವಂಚನೆಗಳು ಲೆಕ್ಕಕ್ಕೆ ಸಿಗುವುದಿಲ್ಲ. ನಾವು ವಂಚನೆಗೆ ಒಳಗಾಗಿ ಪೊಲೀಸರನ್ನು ಶಪಿಸುವುದಕ್ಕಿಂತ ಜಾಗೃತರಾಗಿರುವುದೇ ಉತ್ತಮ.












Click it and Unblock the Notifications