• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
LIVE
18 Jan, 2020         18:25:49 IST

ಪಾಕಿಸ್ತಾನದ ಭಾಷೆ, ರಾಹುಲ್ ಗಾಂಧಿ ಭಾಷೆ ಒಂದೇ- ಅಮಿತ್ ಶಾ

|

ಬೆಂಗಳೂರು, ಜನವರಿ 18: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಕ್ಕೆ ಆಗಮಿಸಿದ್ದು, ಸಿಎಂ ಯಡಿಯೂರಪ್ಪ ಅಮಿತ್ ಶಾ ಗೆ ಸ್ವಾಗತ ಕೋರಿದ್ದಾರೆ.

   Amith Shah to visit Bengaluru Today, but Why ? | AMIT SHAH | BENGALURU | TEJASVI SURYA | BJP

   ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಅಮಿತ್ ಶಾ ಆಗಮಿಸಿದ್ದು, ಅವರನ್ನು ಸಿಎಂ ಯಡಿಯೂರಪ್ಪ ಸೇರಿದಂತೆ ರಾಜ್ಯ ಬಿಜೆಪಿಯ ಪ್ರಮುಖರು ಎದುರುಗೊಂಡು ಸ್ವಾಗತಕೋರಿದ್ದಾರೆ.

   ಅಮಿತ್ ಶಾ ಅವರು ಮೊದಲಿಗೆ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಖಾಸಗಿ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲಿಂದ ಜಯನಗರಕ್ಕೆ ಬರಲಿದ್ದಾರೆ.

   ಜಯನಗರದ ನಾಲ್ಕನೇ ಬ್ಲಾಕ್‌ನಲ್ಲಿ ಸಂಸದ ತೇಜಸ್ವಿ ಸೂರ್ಯ ಅವರ ನೂತನ ಕಚೇರಿಯ ಉದ್ಘಾಟನೆಯಲ್ಲಿ ಅಮಿತ್ ಶಾ ಪಾಲ್ಗೊಳ್ಳಲಿದ್ದು, ಬಳಿಕ ಹುಬ್ಬಳ್ಳಿಗೆ ತೆರಳಲಿದ್ದಾರೆ.

   ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದ್ದು, ಸಮಾವೇಶದಲ್ಲಿ ಅಮಿತ್ ಶಾ ಭಾಷಣ ಮಾಡಲಿದ್ದಾರೆ. ಭಾಷಣದ ವೇಳೆ ಸಿಎಎ ಮತ್ತು ಎನ್‌ಆರ್‌ಸಿ ಗೆ ಹೆಚ್ಚಿನ ಒತ್ತು ನೀಡುವ ಸಾಧ್ಯತೆ ಇದೆ.

   LIVE Update: Amit Shah Is In Karnataka

   ಹುಬ್ಬಳ್ಳಿಯ ಸಮಾವೇಶ ಮುಗಿಸಿ ಅಮಿತ್ ಶಾ ದೆಹಲಿಗೆ ವಾಪಸ್ಸಾಗಲಿದ್ದಾರೆ. ಈ ನಡುವೆ ಯಡಿಯೂರಪ್ಪ ಬಳಿ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಸಲಿದ್ದಾರೆ.

   Newest First Oldest First
   6:25 PM, 18 Jan
   ಅಮಿತ್ ಶಾ ಭಾರತ ಮಾತೆಗೆ ಜೈಕಾರ ಹಾಕಿ ಭಾಷಣ ಮುಗಿಸಿದ್ದು, ವೇದಿಕೆ ಮೇಲಿದ್ದ ಬಿಜೆಪಿ ನಾಯಕರು ಶಾ ಅವರಿಗೆ ಧನ್ಯವಾದಗಳನ್ನು ಅರ್ಪಿಸಿ ವೇದಿಕೆ ಮೇಲಿಂದ ಅವರನ್ನು ಬೀಳ್ಕೊಟ್ಟರು. ಯಡಿಯೂರಪ್ಪ ಅವರು ಅಮಿತ್ ಶಾ ಜೊತೆ ವೇದಿಕೆ ಇಳಿದು ಹೊರಟರು.
   6:21 PM, 18 Jan
   ಸಿಎಎ ಪರ ಬೆಂಬಲ ನೀಡುವವರು ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಎಂದ ಅಮಿತ್ ಶಾ, ವೇದಿಕೆ ಮುಂದೆ ಇದ್ದವರಿಂದ ಸಂಖ್ಯೆಗೆ ಕರೆ ಮಾಡಿಸಿದರು.
   6:20 PM, 18 Jan
   ಜೆಎನ್‌ಯು ನಲ್ಲಿ ದೇಶದ್ರೋಹಿ ಘೋಷಣೆ ಕೂಗಲಾಯಿತು. 'ಆದರೆ ಅದು ಅವರ ವಾಕ್ ಸ್ವಾತಂತ್ರ್ಯ' ಎಂದು ರಾಹುಲ್ ಗಾಂಧಿ ಹೇಳುತ್ತಾರೆ, 'ನೀವು ಬೇಕಾದರೆ ನಮ್ಮ ಪಕ್ಷವನ್ನು ಬೈಯಿರಿ, ನಮ್ಮನ್ನು ಬೈಯಿರಿ, ಆದರೆ ದೇಶದ ವಿರುದ್ಧ ಮಾತನಾಡಿದರೆ ಅವರನ್ನು ಜೈಲಿಗೆ ಕಳಿಸುವುದೇ ಬಿಡುವುದಿಲ್ಲ- ಅಮಿತ್ ಶಾ
   6:19 PM, 18 Jan
   ಪಾಕ್‌ ಪ್ರಧಾನಿ ಇಮ್ರಾನ್ ಖಾನ್ ಸಹ ಸರ್ಜಿಕಲ್ ಸ್ಟ್ರೈಕ್‌ ಗೆ ಸಾಕ್ಷಿ ಕೇಳಿದರು, ರಾಹುಲ್ ಗಾಂಧಿ ಸಹ ಸರ್ಜಿಕಲ್ ಸ್ಟ್ರೈಕ್ ಗೆ ಸಾಕ್ಷಿ ಕೇಳಿದರು. ರಾಹುಲ್ ಗಾಂಧಿ-ಇಮ್ರಾನ್ ಖಾನ್ ನಡುವೆ ಸಂಬಂಧ ಏನೆಂಬುದು ಗೊತ್ತಾಗುತ್ತಿಲ್ಲ. ರಾಹುಲ್ ಹೇಳಿಕೆಯನ್ನು ಭಾರತದ ವಿರೋಧವಾಗಿ ಪಾಕಿಸ್ತಾನವು ವಿಶ್ವಸಂಸ್ಥೆಯಲ್ಲಿ ಬಳಸುತ್ತಿದೆ. ಈ ಕಾಂಗ್ರೆಸ್‌ ನವರು ಅವಮಾನದಿಂದ ನೀರಲ್ಲಿ ಮುಳುಗಿ ಸಾಯಬೇಕು- ಅಮಿತ್ ಶಾ
   6:17 PM, 18 Jan
   ಆದರೆ ಮೋದಿ ಸರ್ಜಿಕಲ್ ಸ್ಟ್ರೈಕ್, ಏರ್‌ ಸ್ಟ್ರೈಕ್ ಮಾಡಿದಾಗ ಈ ರಾಹುಲ್ ಗಾಂಧಿ, ಅರವಿಂದ ಕೇಜ್ರಿವಾಲ್ ಅವರುಗಳು ಸಾಕ್ಷಿ ಕೇಳುತ್ತಾರೆ - ಅಮಿತ್ ಶಾ
   6:16 PM, 18 Jan
   ಪಾಕಿಸ್ತಾನದಿಂದ ಬಂದವರು ನಮ್ಮ ಸೈನಿಕರ ತಲೆ ಕಡೆದುಕೊಂಡು ಹೋಗುತ್ತಿದ್ದರು ಆದರೆ ಮೌನಿ ಮನಮೋಹನ್ ಸಿಂಗ್ ಮಾತನಾಡುತ್ತಲೇ ಇರಲಿಲ್ಲ. ಆದರೆ ಮೋದಿ ಸರ್ಕಾರದಲ್ಲಿ ಪರಿಸ್ಥಿತಿ ಬದಲಾಯಿತು. ಉರಿ ಮೇಲೆ ದಾಳಿ ಆಯಿತು, ಆದರೆ ಹತ್ತೇ ದಿನದಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡಿದರು- ಅಮಿತ್ ಶಾ
   6:15 PM, 18 Jan
   ಶತಕಗಳಿಂದಲೂ ಹಿಂದೂಗಳ ಆಸೆಯಿತ್ತು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗಬೇಕೆಂದು. ಆದರೆ ಈ ಪ್ರಕರಣ ನ್ಯಾಯಾಲಯದಲ್ಲಿದ್ದಾಗ ಕಾಂಗ್ರೆಸ್ ಪಕ್ಷ ಇದನ್ನು ವಿರೋಧಿಸಿತ್ತು- ಅಮಿತ್ ಶಾ
   6:13 PM, 18 Jan
   'ಕಾಂಗ್ರೆಸ್ ಪಕ್ಷ ಕೇವಲ ಸಿಎಎ ಮಾತ್ರವಲ್ಲ ಎಲ್ಲಾ ರಾಷ್ಟ್ರವಾದಿ ವಿಷಯಗಳಿಗೆ ವಿರೋಧ ಮಾಡುತ್ತದೆ. ಮೋದಿ ಸರ್ಕಾರ ಆರ್ಟಿಕಲ್ 370 ತೆಗೆದುಹಾಕಿದರು. ಆದರೆ ಇದನ್ನು ರಾಹುಲ್ ಬಾಬಾ ವಿರೋಧಿಸಿದರು. ಇವರಿಗೆ ಕಾಶ್ಮೀರ ನಮ್ಮ ಜೊತೆ ಇರುವುದು ಬೇಕಾಗಿಲ್ಲ' - ಅಮಿತ್ ಶಾ
   6:12 PM, 18 Jan
   'ಇಡೀಯ ಸಿಎಎ ವರದಿ ಓದಿ ಅದರಲ್ಲಿ ಒಬ್ಬರ ನಾಗರೀಕತೆಯನ್ನು ಸರ್ಕಾರ ಕಿತ್ತುಕೊಳ್ಳುತ್ತದೆ ಎಂಬ ಒಂದು ಅಂಶ ಇದ್ದರೂ ಸಹ ನಮ್ಮ ಸಚಿವ ಪ್ರಹ್ಲಾದ್ ಜೋಶಿ ನಿಮ್ಮ ಜೊತೆಗೆ ಬೇಕಾದರೆ ಚರ್ಚೆಗೆ ಇಳಿಯುತ್ತಾರೆ, ಸಮಯ, ಸ್ಥಳ ತಿಳಿಸಿ ಎಂದು ಅಮಿತ್ ಶಾ ಸವಾಲು ಹಾಕಿದರು.
   6:10 PM, 18 Jan
   ಕೇವಲ ಒಂದು ವರ್ಷದ ಹಿಂದೆ ರಾಜಸ್ಥಾನ ಚುನಾವಣೆಯಲ್ಲಿ ರಾಜಸ್ಥಾನದಲ್ಲಿರುವ ಹಿಂದೂ, ಸಿಖ್ ವಲಸಿಗರಿಗೆ ನಾಗರೀಕತೆ ಕೊಡುತ್ತೀವೆಂದು ಪ್ರಣಾಳಿಕೆಯಲ್ಲಿ ಹೇಳಿದೆ. ಆದರೆ ಈಗ ಅದೇ ರಾಹುಲ್ ಗಾಂಧಿ, ಅಶೋಕ್ ಗೆಹ್ಲೋಟ್ ವಿರೋಧಿಸುತ್ತಿದ್ದಾರೆ.
   6:09 PM, 18 Jan
   ಸಿಎಎ ವಿರೋಧಿಸುವವರು ದಲಿತ ವಿರೋಧಿಗಳು ಎಂದ ಅಮಿತ್ ಶಾ, ಮಾನವ ಹಕ್ಕು ಸಂಘಟನೆಗಳವರಿಗೂ ಟಾಂಗ್ ನೀಡಿದ ಶಾ, ಪಾಕಿಸ್ತಾನದಲ್ಲಿ ಹೋಗಿ ಅಲ್ಲಿನ ಇತರೆ ಧರ್ಮಿಯರನ್ನು ನೋಡಿ, ಅವರ ಹಕ್ಕಿನ ಬಗ್ಗೆಯೂ ಆಲೋಚಿಸಿ ಎಂದರು.
   6:07 PM, 18 Jan
   'ಇವರೆನ್ನಲ್ಲಾ ಬಿಟ್ಟುಬಿಡಿ ಮಹಾತ್ಮಾ ಗಾಂಧಿ ಸಹ ಹೇಳಿದ್ದರು. ನೆರೆ-ಹೊರೆಯಲ್ಲಿ ತುಳಿತಕ್ಕೊಳಗಾದ ಇತರ ಧರ್ಮೀಯರಿಗೆ ನಾಗರೀಕತೆ ನೀಡಬೇಕೆಂದು' ಎಂದ ಅಮಿತ್ ಶಾ, ಗಾಂಧಿ ಅವರು ಪ್ರಾರ್ಥನಾ ಸಭೆಯಲ್ಲಿ ಹೇಳಿದ್ದ ಮಾತುಗಳನ್ನು ಓದಿ ಹೇಳಿದರು.
   6:06 PM, 18 Jan
   ನೆಹರು, ಸರ್ದಾರ್ ವಲ್ಲಭಾಯಿ ಪಟೇಲ್, ಬಾಬು ರಾಜೇಂದ್ರಸಿಂಗ್ ಪ್ರಸಾದ್ ಸೇರಿ ಇನ್ನೂ ಹಲವು ಕಾಂಗ್ರೆಸ್ ನಾಯಕರು ಆಗಲೇ ಹೇಳಿದ್ದರು. 'ನಾವು ನೆರೆ-ಹೊರೆಯ ಹಿಂದೂಗಳಿಗೆ ನಾಗರೀಕತೆ ಕೊಡುತ್ತೀವೆಂದು ಹೇಳಿದ್ದರು' ಆದರೆ ಈ ಹೊಸ ಕಾಂಗ್ರೆಸ್ಸಿಗ ರಾಹುಲ್ ಗಾಂಧಿ ಸಿಎಎ ಯನ್ನು ವಿರೋಧಿಸುತ್ತಿದ್ದಾರೆ- ಅಮಿತ್ ಶಾ
   6:05 PM, 18 Jan
   ಕಾಂಗ್ರೆಸ್, ಕಮ್ಯೂನಿಸ್ಟ್, ಅರವಿಂದ ಕೇಜ್ರಿವಾಲ್, ಜೆಡಿಎಸ್ ಇವರಿಗೆ ಏಕೆ ಹೊಟ್ಟೆ ಉರಿಯುತ್ತಿದೆ. ಏಕೆ ಗೊತ್ತೆ? ಅವರಿಗೆ ತಮ್ಮ ಮತಬ್ಯಾಂಕ್ ರಾಜಕೀಯ ಮಾಡಬೇಕಿದೆ. ಆದರೆ ಬಿಜೆಪಿ ಮತಬ್ಯಾಂಕ್ ರಾಜಕಾರಣ ಮಾಡುವುದಿಲ್ಲ- ಅಮಿತ್ ಶಾ
   6:04 PM, 18 Jan
   ನಾನು ಹೇಳುತ್ತೀನಿ ಅಲ್ಲಿನ ಹಿಂದೂಗಳಿಗೆ ಏನು ಆಯಿತೆಂದು. ಹಿಂದೂಗಳನ್ನು ಕೊಲ್ಲಲಾಯಿತು. ಪೋಷಕರ ಎದುರೇ ಮಕ್ಕಳ ಮೇಲೆ ಅತ್ಯಾಚಾರ ಮಾಡಲಾಯಿತು. ದೇವಸ್ತಾನಗಳನ್ನು ಒಡೆಯಲಾಯಿತು. ಬಲವಂತವಾಗಿ ಮತಾಂತರ ಮಾಡಿಸಲಾಯಿತು. ಹಿಂದೂಗಳು ಮಾತ್ರವಲ್ಲ ಬೌದ್ಧ, ಕ್ರಿಶ್ಚಿಯನ್, ಜೈನ ಎಲ್ಲರಿಗೂ ಇದೇ ಪರಿಸ್ಥಿತಿ ಎದುರಾಯಿತು, ಅಪ್ಘಾನಿಸ್ತಾನದಲ್ಲಿದ್ದ ದೊಡ್ಡ ಬೌದ್ಧ ಪ್ರತಿಮೆಗೆ ಬಾಂಬ್ ಇಟ್ಟು ಉಡಾಯಿಸಲಾಯಿತು- ಅಮಿತ್ ಶಾ
   6:02 PM, 18 Jan
   ದೇಶ ವಿಭಜನೆ ಆದಾಗ 30% ಹಿಂದೂಗಳು ಪಾಕಿಸ್ತಾನದಲ್ಲಿದ್ದರು. ಆದರೆ ಈಗ ಕೇವಲ 3% ಮಾತ್ರ ಹಿಂದೂಗಳಿದ್ದಾರೆ. ಬಾಂಗ್ಲಾದಲ್ಲಿ 7% ಹಿಂದೂಗಳು ಮಾತ್ರ ಇದ್ದಾರೆ. ಉಳಿದ ಹಿಂದೂಗಳೆಲ್ಲಾ ಎಲ್ಲಿ ಹೋದರು ಯಾರಾದರೂ ಉತ್ತರಿಸಬಲ್ಲರಾ?- ಅಮಿತ್ ಶಾ
   6:00 PM, 18 Jan
   ರಾಹುಲ್ ಗಾಂಧಿ ಕಿವಿ ತೆಗೆದುಕೊಂಡು ಕೇಳಿಸಿಕೊಳ್ಳಿ, ಈ ದೇಶವನ್ನು ಧರ್ಮದ ಆಧಾರದಲ್ಲಿ ಪ್ರತ್ಯೇಕಿಸಲಾಯಿತು. ಈ ಕಾರ್ಯವನ್ನು ಮಾಡಿದ್ದು ನಿಮ್ಮದೇ ಪಕ್ಷ. ನಿಮ್ಮ ಮುತ್ತಾತ ನೆಹರೂ ಅವರೇ ಇದರ ಕಾರಣಕಾರ್ತ- ಅಮಿತ್ ಶಾ
   5:59 PM, 18 Jan
   ಮೋದಿ ಅವರು ಎರಡನೇ ಬಾರಿ ಪ್ರಧಾನಿ ಆದ ನಂತರ ಎಪ್ಪತ್ತು ವರ್ಷಗಳ ವರೆಗೆ ಯಾರೂ ಮುಟ್ಟಲೇ ಆಗಿರದಂತಹಾ ಸಮಸ್ಯೆಗಳಿಗೆ ಮುಕ್ತಿ ನೀಡುವ ಯತ್ನ ಮಾಡುತ್ತಿದ್ದಾರೆ. ಅದರಲ್ಲಿ ಒಂದು ಸಿಎಎ- ಅಮಿತ್ ಶಾ
   5:58 PM, 18 Jan
   ಕಿತ್ತೂರು ಚೆನ್ನಮ್ಮ ಇದೇ ಭೂಮಿಯಲ್ಲಿ ದೇಶಕ್ಕಾಗಿ ಹೋರಾಡಿ ಪ್ರಾಣ ಬಿಟ್ಟಿದ್ದಳು. ಇದೇ ಭೂಮಿಯಲ್ಲಿ ಸಂಗೊಳ್ಳಿ ರಾಯಣ್ಣ ಸಹ ಪ್ರಾಣ ತ್ಯಾಗ ಮಾಡಿದರು. ಜೊತೆಗೆ ಗಂಗೂಬಾಯಿ ಹಾನಗಲ್ಲ, ದ.ರಾ.ಬೇಂದ್ರ ಸಹ ಇದೇ ಭೂಮಿಯಿಂದ ಬಂದಿದ್ದಾರೆ. ಮೂರು ಸಾವಿರ ಮಠ ಮತ್ತು ಹಲವು ಸ್ವಾಮೀಜಿಗಳು, ಸಿದ್ಧಾರೂಢರು ಈ ನೆಲದ ಮೌಲ್ಯ ಹೆಚ್ಚಿಸಿದ್ದಾರೆ- ಅಮಿತ್ ಶಾ
   5:56 PM, 18 Jan
   ನಳಿನ್ ಕಟೀಲ್ ಅವರನ್ನು ನಳಿನ್ ಕೊಹ್ಲಿ ಎಂದು ಅಮಿತ್ ಶಾ ಸಂಭೋಧಿಸಿದರು. ಜೊತೆಗೆ ಸಂಸದರು, ಕೇಂದ್ರ ಸಚಿವರ ಹೆಸರು ಹೇಳಿ ಅವರ ಮೇಲೆ ಬಿಜೆಪಿಯನ್ನು ಕಟ್ಟುವ ಜವಾಬ್ದಾರಿ ಇದೆ ಎಂದರು. ರಾಜ್ಯದ ಸಚಿವರ ಹೆಸರನ್ನೂ ಅವರು ಸ್ಮರಿಸಿದರು.
   5:55 PM, 18 Jan
   ಅಮಿತ್ ಶಾ ಭಾಷಣ ಆರಂಭಿಸಿದ್ದು, ಸಿಎಎ ವಿರೋಧಿಗಳನ್ನು ವ್ಯಂಗ್ಯ ಮಾಡುವ ಮೂಲಕ ಭಾಷಣ ಆರಂಭಿಸಿದ್ದಾರೆ.
   5:53 PM, 18 Jan
   ಹುಬ್ಬಳ್ಳಿಯ ಸಮಾವೇಶಕ್ಕೆ ಅಮಿತ್ ಶಾ-ಯಡಿಯೂರಪ್ಪ ಆಗಮಿಸಿದ್ದು, ಕೆಲವೇ ನಿಮಿಷಗಳಲ್ಲಿ ಅಮಿತ್ ಶಾ ಭಾಷಣ ಆರಂಭ ಮಾಡಲಿದ್ದಾರೆ. ಯಡಿಯೂರಪ್ಪ ಅವರು ಚುಟುಕಾಗಿ ತಮ್ಮ ಭಾಷಣ ಮುಗಿಸಿದರು.
   4:04 PM, 18 Jan
   ತೇಜಸ್ವಿ ಸೂರ್ಯ ಕಚೇರಿ ಉದ್ಘಾಟನಾ ಕಾರ್ಯಕ್ರಮಕ್ಕೆ ಮಾಧ್ಯಮಗಳಿಗೆ ಪ್ರವೇಶ ನಿರಾಕರಿಸಲಾಗಿದೆ. ಗೃಹ ಸಚಿವರ ಭದ್ರತೆ ದೃಷ್ಟಿಯಿಂದಾಗಿ ಮಾಧ್ಯಮಗಳಿಗೆ ಪ್ರವೇಶ ನಿರಾಕರಿಸಲಾಗಿದೆ.
   4:01 PM, 18 Jan
   ಸಂಸದ ತೇಜಸ್ವಿ ಸೂರ್ಯ ಅವರ ನೂತನ ಕಚೇರಿಯನ್ನು ಗೃಹ ಸಚಿವ ಅಮಿತ್ ಶಾ ಉದ್ಘಾಟನೆ ಮಾಡಿದ್ದಾರೆ. ಅವರೊಂದಿಗೆ ಯಡಿಯೂರಪ್ಪ ಸಹ ಇದ್ದರು. ಸಚಿವರಾದ ಆರ್.ಅಶೋಕ್, ಸಿಟಿ ರವಿ ಇನ್ನೂ ಹಲವು ಸಚಿವರುಗಳು ಸ್ಥಳದಲ್ಲಿ ಹಾಜರಿದ್ದರು.
   3:43 PM, 18 Jan
   ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಮುಗಿಸಿ ಅಮಿತ್ ಶಾ ಅವರು ವಿದ್ಯಾಪೀಠ ಕ್ಕೆ ತೆರಳುತ್ತಿದ್ದು, ಪೇಜಾವರ ಶ್ರೀ ಗದ್ದುಗೆಗೆ ನಮನ ಸಲ್ಲಿಸಲಿ ನಂತರ ಅಲ್ಲಿಂದ ಜಯನಗರ 4 ನೇ ಬ್ಲಾಕ್‌ ನಲ್ಲಿರುವ ತೇಜಸ್ವಿ ಸೂರ್ಯ ಕಚೇರಿ ಉದ್ಘಾಟನೆಗೆ ತೆರಳಲಿದ್ದಾರೆ.
   2:24 PM, 18 Jan
   ಹುಬ್ಬಳ್ಳಿಯಲ್ಲಿ ಅಮಿತ್ ಶಾ ವಿರುದ್ಧ ಪ್ರತಿಭಟನೆ. 'ಅಮಿತ್ ಶಾ ಗೋ ಬ್ಯಾಕ್' ಘೋಷಣೆ. ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು.
   2:06 PM, 18 Jan
   ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. 1 ಕಿ.ಮೀ ದೂರದಿಂದ ಸೆರೆ ಹಿಡಿಯುವ ಕ್ಯಾಮರಾದಿಂದ ಕಣ್ಗಾವಲು ಇರಿಸಲಾಗುತ್ತಿದೆ.
   2:03 PM, 18 Jan
   ಹುಬ್ಬಳ್ಳಿಗೆ ಅಮಿತ್ ಶಾ ಆಗಮನದ ಹಿನ್ನೆಲೆ-ಪ್ರತಿಭಟನೆ ನಡೆಸಲು ಮುಂದಾದ ಎಸ್‌ಡಿಪಿಐ ಕಾರ್ಯಕರ್ತರನ್ನು ಬಂಧಿಸಲಾಗಿದೆ. 10ಕ್ಕೂ ಹೆಚ್ಚು ಕಾರ್ಯಕರ್ತರ ಬಂಧನವಾಗಿದೆ.
   1:53 PM, 18 Jan
   ಸಿದ್ದರಾಮಯ್ಯ ಅವರು ಟ್ವೀಟಿನ ಸುರಿಮಳೆ ಗೈದಿದ್ದಾರೆ. ಅವರು ಕೇಳುವ ಪ್ರಶ್ನೆಗಳಿಗೆಲ್ಲವೂ ಉತ್ತರ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ.
   1:52 PM, 18 Jan
   ಕೇಳಿದ್ದು 35 ಸಾವಿರ ಕೋಟಿ
   ಕೇವಲ ಸಾವಿರ ಕೋಟಿ ನೆರೆ ಹಾವಳಿ ಪರಿಹಾರ ನೀಡಿ ಕೈತೊಳೆದುಕೊಳ್ಳುತ್ತಿದ್ದೀರ ನಾವು ಕೇಳಿದ್ದು 35 ಸಾವಿರ ಕೋಟಿ ರೂ- ಸಿದ್ದರಾಮಯ್ಯ
   READ MORE

   ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಪೀಠ- ದೈವಜ್ಞ ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ ಉದ್ಯೋಗದಲ್ಲಿ ತೊಂದರೆ, ಮದುವೆ ವಿಳಂಬ, ಸತಿ- ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಶತ್ರು ಪೀಡೆ, ಅತ್ತೆ -ಸೊಸೆ ಕಲಹ, ಸಂತಾನ ಸಮಸ್ಯೆ, ಆರೋಗ್ಯ ಸಮಸ್ಯೆ, ರಾಜಕೀಯದಲ್ಲಿ ಶತ್ರುಗಳ ಕಾಟ, ಸಿನಿಮಾ ಪ್ರವೇಶ ಇನ್ನೂ ಯಾವುದೇ ಗುಪ್ತ ಸಮಸ್ಯೆಗೆ ಗುರೂಜಿ ಅವರನ್ನು ನೇರವಾಗಿ ಭೇಟಿಯಾಗಬಹುದು. ಗುರೂಜಿ ಅವರ ಸಲಹೆ ಮತ್ತು ಪರಿಹಾರ ಪಡೆದುಕೊಂಡಂಥ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ವಿಳಾಸ # 37, 4th block, ಜಯನಗರ, ಬೆಂಗಳೂರು- 9986623344

   English summary
   Central Home minister Amit Shah visits Karnataka. He will participate in several programs in Bengaluru and Hubli today.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X